ಬೆಂಗಳೂರು,ಜು.20- ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ ಯುವಕನಿಗೆ ಬುದ್ದಿ ಹೇಳಲು ಹೋದ ವ್ಯಕ್ತಿಯ ಕತ್ತು ಸೀಳಿ ಕೊಲೆಗೆ ಪ್ರಯತ್ನಿಸಿರುವ ಘಟನೆ ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿರುವ ಪ್ರಶಾಂತ್ ಎಂಬುವವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ ಎಎಲ್ ನಿವಾಸಿ 24 ವರ್ಷದ ವಿವಾಹಿತ ಮಹಿಳೆಗೆ ಇನ್ನಾ ಗ್ರಾಮ್‌ನಲ್ಲಿ ತಮಿಳುನಾಡಿನ ತಿರಪುತ್ತೂರು ಮೂಲದ ಯುವಕ ಸೆಲ್ವ ಕಾರ್ತಿಕ್ (26) ಪರಿಚಯವಾಗಿದ್ದನು. ಪರಸ್ಪರ ಸಂದೇಶ ರವಾನೆ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡಿದ್ದರು. ಈ ನಡುವೆ ಸೆಲ್ವ ಕಾರ್ತಿಕ್ ತನ್ನನ್ನು ಮದುವೆಯಾಗುವಂತೆ ಮಹಿಳೆಗೆ ಪೀಡಿಸುತ್ತಿದ್ದನಂತೆ . ಇದರಿಂದ ಮಾನಸಿಕ ಒತ್ತಡಕ್ಕೊಳಗಾದ ಮಹಿಳೆ ಆ ಯುವಕನಿಗೆ ಕೆಲವು ಬಾರಿ ತಿಳಿಹೇಳಿದ್ದಾರೆ. ಆದರೂ ಆತ ಮಹಿಳೆಗೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ವಿಷಯವನ್ನು ತನ್ನ ತಂದೆ ಶೇಖರ್ ಅವರಿಗೆ ತಿಳಿಸಿದ್ದಾರೆ.
ಕಳೆದ 17ರಂದು ಶೇಖರ್ ಅವರು ತನ್ನ ಅಣ್ಣನ ಮಗ ಪ್ರಶಾಂತ್ ಅವರನ್ನು ಕರೆದುಕೊಂಡು ಸೆಲ್ವ ಕಾರ್ತಿಕ್‌ಗೆ ಬುದ್ದಿ ಹೇಳಲು ಮಗಳ ಮನೆಯ ಸಮೀಪ ಬೇಡ, ಬೇರೆ ಕಡೆ ಹೋಗೋಣ ಎಂದು ಹೇಳಿ ಒಂದೇ ಬೈಕ್‌ನಲ್ಲಿ ಮೂವರು ಹೋಗುತ್ತಿದ್ದರು.
ಶೇಖರ್ ಅವರು ಬೈಕ್ ಚಾಲನೆ ಮಾಡುತ್ತಿದ್ದು, ಅವರ ಅಣ್ಣನ ಮಗ ಪ್ರಶಾಂತ್ ಮಧ್ಯ ಕುಳಿತಿದ್ದರು. ಹಿಂದೆ ಕುಳಿತಿದ್ದ ಆರೋಪಿ ಸೆಲ್ವ ಕಾರ್ತಿಕ್ ಮಾರ್ಗ ಮಧ್ಯೆ ಪ್ರಶಾಂತ್ ಕುತ್ತಿಗೆ ಕುಯ್ದು ಪರಾರಿಯಾಗಿದ್ದನು.
ತೀವ್ರ ಗಾಯಗೊಂಡಿದ್ದ ಪ್ರಶಾಂತ್‌ನನ್ನು ಶೇಖರ್ ಅವರು ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿ, ಘಟನೆಯ ಬಗ್ಗೆ ಹೆಚ್ ಎ ಎಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಹೆಚ್ ಎ ಎಲ್ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿ ಸೆಲ್ವ ಕಾರ್ತಿಕ್‌ನ್ನು ಕಾರ್ತಿಕ್‌ನನ್ನು ಬಂಽಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
- ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ
- ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಹೊಣೆ : ಸಿಎಂ ಸ್ಪಷ್ಟನೆ
- ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್ ಸೂಚನೆ
- ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರ ಮದುವೆ : ಹಿಮಾಚಲದಲ್ಲಿ ಮರುಜೀವ ಪಡೆದ ಬಹುಪತಿತ್ವ