ಪಣಜಿ, ಮಾ. 21: ದಕ್ಷಿಣ ಗೋವಾ(Goa)ದ ಖಾಸಗಿ ಸಣ್ಣ ಕ್ಯಾಲಿಬರ್ ಮದ್ದುಗುಂಡು ಕಾರ್ಖಾನೆಗಾಗಿ ಸ್ಫೋಟಕಗಳನ್ನು ಸಂಗ್ರಹಿಸಿದ್ದ ಗೋದಾಮಿ(warehouse)ನಲ್ಲಿ ಭಾರಿ ಸ್ಫೋಟ ಸಂಭವಿಸಿದೆ, ಅದರೆ, ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ತಡರಾತ್ರಿ 10.30 ರ ಸುಮಾರಿಗೆ ನಕ್ಷೆರಿ-ಬೆತುಲ್ ಪ್ರದೇಶದ ಸೌಲಭ್ಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಯಾರೂ ಗಾಯಗೊಂಡಿಲ್ಲ. ಇದು ಬೆಂಕಿಗೂ ಕಾರಣವಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ ಎರಡು ಗಂಟೆಗಳಲ್ಲಿ ಬೆಂಕಿ ಹರಡುವುದನ್ನು ನಿಯಂತ್ರಿಸಿದವು ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ಜಿಲ್ಲಾಧಿಕಾರಿ ಎಗ್ನಾ ಕ್ಲೀಟಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಲಿದ್ದಾರೆ ಎಂದು ಹೇಳಿದರು.
ಘಟನೆಗೆ ಕಾರಣವನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಕ್ಲೀಟಸ್ ಹೇಳಿದರು.ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿದ ಕೆಪೆಮ್ ಶಾಸಕ ಆಲೋನ್ ಡಿ ಕೋಸ್ಟಾ, ಸ್ಫೋಟವು ಎಷ್ಟು ಪ್ರಬಲವಾಗಿದೆಯೆಂದರೆ ನಕ್ಷೆರಿ-ಬೆತುಲ್ ಗ್ರಾಮದ ಹಲವಾರು ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಸ್ಫೋಟದ ಶಬ್ದದಿಂದಾಗಿ, ಸ್ಥಳೀಯರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿಹೋದರು. ಸ್ಫೋಟದಿಂದ ಉಂಟಾದ ಬೆಂಕಿಯನ್ನು ಕೆನಕೋನಾ ತಾಲ್ಲೂಕಿನ ಅಗೊಂಡಾ ಬೀಚ್ ನಲ್ಲಿಯೂ ಕಂಡುಬಂತು ಎನ್ನಲಾಗಿದೆ.