Thursday, December 12, 2024
Homeರಾಷ್ಟ್ರೀಯ | Nationalಮಣಿಪುರದಲ್ಲಿ ಮೂವರು ಉಗ್ರರ ಬಂಧನ

ಮಣಿಪುರದಲ್ಲಿ ಮೂವರು ಉಗ್ರರ ಬಂಧನ

Manipur police arrest 3 active members of proscribed group

ಇಂಫಾಲ್ (ಮಣಿಪುರ),ನ.30– ಎರಡು ನಿಷೇಧಿತ ಗುಂಪುಗಳಿಗೆ ಸೇರಿದ ಮೂವರು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆ ಮೂಲದ ಚೋಂಗ್ಥಮ್ ಶ್ಯಾಮಚಂದ್ರ ಸಿಂಗ್ (23), ಇಂಫಾಲ್ ಪೂರ್ವ ಜಿಲ್ಲೆಯ ಮೈಬಮ್ ಸೂರಜ್ ಖಾನ್ (32) ಮತ್ತು ಬೋಗಿಮಯುಮ್ ಸಾಹಿದ್ ಖಾನ್ (30) ಬಂಧಿತರು.

ಇವರಿಂದ 5.56ಎಂಎಂ ಐನ್ಸಸ್ ಲೈವ್ ಕಾರ್ಟ್ರಿಡ್‌್ಜ, ಪ್ರಕರಣದಲ್ಲಿ 32 ಮದ್ದುಗುಂಡು ಮತ್ತು ಮೂರು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತರು ಅಕ್ರಮವಾಗಿ ಶಸಾ್ತ್ರಸ್ತ್ರಗಳನ್ನು ಹೊಂದಿದ್ದು, ಜನರನ್ನು ಸುಲಿಗೆ ಮಾಡುತ್ತಿದ್ದರು. ಇವರು ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್) ಸಂಘಟನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ನಿಷೇಧಿತ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ನಿಂಗೋನ್ ಮಚಾ ಗುಂಪು)ಗೆ ಸೇರಿದ ಉಗ್ರನೊಬ್ಬನನ್ನು ಅಕ್ರಮ ಶಸಾ್ತ್ರಸ್ತ್ರಗಳನ್ನು ಹೊಂದಿದ್ದಕ್ಕಾಗಿ ಗುರುವಾರ ಬಂಧಿಸಲಾಗಿದೆ. ಬಂಧಿತ ತೌಬಲ್ ಜಿಲ್ಲೆಯ ಲಿಲಾಂಗ್ ಹೌರೂ ಸಂಗೊಂಶುಂಫಮ್ ವಾರಿಶ್ (25) ಎಂದು ಗುರುತಿಸಲಾಗಿದ್ದು, ಈತನಿಂದಲೂ 32 ಪಿಸ್ತೂಲ್ ಮತ್ತು ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ.

ಭದ್ರತಾ ಪಡೆ ಗುರುವಾರ ಕಾಂಗ್ಪೊಕ್ಪಿ ಜಿಲ್ಲೆಯ ಎಸ್ ಮೊಂಗ್ಪಿ ಪರ್ವತದಲ್ಲಿ ಪರಿಶೀಲನೆ ವೇಳೆ ಶಸಾ್ತ್ರಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. 303 ರೈಫಲ್, 9 ಎಂಎಂ ಪಿಸ್ತೂಲ್, ಎರಡು ಎಸ್ಬಿಬಿಎಲ್ ಗನ್, 5.56 ಎಂಎಂ ಐಎನ್ಎಸ್ಎಎಸ್ ಎಲ್ಎಂಜಿ ಮ್ಯಾಗಜೀನ್, ಎರಡು ಹ್ಯಾಂಡ್ ಗ್ರೆನೇಡ್ಗಳು, ಎರಡು ಡಿಟೋನೇಟರ್ಗಳು, 16 ಕಾಟ್ರಿಡ್‌್ಜಗಳು ಮತ್ತು ಮೂರು ಟಿಯರ್ ಸೋಕ್ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

RELATED ARTICLES

Latest News