ಬೆಂಗಳೂರು,ಏ.18– ಕೇಂದ್ರ ಸರ್ಕಾರ ವಕ್ಫ್ ಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಮಂಗಳೂರಿನಲ್ಲಿಂದು ಹಮ್ಮಿಕೊಂಡಿರುವ ಭಾರೀ ಪ್ರತಿಭಟನೆಗೆ ಅಧಿಕಾರಿಗಳೂ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
ಇಬ್ಬರು ಡಿಐಜಿ, ಐದು ಮಂದಿ ಎಸ್ಪಿಗಳು ಸೇರಿದಂತೆ ಕಿರಿಯ ಅಧಿಕಾರಿಗಳು ಬಂದೋಬಸ್‌ನಲ್ಲಿದ್ದಾರೆ. ಸ್ಥಳೀಯ ಪೊಲೀಸರ ಜೊತೆಗೆ 25 ಕೆಎಸ್‌ಆರ್‌ಪಿ ತುಕಡಿಯನ್ನು ಬಂದೋಬಸ್‌ಗೆ ನಿಯೋಜಿಸಲಾಗಿದ್ದು, ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದಾರೆ.
ಮಂಗಳೂರು ನಗರದ ಆಡ್ಯಾರ್ ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ಇಂದು ಸಂಜೆ ಪ್ರತಿಭಟನೆ ನಡೆಯಲಿದೆ. ಉಲೇಮಾ ಸಮನ್ವಯ ಸಮಿತಿ ಈ ಪ್ರತಿಭಟನೆಗೆ ಕರೆನೀಡಿದೆ. ಪ್ರತಿಭಟನಾ ಸಭೆಯಲ್ಲಿ ಇಸ್ಲಾಂ ಧರ್ಮದ ಧರ್ಮ ಗುರುಗಳು, ಧಾರ್ಮಿಕ ಮುಖಂಡರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಬಹುತೇಕ ಮುಸ್ಲಿಂಮರು ಪಾಲ್ಗೊಳ್ಳಲಿದ್ದಾರೆ.