ಮಂಗಳೂರು,18- ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮಂಗಳೂರು ಹೊರವಲಯದ ಕಲ್ಲಾಪು ಬಳಿ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಯುವತಿ ಕಂಡುಬಂದಿದ್ದು ಮೈಮೇಲೆ ಗಾಯವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರ್ಯಾಚರಣೆ ನಡೆಸಿ ಉಳ್ಳಾಲ ಠಾಣಾ ಪೊಲೀಸರು ಮಿಥುನ್, ಪ್ರಭುರಾಜ್ ಹಾಗು ಮತ್ತೊಬ್ಬ ಶಂಕಿತ ಸೇರಿ ಮೂವರನ್ನು ಬಂಧಿಸಿದ್ದಾರೆ. ಡ್ರಾಪ್ ನೀಡುವ ನೆಪದಲ್ಲಿ ಆಟೋರಿಕ್ಷಾ ಚಾಲಕ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿ ಕೇರಳದ ಉಪ್ಪಳಕ್ಕೆ ಬಂದಿದ್ದ ಯುವತಿ, ಸ್ನೇಹಿತನ ಜೊತೆ ನಿನ್ನೆ ಮಂಗಳೂರಿಗೆ ಆಗಮಿಸಿದ್ದಳು. ಗಲಾಟೆ ನಡೆದು ಮಧ್ಯರಾತ್ರಿ ಮನೆಯಿಂದ ಒಬ್ಬಳೇ ಹೊರ ಬಂದಿದ್ದಾಳೆ.
ಈ ವೇಳೆ ಸಿಕ್ಕ ರಿಕ್ಷಾ ಚಾಲಕನ ಬಳಿ ಸಹಾಯ ಕೇಳಿದ್ದಾಳೆ. ಈ ವೇಳೆ ಆಟೋ ಚಾಲಕ ಹಾಗೂ ಇಬ್ಬರು ಸ್ನೇಹಿತರು ಅಮಲು ಪದಾರ್ಥ ನೀಡಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿರುವ ಅನುಮಾನ ವ್ಯಕ್ತವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಘಟನೆ ಸಂಬಂಧ ತನಿಖೆ ಮುಂದುವರಿಸಿದ್ದಾರೆ.