Saturday, December 28, 2024
Homeರಾಷ್ಟ್ರೀಯ | Nationalವಕ್ಫ್ ಬೋರ್ಡ್‌ನಲ್ಲಿ ಭಾರೀ ಪೆಟ್ರೋಲ್ ಗೋಲ್ಮಾಲ್ : ಯತ್ನಾಳ್ ಆರೋಪ

ವಕ್ಫ್ ಬೋರ್ಡ್‌ನಲ್ಲಿ ಭಾರೀ ಪೆಟ್ರೋಲ್ ಗೋಲ್ಮಾಲ್ : ಯತ್ನಾಳ್ ಆರೋಪ

Massive petrol scam in Waqf Board: Yatnal

ಬೆಂಗಳೂರು,ಡಿ.27– ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಬೋರ್ಡ್ನಲ್ಲಿ ಮನಬಂದಂತೆ ಪೆಟ್ರೋಲ್ ಇಂಡೆಂಟ್ಗಳನ್ನು ಬಳಸಿಕೊಂಡು ಸರ್ಕಾರಿ ವಾಹನ ಚಾಲಕರು ಹಾಗೂ ಪೆಟ್ರೋಲ್ ಸರ್ವಿಸ್ ಸ್ಟೇಷನ್ಗಳಿಂದ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಈ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಸರ್ಕಾರದ ಎಲ್ಲ ಇಲಾಖೆಗಳಿಗೂ ಇಂಧನ ಮಿತಿ ಮಾರ್ಗಸೂಚಿ ಹೊರಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ ತೆರಿಗೆ ಹಣವನ್ನು ಅತ್ಯಂತ ಜವಾಬ್ದಾರಿಯುತವಾಗಿ, ರಾಜ್ಯದ ಕಲ್ಯಾಣಕ್ಕೆ, ಅಭಿವೃದ್ಧಿ ಕಾರ್ಯಗಳಿಗೆ, ಉದ್ಯೋಗ ಸೃಜನೆ, ಮೂಲಸೌಕರ್ಯ ಅಭಿವೃದ್ಧಿ, ಬಡವರ, ರೈತರ ಶ್ರೇಯೋಭಿವೃದ್ಧಿಗೆ, ಮಹಿಳಾ ಸಬಲೀಕರಣ ಉಪಯೋಗಿಸಬೇಕು. ಆದರೆ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಬೋರ್ಡ್ನಲ್ಲಿ ಮನಬಂದಂತೆ ಪೆಟ್ರೋಲ್ ಇಂಡೆಂಟ್ಗಳನ್ನು ಬಳಸಿಕೊಂಡು ಪೆಟ್ರೋಲ್ ಸರ್ವಿಸ್ ಸ್ಟೇಷನ್ಗಳು ಹಾಗೂ ಸರ್ಕಾರಿ ವಾಹನ ಚಾಲಕರು ದೊಡ್ಡ ಭ್ರಷ್ಟಾಚಾರ ಎಸಗಿದ್ದಾರೆ.

ಕಾರಿಗೆ ಪೆಟ್ರೋಲ್ ಹಾಕಿಸುವಾಗ ಸಂಬಂಧಪಟ್ಟ ಇಲಾಖೆಯ ಮೊಹರು ಇರಬೇಕು ಹಾಗೂ ಇಲಾಖೆಯ ಮುಖ್ಯಸ್ಥರ ಸಹಿ ಇರಬೇಕು. ಆದರೆ ಅಲ್ಪಸಂಖ್ಯಾತ, ಹಜ್ ಮತ್ತು ವಕ್ಫ್ ಬೋರ್ಡ್ನಲ್ಲಿ ಕಾರ್ಯದರ್ಶಿಗಳಾದ ಮನೋಜ್ಕುಮಾರ್ ಅವರ ವಾಹನ ಸಂಖ್ಯೆ ಕೆಎ 01 ಜಿಬಿ 9990ಗೆ ಯಾವುದೇ ಇಂಡೆಂಟ್ಗಳು ಇಲ್ಲದಿದ್ದರೂ ಪೆಟ್ರೋಲ್ ತುಂಬಿಸಿದ್ದನ್ನು ಮಾಧ್ಯಮಗಳು ದಾಖಲೆ ಸಮೇತ ಬಯಲು ಮಾಡಿವೆ.

