Thursday, April 3, 2025
Homeರಾಷ್ಟ್ರೀಯ | Nationalಎಸ್‌‍ಐನನ್ನು ಗುಂಡಿಕ್ಕಿ ಕೊಂದ ಕಾನ್ಸ್‌ಟೇಬಲ್‌

ಎಸ್‌‍ಐನನ್ನು ಗುಂಡಿಕ್ಕಿ ಕೊಂದ ಕಾನ್ಸ್‌ಟೇಬಲ್‌

ಇಂಫಾಲ,ನ.3- ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರನ್ನು ಪೊಲೀಸ್‌‍ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಮಣಿಪುರದಲ್ಲಿ ನಡೆದಿದೆ. ಮಣಿಪುರ ಪೊಲೀಸ್‌‍ ಪೇದೆಯೊಬ್ಬರು ಮಾತಿನ ಚಕಮಕಿಯ ನಂತರ ತನ್ನ ಹಿರಿಯ ಸಹೋದ್ಯೋಗಿ, ಸಬ್‌ ಇನ್‌ಸ್ಪೆಕ್ಟರ್‌ ಶ್ರೇಣಿಯ ಪೊಲೀಸ್‌‍ ಅಧಿಕಾರಿಯ ಮೇಲೆ ಮಾರಣಾಂತಿಕವಾಗಿ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನ್‌್ಸಟೆಬಲ್‌ ಬಿಕ್ರಿಮ್‌ಜಿತ್‌ ಸಿಂಗ್‌ ಅವರಿಂದ ಕೊಲೆಯಾದ ಎಸ್‌‍ಐ ಅನ್ನು ಪಹಜಹಾನ್‌ ಎಂದು ಗುರುತಿಸಲಾಗಿದೆ.
ಮಣಿಪುರದ ಹಿಂಸಾಚಾರ ಪೀಡಿತ ಜಿರಿಬಾಮ್‌ ಜಿಲ್ಲೆಯಲ್ಲಿ ಇಬ್ಬರ ನಡುವೆ ಸಂಭವಿಸಿದ ಜಗಳದ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಹೆಚ್ಚಿನ ಭದ್ರತೆಯಲ್ಲಿರುವ ಪ್ರದೇಶವಾದ ಮೊಂಗ್‌ಬಂಗ್‌ ಗ್ರಾಮ ಪೊಲೀಸ್‌‍ ಪೋಸ್ಟ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಕ್ಷಣ ಆರೋಪಿ ಕಾನ್‌ಸ್ಟೆಬಲ್‌ನನ್ನು ಇತರ ಪೊಲೀಸರು ಬಂಧಿಸಿದ್ದಾರೆ. ಇಂಫಾಲ್‌ ಕಣಿವೆ ಮತ್ತು ಪಕ್ಕದ ಬೆಟ್ಟಗಳಲ್ಲಿ ಜನಾಂಗೀಯ ಹಿಂಸಾಚಾರದಿಂದ ಹೆಚ್ಚಾಗಿ ಅಸ್ಪಶ್ಯವಾಗಿದ್ದ ಜನಾಂಗೀಯ-ವೈವಿಧ್ಯತೆಯ ಜಿರಿಬಾಮ್‌‍, ಈ ವರ್ಷದ ಜೂನ್‌ನಲ್ಲಿ ಒಂದು ಸಮುದಾಯಕ್ಕೆ ಸೇರಿದ 59 ವರ್ಷದ ವ್ಯಕ್ತಿಯನ್ನು ಮತ್ತೊಂದು ಸಮುದಾಯದ ಉಗ್ರಗಾಮಿಗಳು ಹತ್ಯೆಗೈದ ನಂತರ ಹಿಂಸಾಚಾರ ಸ್ಫೋಟಗೊಂಡಿದೆ.
ಎರಡೂ ಕಡೆಯವರಿಂದ ಬೆಂಕಿ ಹಚ್ಚಿದ ಘಟನೆಗಳಿಂದ ಸಾವಿರಾರು ಜನರು ತಮ ಮನೆಗಳನ್ನು ತೊರೆದು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಬೇಕಾಯಿತು. ಅಂದಿನಿಂದ ಜಿಲ್ಲೆಯಲ್ಲಿ ಗುಂಪು ಘರ್ಷಣೆ ಮಾಮೂಲಾಗಿದೆ.

RELATED ARTICLES

Latest News