Monday, March 31, 2025
Homeಅಂತಾರಾಷ್ಟ್ರೀಯ | InternationalBREAKING : ಮ್ಯಾನ್ಮಾರ್‌-ಥೈಲ್ಯಾಂಡ್‌ನಲ್ಲಿ 7.7 ತೀವ್ರತೆಯ ವಿಧ್ವಂಸಕ ಭೂಕಂಪ, ಧರೆಗುರುಳಿದ ಕಟ್ಟಗಳು..!

BREAKING : ಮ್ಯಾನ್ಮಾರ್‌-ಥೈಲ್ಯಾಂಡ್‌ನಲ್ಲಿ 7.7 ತೀವ್ರತೆಯ ವಿಧ್ವಂಸಕ ಭೂಕಂಪ, ಧರೆಗುರುಳಿದ ಕಟ್ಟಗಳು..!

Massive 7.7 magnitude earthquake strikes Thailand, tremors felt in Myanmar

ಬ್ಯಾಂಕಾಕ್, ಮಾ.28- ದ್ವೀಪ ರಾಷ್ಟ್ರ ಥೈಲ್ಯಾಂಡ್‌ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಭೂಕಂಪನದಲ್ಲಿ ಹಲವರು ಬಲಿಯಾಗಿದ್ದಾರೆ. ರಿಕ್ಟರ್ ಮಾಪನದಲ್ಲಿ 7.7 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಹಲವಾರು ಗಗನ ಚುಂಬಿ ಕಟ್ಟಡಗಳು, ಮನೆಗಳು ನೆಲೆಕ್ಕುರುಳಿವೆ. ಭೀತಿಗೊಂಡ ಜನರು ದಿಕ್ಕಾಪಾಲಾಗಿ ಓಡುತ್ತಿದ್ದು, ಹಲವು ರಸ್ತೆಗಳು ಬಿರುಕು ಬಿಟ್ಟಿವೆ.

ಮ್ಯಾನ್ಮಾರ್‌ನಲ್ಲೂ ಭೂಕಂಪದ ಅನುಭವವಾಗಿದ್ದು, ಜನರು ಮನೆಯಿಂದ ಹೊರಗೋಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ಬ್ಯಾಂಕಾಂಕ್ ನಲ್ಲಿ ಹಿಂದೆಂದೂ ಕಾಣದಂತಹ ಭೀಕರ ಭೂಕಂಪನ ಸಂಭವಿಸಿದ್ದು, ಕಟ್ಟಡಗಳು ಉರುಳು ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಮಾನ, ರೈಲು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ರಕ್ಷಣಾ ಕಾರ್ಯಕರ್ತರು ತುರ್ತು ಕಾರ್ಯಚರಣೆ ಕೈಗೊಂಡಿದ್ದು, ರಾಜಧಾನಿ ಬ್ಯಾಂಕಾಕ್‌ನಲ್ಲಿ ಹಲವಾರು ಸಾವು- ನೋವುಗಳು ಸಂಭವಿಸಿವೆ.

ಕ್ಷಣಕ್ಷಣಕ್ಕೂ ಭೂಮಿ ಕಂಪನ ಉಂಟಾಗುತ್ತಿದ್ದು, ಸಮುದ್ರದಲ್ಲೂ ಕೂಡ ಸುನಾಮಿ ಏಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮ್ಯಾನ್ಮಾರ್‌ನಲ್ಲೂ ಹಲವಾರು ಕಟ್ಟಡಗಳು ನೆಲಕ್ಕುರುಳಿದ್ದು, ಅದರಡಿ ಸಿಲುಕಿ ಜನರು ಹೊರಬರಲಾಗದೇ ಕೊನೆಯುಸಿರೆಳೆದ ಘಟನೆಗಳು ನಡೆದಿದೆ. ಕೆಲವರು ಕುಟುಂಬ ಸದಸ್ಯರು ನೆರವಿಗೆ ಧಾವಿಸಿದ್ದಾರೆ.

ನದಿಗಳು ಹಾಗೂ ಸಮುದ್ರದ ಬಳಿ ಕಟ್ಟಲಾಗಿದ್ದ ಸೇತುವೆಗಳು ಕೂಡ ಮುರಿದುಬಿದ್ದಿದ್ದು, ವಿನಾಶಕಾರಿ ಭೂಕಂಪ ದ್ವೀಪ ರಾಷ್ಟ್ರವನ್ನು ದಂಗು ಬಡಿಸಿದೆ. ಮ್ಯಾನ್ಮಾರ್‌ನಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಜರ್ಮನ್‌ನ ಭೂಗರ್ಭ ಶಾಸ್ತ್ರ ಇಲಾಖೆ ವರದಿ ಮಾಡಿದೆ.

RELATED ARTICLES

Latest News