ಕೇವಲ ಐದು ತಿಂಗಳಲ್ಲಿ ಈ ವಾಹನಕ್ಕೆ 390 ಲೀಟರ್ ಪೆಟ್ರೋಲ್ ತುಂಬಿಸಲಾಗಿದೆ. ಚಾಲಕ ಮಹೇಶ್.ಎನ್ ಎಂಬುವವರು 2023 ಡಿಸೆಂಬರ್, 2024 ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಮೇ ತಿಂಗಳ ಇಂಧನನಿಂದ ಬಿಲ್ಗಳಲ್ಲಿ ವ್ಯತ್ಯಯ ಆಗಿರುವುದು ಗೊತ್ತಾಗಿದೆ. ಈ ಸಂಬಂಧ ಮಾಧ್ಯಮವೊಂದು ಬಿಡುಗಡೆ ಮಾಡಿರುವ ದಾಖಲೆಯನ್ನೂ ಸಹ ಯತ್ನಾಳ್ ತಮ ಪತ್ರದಲ್ಲಿ ಲಗ್ಗತ್ತಿಸಿದ್ದಾರೆ.

ಬೋರ್ಡ್ಗಳ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರಿಗೆ ಒದಗಿಸಿರುವ ವಾಹನಗಳಿಗೆ ದಿನಂಪ್ರತಿ ಇಷ್ಟೇ ಪ್ರಮಾಣದಲ್ಲಿ ಪೆಟ್ರೋಲ್ ಹಾಕಿಸಬೇಕೆಂದು ಯಾವುದೇ ನಿಯಮ ಅಥವಾ ಮಿತಿ ಇರುವುದಿಲ್ಲ. ತಾವು ಕೂಡಲೇ ಪ್ರಧಾನ ಕಾರ್ಯದರ್ಶಿಗಳೂ ಸೇರಿ ಸರ್ಕಾರದ ವಾಹನ ಬಳಸುವ ಎಲ್ಲರಿಗೂ ಇಂಧನವನ್ನು ಬಳಸಲು ಒಂದು ಮಾರ್ಗಸೂಚಿಯನ್ನು ಸರ್ಕಾರದ ವತಿಯಿಂದ ಹೊರಡಿಸಬೇಕು ಹಾಗೂ ಮೂರು ತಿಂಗಳಿಗೊಮೆ ವಾಹನ ಕ್ರಮಿಸಿರುವ ಕಿಲೋಮೀಟರ್ ಮತ್ತು ಉಪಯೋಗಿಸಿರುವ ಇಂಧನವನ್ನು ಅಡಿಟ್ ಮಾಡಿಸಬೇಕು. ಈ ಮೂಲಕ ದುರುಪಯೋಗ ಮಾಡಿಕೊಳ್ಳುವುದನ್ನು ತಪ್ಪಿಸಬಹುದು ಎಂದು ಅವರು ಮನವಿ ಮಾಡಿದ್ದಾರೆ.

ತಾವು ಸರ್ಕಾರದ ಎಲ್ಲ ಇಲಾಖೆಗಳಿಗೂ ನೀಡಿರುವ ವಾಹನಗಳಿಗೆ ಇಂಧನ ನೀತಿ ಮಾರ್ಗಸೂಚಿಯನ್ನು ಪರಿಚಯಿಸಿ ಸರ್ಕಾರದ ಹಣವನ್ನು ಕೆಲ ಪಟ್ಟಭದ್ರರು, ಭ್ರಷ್ಟ ನೌಕರರು, ಚಾಲಕರು ದುರುಪಯೋಗ ಮಾಡಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕೆಂದು ಯತ್ನಾಳ್ ಪತ್ರದಲ್ಲಿ ಕೋರಿದ್ದಾರೆ.

RELATED ARTICLES

Latest News