Monday, October 20, 2025
Homeಜಿಲ್ಲಾ ಸುದ್ದಿಗಳು | District Newsಮಂಡ್ಯ | Mandyaಮಂಡ್ಯ : ಮೂರು ಬಸ್‌‍ಗಳ ನಡುವೆ ಭೀಕರ ಅಪಘಾತ, ಇಬ್ಬರು ಮಹಿಳೆಯರು ಸಾವು

ಮಂಡ್ಯ : ಮೂರು ಬಸ್‌‍ಗಳ ನಡುವೆ ಭೀಕರ ಅಪಘಾತ, ಇಬ್ಬರು ಮಹಿಳೆಯರು ಸಾವು

Mandya: Two women die in horrific accident between three buses

ಮಂಡ್ಯ,ಅ.20-ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಸ್ಥೆ ಬಸ್‌‍ ಗಳ ನಡುವೆ ಭೀಕರ ಸರಣಿ ಅಪಘತ ಸಂಭವಿಸಿ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಸಂಜೆ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಕರಿಯನಪುರ ಮಹಾದೇವ ಎಂಬುವವರ ಪತ್ನಿ ನಾಗಮ(60) ಹಾಗೂ ಹಲಗಪುರ ಗ್ರಾಮದ ಬಸವಣ್ಣ ಎಂಬುವವರ ಪತ್ನಿ ರತ್ನಮ(46) ಸಾವನ್ನಪ್ಪಿದ್ದು, ಎಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಇವರಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಜಿಲ್ಲೆಯ ವಿವಿಧೆಡೆ ಆಸ್ಪತ್ರೆಗಳಿಗೆ ಹಾಗೂ ಉಳಿದ ಗಾಯಾಳುಗಳನ್ನು ಕೊಳ್ಳೇಗಾಲದ ಆಸ್ಪತ್ರೆಗಳಲ್ಲಿ ಚಿಕೆತ್ಸೆ ಕೊಡಿಸಿ ಮೈಸೂರಿಗೆ ರವಾನಿಸಲಾಗಿದೆ. ಇವರ ಪೈಕಿ ಇಬ್ಬರು ಬಸ್‌‍ ಚಾಲಕರು ಸೇರಿ ಎಂಟು ಜನರ ಸ್ಥಿತಿ ಚಿಂತಜನಕವಾಗಿದೆ ಎನ್ನಲಾಗಿದೆ.

ಘಟನೆ ವಿವರ: ನಿನ್ನೆ ಸಂಜೆ ಬಾಚನಹಳ್ಳಿ ಸಮೀಪ ಜೋರು ಮಳೆ ಬರುತ್ತಿದ್ದ ಸಂದರ್ಭದಲ್ಲಿ ಕೊಳ್ಳೆಗಾಲ ಕಡೆಯಿಂದ ಬರುತ್ತಿದ್ದ ಕೆಎಸ್‌‍ಆರ್‌ಟಿಸಿ ಬಸ್‌‍ನ ಚಾಲಕ ರಸ್ತೆಯ ತಿರುವಿನಲ್ಲಿ ಮುಂದೆ ಹೋಗುತ್ತಿದ್ದ ಬೈಕ್‌ ಹಿಂದಿಕ್ಕಲು ಏಕಾಏಕಿ ಮುನ್ನುಗ್ಗಿದಾಗ ಈ ವೇಳೆ ಎದುರಿನಿಂದ ಬರುತ್ತಿದ್ದ ಮತ್ತೊಂದು ಕೆಎಸ್‌‍ಆರ್‌ಟಿಸಿ ಬಸ್‌‍ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಈ ಬಸ್‌‍ ಹಿಂಬದಿ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್‌‍ ಕೂಡ ಚಾಲಕನ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಸಂಭವಿಸಿ ಅವಘಡ ಸಂಭವಿಸಿದೆ. ಬಸ್‌‍ಗಳ ಸರಣಿ ಅಪಘಾತದ ತೀವ್ರತೆಗೆ ಮೂರು ಬಸ್‌‍ಗಳು ನಜ್ಜುಗುಜ್ಜಾಗಿ ಬಸ್‌‍ ಗಳಲ್ಲಿದ್ದ ಬಹಳಷ್ಟು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯಿಂದ ಬಸ್‌‍ನ ಮೂವರು ಚಾಲಕರು ಗಾಯಗೊಂಡರೇ ಇಬ್ಬರು ಚಾಲಕರ ಸ್ಥಿತಿ ಗಂಭೀರವಾಗಿದೆ.ಬಸ್‌‍ ಗಳ ಅಪಘಾತದಿಂದ ಒಂದು ಗಂಟೆಗೂ ಹೆಚ್ಚು ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ತಾಲೂಕಿನ ಎಲ್ಲಾ ಠಾಣೆಗಳ ಪೊಲೀಸರು ದೌಡಾಯಿಸಿ ವಿವಿಧೆಗಳಿಂದ ಆಂಬ್ಯುಲ್ಸೆ್‌ ಮತ್ತು ರಸ್ತೆ ಮಾರ್ಗದಲ್ಲಿ ಬರುವ ವಾನಗಳಲ್ಲಿ ಗಾಯಾಳು ರೋಗಿಗಳನ್ನು ಪಟ್ಟಣದ ತಾಲೂಕು ಆಸ್ಪತ್ರೆಗೆ ಕಳುಹಿಸಿದರು.

ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡು ಬಸ್‌‍ ಗಳಲ್ಲಿ ಪ್ರಯಾಣ ಮಾಡುತ್ತಿದ್ದವರು ತಮವರೆ ಎಂಬ ವಿಷಯ ತಿಳಿಯಲು ಮುಗಿಬಿದ್ದರು. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್‌ ರವರು ರಜೆಯಲ್ಲಿದ್ದ ತಮ ವೈದ್ಯರ ತಂಡವನ್ನು ತುರ್ತಾಗಿ ಆಸ್ಪತ್ರೆಗೆ ಬರಮಾಡಿಕೊಂಡು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕರನ್ನು ಆಂಬ್ಯಲೆನ್ಸ್ ಗಳ ಮೂಲಕ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧೆಡೆ ಆಸ್ಪತ್ರೆಗಳಿಗೆ ಕಳುಹಿಸಲಾಯಿತು.

ಅಪಘಾತ ಸುದ್ದಿ ತಿಳಿದ ತಕ್ಷಣ ರಾಷ್ಟ್ರೀಯ ಹೆದ್ದಾರಿಯ ಸಿಬ್ಬಂದಿಗಳಾದ ರವಿಯವರ ತಂಡ ತಮ ಕ್ರೀನ್‌,ವೈದ್ಯಕೀಯ ಸಿಬ್ಬಂದಿ,ತುರ್ತು ವಾಹನಗಳೊಂದಿಗೆ ಸ್ಥಳಕ್ಕೆ ದಾವಿಸಿ ಸಮಯಕ್ಕೆ ಪೊಲೀಸರೊಂದಿಗೆ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದರು.ಆಸ್ಪತ್ರೆ ಮುಂದೆ ಜಮಾವಣೆಗೊಂಡಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

ಮಾನವೀಯತೆ ಮೆರೆದ ವೃತ್ತ ನಿರೀಕ್ಷಕ ಶ್ರೀಧರ್‌:
ಅಪಘಾತದ ತಿವ್ರತೆಗೆ ಘಾಸಿಗೊಂಡು ಗಾಯದಿಂದ ದುಃಖಿಸುತ್ತಾನಿಂತಿದ್ದ ಪುಟ್ಟ ಕಂದಮನನ್ನು ವೃತ್ತ ನಿರೀಕ್ಷಕ ಶ್ರೀಧರ್‌ ಅವರು ಸಂತೈಸಿ ತಮದೇ ವಾಹನದಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು.

ಅವರ ಸಮಯಪ್ರಜ್ಞೆ ಹಾಗೂ ಜನರನ್ನು ನಿಯಂತ್ರಿಸಿ ಹೆಚ್ಚಿನ ಸಾವುಗಳು ಸಂಭವಿಸದಂತೆ ತುರ್ತು ಚಿಕೆತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಲು ಶ್ರಮಿಸಿದ ಅವರ ಕಾರ್ಯಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಮಹಾಪೊರವೇ ಹರಿದು ಬಂತು. ಈ ಬಗ್ಗೆ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News