Sunday, September 29, 2024
Homeರಾಷ್ಟ್ರೀಯ | Nationalಮಣಿಪುರ : ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶ ಪಡಿಸಿಕೊಂಡ ಭದ್ರತಾ ಪಡೆಗಳು

ಮಣಿಪುರ : ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶ ಪಡಿಸಿಕೊಂಡ ಭದ್ರತಾ ಪಡೆಗಳು

Manipur: Security forces recover arms, explosives

ಇಂಫಾಲ, ಸೆ 27-ಮಣಿಪುರದ ಕಾಂಗ್ಪೋಕ್ಪಿ ಮತ್ತು ಚುರಾಚಂದ್ಪುರ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸಂಗ್ರಹವನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪುರ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಕಳೆದ ರಾತ್ರಿ ಕಾಂಗ್ಪೋಕ್ಪಿ ಜಿಲ್ಲೆಯ ಹರಾಥೆಲ್ ಮತ್ತು ಲ್ಯಾಂಬಂಗ್ ಬೆಟ್ಟದ ತುದಿಗಳಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸುಧಾರಿತ ಪ್ರೊಜೆಕ್ಟೈಲ್ ಲಾಂಚರ್ (ಪಂಪಿ), 11 ಬಳಕೆಯಾಗದ ಬಾಂಬ್ಗಳು, ಸುಮಾರು 1.5 ಕೆಜಿ ತೂಕದ 10 ಖಾಲಿ ಶೆಲ್ ಕೇಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುರಾಚಂದ್ಪುರ ಜಿಲ್ಲೆಯ ಸುವಾಂಗ್ಡೈನಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಪೊಲೀಸರು ಮತ್ತು ಅಸ್ಸಾಂ ರೈಫಲ್‌್ಸನ ತಂಡವು ಮನೆಯಲ್ಲಿ ತಯಾರಿಸಿದ 9 ಎಂಎಂ ಪಿಸ್ತೂಲ್ ಮತ್ತು ಸಿಂಗಲ್ ಬ್ಯಾರೆಲ್ ಶಾಟ್ಗನ್ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಇದಲ್ಲದೆ ಮ್ಯಾನಾರ್ ಕರೆನ್ಸಿ, ಬುಲೆಟ್ ಪ್ರೂಫ್ ಜಾಕೆಟ್ ಮತ್ತು ಮರೆಮಾಚುವ ಸಮವಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಇದಲ್ಲದೆ ಇತ್ತೀಚೆಗೆ ಅಸ್ಸಾಂ ರೈಫಲ್‌್ಸ ಪಡೆಗಳು ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ತೌಬಲ್ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಂಡವು. ಸಲಾಮ್ ಪಟಾಂಗ್ ಗ್ರಾಮದಲ್ಲಿ ಐಇಡಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

RELATED ARTICLES

Latest News