Tuesday, January 7, 2025
Homeಜಿಲ್ಲಾ ಸುದ್ದಿಗಳು | District Newsಕೋಲಾರ | Kolarಪತ್ನಿ ಇದ್ದರೂ ಮತ್ತೊಂದು ಮದುವೆಗೆ ಮುಂದಾದವನನ್ನು ಅಟ್ಟಾಡಿಸಿ ಹೊಡೆದು ಕೊಂದರು

ಪತ್ನಿ ಇದ್ದರೂ ಮತ್ತೊಂದು ಮದುವೆಗೆ ಮುಂದಾದವನನ್ನು ಅಟ್ಟಾಡಿಸಿ ಹೊಡೆದು ಕೊಂದರು

man who attempted to marry another woman was beaten to death

ಕೋಲಾರ,ಜ.5-ಮದುವೆಯಾಗಿ ಪತ್ನಿ ಇದ್ದರೂ ಮತ್ತೊಬ್ಬಳನ್ನು ವಿವಾಹವಾಗಲು ಮುಂದಾಗಿದ್ದ ವ್ಯಕ್ತಿಯನ್ನುಅಟ್ಟಾಡಿಸಿ ಮನಬಂದಂತೆ ದಳಿಸಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ.

ಉಸಾನ್‌ ಕಳೆದೆ ಐದು ವರ್ಷಗಳ ಹಿಂದೆ ಜಬೀನ್‌ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ.ಇತ್ತೀಚೆಗೆ ಆಕೆಗೆ ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು, ಈ ವೇಳೆ ಆರೋಗ್ಯ ವಿಚಾರಿಸಲು ಬಂದಿದ್ದ ಜಬೀನಾ ಸಂಬಂಧಿ ಯುವತಿಯೊಂದಿಗೆ ಉಸಾನ್‌ ಸಲುಗೆ ಬೆಳೆಸಿದ್ದ.

ಈ ವಿಷಯ ತಿಳಿದು ಜಬೀನ್‌ ಆಕ್ರೋಶಗೊಂಡು ಜಗಳವಾಡಿದ್ದರು ನಂತರ ಪತಿ ವಿರುದ್ಧ ಮಹಿಳಾ ಠಾಣೆಗೆ ದೂರು ತವರು ಮನೆ ಸೇರಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತಿ ಉಸಾನ್‌ ತನ್ನ ಪ್ರೇಯಸಿಯ ಮನೆಗೆ ತೆರಳಿ,ಕುಟುಂಬ ಸದಸ್ಯರ ಬಳಿ ಆಕೆಯನ್ನು ಮದುವೆ ಮಾಡಿಕೊಡುವಂತೆ ಏರುದನಿಯಲ್ಲಿ ಕೇಳಿದ್ದ ನಂತರ ಅಲ್ಲಿಂದ ಹೊರಟಾಗ ಆತನನ್ನು ಹಿಂಬಾಲಿಸಿ ನೂರ್‌ನಗರ ಬಳಿ ಹುಡುಗಿಯ ಮನೆಯವರು ಅಟ್ಟಾಡಿಸಿ ಬನಬಂದಂತೆ ಹೊಡೆದಿದ್ದಾರೆ.

ಆತ ಕುಸಿದು ಬಿದ್ದರೂ ಬಿಡದೆ ಸ್ಥಳೀಯರ ಜೊತೆಗೂಡಿ ತಿಳಿದು ರಸ್ತೆಬದಿ ಎಸೆದಿದ್ದಾರೆ,ಮಾಹಿತಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ದಾವಿಸಿ ತೀವ್ರವಾಗಿ ಗಾಯಗೊಂಡಿದ್ದ ಉಸಾನ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

ಮನೆ ಸಮೀಪವೇ ಮಧ್ಯರಾತ್ರಿ ಉಸಾನ್‌ ಹತ್ಯೆಯಾಗಿದ್ದು,ಸ್ಥಳೀಯರು ಬೆಚ್ಚಿಬಿದ್ದಿದ್ದರೆ.ಕೋಲಾರ ನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಮುಂದಿನ ತಿನಿಖೆ ಕೈಗೊಂಡಿದ್ದಾರೆ.

RELATED ARTICLES

Latest News