Friday, January 31, 2025
Homeರಾಷ್ಟ್ರೀಯ | Nationalಮಹಾಕುಂಭದ ಕಾಲ್ತುಳಿತದಲ್ಲಿ ರಾಜ್ಯದ ಹಲವರು ನಾಪತ್ತೆ

ಮಹಾಕುಂಭದ ಕಾಲ್ತುಳಿತದಲ್ಲಿ ರಾಜ್ಯದ ಹಲವರು ನಾಪತ್ತೆ

Many from the Karnataka go missing in the Mahakumbh stampede

ಪ್ರಯಾಗ್ರಾಜ್,ಜ.29- ಗಂಗಾನದಿ ತ್ರಿವೇಣಿ ಸಂಗಮದಲ್ಲಿ ಮೌನಿ ಅಮವಾಸ್ಯೆಯಂದು ಸ್ನಾನ ಮಾಡಲು ದೂರದ ಉತ್ತರಪ್ರದೇಶದಲ್ಲಿರುವ ಪ್ರಯಾಗ್ರಾಜ್ಗೆ ತೆರಳಿದ್ದ ಕರ್ನಾಟಕದ ಹಲವು ಭಕ್ತರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯಿಂದ ಪ್ರಯಾಗ್ರಾಜ್ಗೆ ತೆರಳಿದ್ದ ಹಲವು ಮಂದಿ ಕಾಲ್ತುಳಿತದಿಂದ ನಾಪತ್ತೆಯಾಗಿದು ಇವರನ್ನುಪತ್ತೆ ಮಾಡುವುದೇ ಬಹುದೊಡ್ಡ ಸಮಸ್ಯೆ ಯಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಬೆಳಗಾವಿಯಿಂದ ಪ್ರಯಾಗ್ರಾಜ್ಗೆ ಒಟ್ಟು 60 ಮಂದಿ ಕುಂಭಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಬುಧವಾರ ತ್ರಿವೇಣಿ ಸಂಗಮದಲ್ಲಿ ಮೌನಿ ಅಮವಾಸ್ಯೆ ದಿನದಂದು ಎಲ್ಲರೂ ಪವಿತ್ರ ಸ್ನಾನ ಮುಗಿಸಿ ಹಿಂತಿರುಗಲು ತೀರ್ಮಾನಿಸಿದ್ದರು.

60 ಮಂದಿಯಲ್ಲಿ ತಲಾ 6 ಜನರಂತೆ 10 ಗುಂಪನ್ನು ವಿಂಗಡಣೆ ಮಾಡಲಾಗಿತ್ತು. ಇದಕ್ಕಿದ್ದಂತೆ ಮಧ್ಯರಾತ್ರಿ ಸ್ನಾನ ಮಾಡಲು ಘಾಟ್ಗೆ ತೆರಳುತ್ತಿದ್ದ ವೇಳೆ ಏಕಾಏಕಿ ನೂಕುನುಗ್ಗಲು ಉಂಟಾಗಿದೆ.ಕೆಲವರು ಸ್ಥಳದಲ್ಲಿ ಹಾಕಿದ್ದ ಬ್ಯಾರಿಕೇಡ್ಗಳನ್ನು ತಳ್ಳಿ, ಅವುಗಳನ್ನು ಮುರಿದು ಸ್ನಾನ ಮಾಡಲು ಮುನ್ನುಗ್ಗಿದ ವೇಳೆ ಕಾಲ್ತುಳಿತ ಉಂಟಾಗಿದೆ.

ಈ ಸಂದರ್ಭದಲ್ಲಿ ಏಕಾಏಕಿ ಚೀರಾಟ, ಕೂಗಾಟ, ತಳ್ಳಾಟ ಉಂಟಾದ ಪರಿಣಾಮ ಯಾರು ಎಲ್ಲಿ ಹೋದರೂ ಎಂಬುದೇ ಗೊತ್ತಾಗಿಲ್ಲ. ಬೆಳಗಾವಿಯಿಂದ ತೆರಳಿದ್ದ 60 ಜನರು ತಮ ಪ್ರಾಣ ರಕ್ಷಣೆಗಾಗಿ ಬೇರೊಂದು ಕಡೆಗೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಯಾಗ್ರಾಜ್ನಲ್ಲಿ ಮೌನಿ ಅಮ್ಯವಾಸೆ ದಿನದಂದು 10-15 ಕೋಟಿ ಜನರು ಜಮಾಯಿಸಿದ್ದು, ನಾಪತ್ತೆಯಾಗಿರುವವರನ್ನು ಪತ್ತೆ ಮಾಡುವುದೇ ಸವಾಲಾಗಿದೆ.

ಉತ್ತರಪ್ರದೇಶ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದ್ದು, ವಿವಿಧ ರಾಜ್ಯಗಳಿಂದ ಆಗಮಿಸಿರುವ ಭಕ್ತರ ಬಗ್ಗೆ ಮಾಹಿತಿ ಪಡೆಯಲು ಮೊಬೈಲ್ ಸಂಖ್ಯೆ, ಅವರ ಹೆಸರು, ವಿಳಾಸ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಪ್ರಯಾಗ್ರಾಜ್ ಜಿಲ್ಲಾಧಿಕಾರಿಗಳ ಜೊತೆ ಬೆಳಗಾವಿ ಜಿಲ್ಲಾಧಿಕಾರಿ ದೂರವಾಣಿ ಮೂಲಕ ಮಾತನಾಡಿದ್ದು, ನಾಪತ್ತೆಯಾಗಿರುವವರ ಪೂರ್ಣ ವಿಳಾಸವನ್ನು ನೀಡಿ ಪತ್ತೆಗಾಗಿ ಮನವಿ ಮಾಡಿದ್ದಾರೆ.

RELATED ARTICLES

Latest News