ಪಾಟ್ನಾ, ಅ.12- ಹೆಣ್ಣುಬಾಕನೊಬ್ಬ ಮತ್ತೊಂದು ಮದುವೆಯಾಗಲು ಸಮ್ಮತಿ ನೀಡದ ಎರಡನೇ ಹೆಂಡತಿಯನ್ನು ಬೆಂಕಿ ಹಚ್ಚಿ ಕೊಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ತನ್ನ ಎರಡನೇ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಪಾಪಿಯನ್ನು ನಳಂದ ಜಿಲ್ಲೆಯ ವಿಕಾಸ್ ಕುಮಾರ್ ಹಾಗೂ ಗಂಡನ ಕ್ರೌರ್ಯಕ್ಕೆ ಬಲಿಯಾದ ಮಹಿಳೆಯನ್ನು ಸುನೀತಾ ಎಂದು ಗುರುತಿಸಲಾಗಿದೆ.
ಈತ ತನ್ನ ಗೆಳತಿಯನ್ನು ಮದುವೆಯಾಗಲು ಬಯಸಿದ್ದ, ಆದರೆ ಅವರ ಎರಡನೇ ಹೆಂಡತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕೋಪಗೊಂಡ ಆತ ಆಕೆಯ ಮೇಲೆ ಪೆಟ್ರೋಲ್ ಸುರಿದು, ಸಿಲಿಂಡರ್‌ನಿಂದ ಎಲ್‌ಪಿಜಿ ಸುರಿದು, ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕಾಸ್ ಕುಮಾರ್ ಐದು ವರ್ಷಗಳ ಹಿಂದೆ ಸುನೀತಾ ದೇವಿಯನ್ನು (25) ವಿವಾಹವಾಗಿದ್ದರು. ಇದಕ್ಕೂ ಮುನ್ನ ಆತ ಮತ್ತೊಂದು ಮದುವೆ ಮಾಡಿಕೊಂಡಿದ್ದ ವಿಚಾರ ಬಯಲಾಗಿತ್ತು. ಆದರೂ ಕುಟುಂಬದವರು ಪತಿಯೊಂದಿಗೆ ಜೀವನ ಸಾಗಿಸುವಂತೆ ಸುನೀತಾ ಅವರಿಗೆ ಬುದ್ದಿವಾದ ಹೇಳಿದರು.
ಹೀಗಾಗಿ ಸುನೀತಾ ಕುಮಾರ್‌ನೊಂದಿಗೆ ಜೀವನ ಸಾಗಿಸುತ್ತಿದ್ದರು. ಅವರಿಗೆ ಹುಟ್ಟಿದ ಇಬ್ಬರು ಮಕ್ಕಳು ಸ್ವಲ್ಪ ಸಮಯದ ನಂತರ ನಿಧನರಾದರು. ಇದಾದ ನಂತರ ಕುಮಾರ್ ತನ್ನ ಗೆಳತಿಯನ್ನು ಮದುವೆಯಾಗುವ ಬಗ್ಗೆ ಮಾತನಾಡಲು ಪ್ರಾರಂಭಿಸಿದಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ್ಗೆ ವಾದಗಳಿಗೆ ಕಾರಣವಾಯಿತು, ನಂತರ ಸುನೀತಾ ತಮ್ಮ ಪೋಷಕರೊಂದಿಗೆ ವಾಸಿಸಲು ನಿರ್ಧರಿಸಿದರು.
ಕಳೆದ ತಿಂಗಳು ಪ್ರಾರಂಭವಾದ ದುರ್ಗಾ ಪೂಜಾ ಹಬ್ಬಕ್ಕೆ ಮೊದಲು, ಕುಮಾರ್ ಸುನೀತಾಳ ಮನೆಗೆ ಹೋಗಿ ತನ್ನೊಂದಿಗೆ ಹಿಂತಿರುಗಲು ಕೇಳಿಕೊಂಡರು. ಮನೆಗೆ ಬಂದ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಸುನೀತಾ ಪೋಷಕರು ದೂರು ನೀಡಿದ್ದಾರೆ.ಕುಮಾರ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.