ಹೊಸದಿಲ್ಲಿ, ಜು.28- ಖಾದಿ ಗ್ರಾಮೋದ್ಯೋಗದ ವ್ಯವಹಾರ ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ, ಖಾದಿ ಮತ್ತು ಕೈಮಗ್ಗದ ವಸ್ತುಗಳ ಮಾರಾಟ ಹೆಚ್ಚಳದಿಂದ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮನ್ ಕಿ ಬಾತ್ ಮಾಸಿಕ ರೇಡಿಯೋ ಪ್ರಸಾರದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲು ಖಾದಿ ಉತ್ಪನ್ನಗಳನ್ನು ಬಳಸದಿದ್ದ ಅನೇಕ ಜನರು ಈಗ ಬಹಳ ಹೆಮೆಯಿಂದ ಖಾದಿ ಧರಿಸುತ್ತಾರೆ ಎಂದು ಹೇಳಿದರು.
ಖಾದಿಯ ಮಾರಾಟವು ಶೇ.400ರಷ್ಟು ಹೆಚ್ಚಾಗಿದೆ. ಹೆಚ್ಚಾಗಿ ಮಹಿಳೆಯರು ಈ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದಾರೆ. ಲಾಭ ಪಡೆಯುತ್ತಿದ್ದಾರೆ. ನೀವು ಇಲ್ಲಿಯವರೆಗೆ ಖಾದಿ ಬಟ್ಟೆಗಳನ್ನು ಖರೀದಿಸದಿದ್ದರೆ ಅವುಗಳನ್ನು ಖರೀದಿಸಲು ಪ್ರಾರಂಭಿಸಿ ಎಂದು ಮೋದಿ ಹೇಳಿದರು. ಪ್ಯಾರಿಸ್ ಒಲಿಂಪಿಕ್‌್ಸನ ಆರಂಭದೊಂದಿಗೆ ಕ್ರೀಡಾಕೂಟಗಳು ನಮ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಅವಕಾಶ ದೊರೆತಿದೆ. ಅವರನ್ನು ಪ್ರೋತ್ಸಾಹಿಸಲು ಭಾರತಕ್ಕಾಗಿ ಚಿಯರ್ ಮಾಡಲು ಜನರನ್ನು ಒತ್ತಾಯಿಸುವುದಾಗಿ ಹೇಳಿದರು.
ಇತ್ತೀಚೆಗೆ ನಡೆದ ಗಣಿತ ಒಲಂಪಿಯಾಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಕೆಲವು ದಿನಗಳ ಹಿಂದೆ, ಗಣಿತ ಜಗತ್ತಿನಲ್ಲಿ ಒಲಿಂಪಿಕ್‌್ಸ ನಡೆಯಿತು. ಅದು ಅಂತರರಾಷ್ಟ್ರೀಯ ಗಣಿತ ಒಲಂಪಿಯಾಡ್ ಆಗಿತ್ತು. ಅದರಲ್ಲಿ ಭಾರತೀಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ನಮ ತಂಡವು ನಾಲ್ಕು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದಿದೆ ಎಂದು ಮೋದಿ ಪ್ರಶಂಸಿದರು.
ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಅಸ್ಸಾಂನ ಸಾರಕಗಳನ್ನು ಸೇರಿಸಿರುವುದನ್ನು ಶ್ಲಾಘಿಸಿದ ಪ್ರಧಾನಿ, ಇದು ಪ್ರತಿಯೊಬ್ಬ ಭಾರತೀಯನಿಗೂ ಸಂತೋಷದ ವಿಷಯವಾಗಿದೆ ಎಂದರು. ಅದಮ್ಯ ಧೈರ್ಯ ಮತ್ತು ಶೌರ್ಯದ ಪ್ರತೀಕವಾದ ಮಹಾನ್ ಅಹೋಮ್ ಯೋಧ ಲಚಿತ್ ಬೊರ್ಫುಕನ್ ಅವರ ಅತಿ ಎತ್ತರದ ಪ್ರತಿಮೆಯನ್ನು ಅವರು ಅನಾವರಣಗೊಳಿಸಿದರು.