ಬೆಂಗಳೂರು,ಅ.4- ತಾನೇ ಪರಿಚಯಿಸಿದ ಸ್ನೇಹಿತೆ ತನ್ನ ಪ್ರಿಯಕರನ ಜೊತೆ ಪಲ್ಲಂಗದಲ್ಲಿರುವುದನ್ನು ಕಂಡು ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆತಹತ್ಯೆ ಮಾಡಿಕೊಂಡಿರುವ ಗೃಹಿಣಿಯನ್ನು ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದ ಯಶೋಧಾ (38) ಎಂದು ಗುರುತಿಸಲಾಗಿದೆ.ಯಶೋಧಾ ಇಬ್ಬರು ಮಕ್ಕಳಿದ್ದರೂ ಆಡಿಟರ್ ವಿಶ್ವನಾಥ್ ಎಂಬುವವರ ಜೊತೆಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದರು ಎನ್ನಲಾಗಿದೆ. ಆಡಿಟರ್ ಜೊತೆಗೆ ಸ್ನೇಹ ಹೊಂದಿರುವ ಬಗ್ಗೆ ಯಶೋಧಾ ತನ್ನ ಜೀವದ ಗೆಳತಿಗೆ ತಿಳಿಸಿ ಆಕೆಯನ್ನು ಆಡಿಟರ್ಗೆ ಪರಿಚಯ ಮಾಡಿಸಿದ್ದಳು.
ತದನಂತರ ಯಶೋಧಾ ಅವರಿಂದ ಆಡಿಟರ್ ವಿಶ್ವನಾಥ್ ಅಂತರ ಕಾಯ್ದುಕೊಂಡಿದ್ದ. ಇದರಿಂದ ಅನುಮಾನಗೊಂಡ ಯಶೋಧಾಳಿಗೆ ತಾನೇ ಪರಿಚಯ ಮಾಡಿಸಿದ ಸ್ನೇಹಿತೆಯೇ ಆಡಿಟರ್ ಜೊತೆಗೆ ಸಂಬಂಧವಿರಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಮೊನ್ನೆ ರಾತ್ರಿ ವಿಶ್ವನಾಥ್ ಹಾಗೂ ತನ್ನ ಸ್ನೇಹಿತೆ ಹೌಸಿಂಗ್ ಬೋರ್ಡ್ನಲ್ಲಿರುವ ಲಾಡ್್ಜವೊಂದಕ್ಕೆ ಹೋಗಿರುವ ಬಗ್ಗೆ ಯಶೋಧಾಗೆ ಗೊತ್ತಾದ ತಕ್ಷಣ ಲಾಡ್್ಜ ಗೆ ತೆರಳಿ ಆಕೆ ನೋಡಿದಾಗ ಇಬ್ಬರು ಒಟ್ಟಿಗೆ ಇರುವುದು ಕಂಡು ಅಲ್ಲೇ ಗಲಾಟೆ ಮಾಡಿದ್ದರು.ನಂತರ ಆಡಿಟರ್ ಮತ್ತು ಸ್ನೇಹಿತೆ ತಂಗಿದ್ದ ರೂಮ್ ಪಕ್ಕದಲ್ಲೇ ಮತ್ತೊಂದು ರೂಮ್ ಬುಕ್ ಮಾಡಿದ್ದ ಯಶೋಧಾ ಅದೇ ರೂಮ್ನಲ್ಲಿ ಫ್ಯಾನಿಗೆ ವೇಲ್ನಿಂದ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.
ಕೆಲ ಸಮಯದ ಬಳಿಕ ವಿಶ್ವನಾಥ್ಗೆ ಮೊಬೈಲ್ ಕರೆ ಬಂದಿದೆ. ಆತ ರೂಮ್ನಿಂದ ಹೊರಗೆ ಬಂದು ಮಾತನಾಡುತ್ತಾ, ಪಕ್ಕದ ರೂಮ್ನ ಬಾಗಿಲು ತಳ್ಳಿ ನೋಡಿದಾಗ ಯಶೋಧಾ ಆತಹತ್ಯೆ ಮಾಡಿಕೊಂಡಿರುವುದು ಗಮನಿಸಿ ನೇಣಿನಿಂದ ಆಕೆಯನ್ನು ಕೆಳಗೆ ಇಳಿಸಿ ಲಾಡ್್ಜ ಮುಖ್ಯಸ್ಥರಿಗೆ ವಿಷಯ ತಿಳಿಸಿದ್ದಾರೆ.
ಲಾಡ್್ಜ ಸಿಬ್ಬಂದಿ ಬಂದು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಾಗಡಿ ರಸ್ತೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಶೋಧಾ ಅವರ ಪತಿ ವಿಷಯ ತಿಳಿದು ಪತ್ನಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.