ಬೆಂಗಳೂರು,ಜ.13- ರಾಮೇಶ್ವರಂ ಕೆಫೆಯ ಸ್ಫೋಟದಂತೆ ನಗರದಾದ್ಯಂತ ಬಾಂಬ್ ಸ್ಫೋಟ ಮಾಡಲಾಗುತ್ತದೆ ಎಂದು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಆರೋಪಿಯನ್ನು ವಿಧಾನ ಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಾಜಿ ನಗರದ ಮನ್ಸೂರ್(40) ಬಂಧಿತ ಆರೋಪಿ.
ಇತ್ತೀಚೆಗೆ ನಗರದ ಪೊಲೀಸ್ ಕಂಟ್ರೋಲ್ ರೂಂಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಸ್ಫೋಟದಂತೆ ನಗರದಾದ್ಯಂತ ಬಾಂಬ್ ಸ್ಫೋಟ ಮಾಡಲಾಗು ತ್ತದೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದ ವಿಧಾನಸೌಧ ಠಾಣೆ ಪೊಲೀಸರು ಕರೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ತಾನು ನಡೆಸುತ್ತಿದ್ದ ಪ್ರಾವಿಜನ್ ಸ್ಟೋರ್ಯನ್ನು ಬೇರೆಯವರು ತೆಗೆದುಕೊಂಡಿದ್ದರು. ಹಾಗಾಗಿ ಆತನನ್ನು ಎದುರಿಸಲು ಈ ರೀತಿ ಮಾಡಿದೆನೆಂದು ಆರೋಪಿ ವಿಚಾರಣೆ ವೇಳೆ ಪೊಲೀಸರ ಮುಂದೆ ಹೇಳಿದ್ದಾನೆ. ಆರೋಪಿಯ ಹಿನ್ನಲೆ ಹಾಗೂ ಆತನ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.