ಮಂಗಳೂರು,ಮೇ 23 – ಮದುವೆ ಸಂದರ್ಭದಲ್ಲಿ ಉಂಟಾದ ವೈಮನಸ್ಯದಲ್ಲಿ ವ್ಯಕ್ತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ನಗರ ಹೊರವಲಯದ ವಳಚ್ಚಿಲ್ ಬಳಿ ತಡರಾತ್ರಿ ನಡೆದಿದೆ. ವಾಮಂಜೂರು ನಿವಾಸಿ ಸುಲೇಮಾನ್ (50) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಈತನ ಸಂಬಂಧಿ ಮುಸ್ತಾಫ (30)ನನ್ನು ಪೊಲೀಸರು ಬಂಧಿಸಿದ್ದಾರೆ.
ಇದಲ್ಲದೆ ಸುಲೇಮಾನ್‌ನ ಇಬ್ಬರ ಪುತ್ರರಾದ ರಿಯಾಬ್, ಸಿಯಾಬ್ ಮೇಲೂ ಹಲ್ಲೆ ನಡೆಸಲಾಗಿದ್ದು, ಅವರನ್ನು ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಸ್ತಾಫ ಮದುವೆಯನ್ನು ಸುಲೇಮಾನ್ ಉಸ್ತುವಾರಿಯಲ್ಲಿ ಕಳೆದ 8 ತಂಗಳ ಹಿಂದೆ ನೆರವೇರಿಸಿದ್ದ.ಈ ವೇಳೆ ಸಣ್ಣ ವಿಷಯಕ್ಕೆ ಗಾಲಟೆ ನಡೆದಿತ್ತು ಕಾಲಕ್ರಮೇಣ ಮುಸ್ತಾಫ ದಂಪತ್ಯದಲ್ಲೂ ಬಿರುಕು ಮೂಡಿತ್ತು.
ಇದರಿಂದ ಕೋಪಗೊಂಡಿದ್ದ ಆರೋಪಿ ಮುಸ್ತಾಫ ನಿನ್ನಿಂದಲೇ ಇದಲ್ಲ ನಡೆದಿದೆ ಎಂದು ಹೇಳಿ ವೈಮನಸ್ಯ ಬೆಳಸಿಕೊಂಡಿದ್ದ. ಇದೇ ವಿಚಾರವಾಗಿ ಮುಸ್ತಫ ಜೊತೆ ಮಾತುಕತೆ ನಡೆಸಲು ತನ್ನ ಇಬ್ಬರು ಪುತ್ರರೊಂದಿಗೆ ಸುಲೇಮಾನ್ ಕಳೆದ ರಾತ್ರಿ ವಳಚ್ಚಿಲ್ ಬಂದಿದ್ದಾಗ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿದೆ.
ಏಕಾಏಕಿ ಮುಸ್ತಫ ಚೂರಿಯಿಂದ ಸುಲೇಮಾನ್‌ಗೆ ಹಲವು ಬಾರಿ ಇರಿದಿದ್ದಾನೆ.ಬಿಡಿಸಲು ಹೋದ ಅವರ ಮಕ್ಕಳ ಮೇಲೂ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸುಲೇಮಾನ್‌ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಳಿಸಿ ಆರೋಪಿ ಮುಸ್ತಫನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.