Thursday, May 2, 2024
Homeರಾಷ್ಟ್ರೀಯಮಥುರಾದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದು ನಿಷೇಧ

ಮಥುರಾದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದು ನಿಷೇಧ

ಮಥುರಾ(ಯುಪಿ), ನ.5- ದೀಪಾವಳಿ ಹಿನ್ನಲೆಯಲ್ಲಿ ಕೃಷ್ಣ ಜನ್ಮಸ್ಥಾನ ದೇವಸ್ಥಾನ ಮತ್ತು ಪಕ್ಕದ ಶಾಹಿ ಈದ್ಗಾ ಮಸೀದಿಯ ಸುತ್ತಮುತ್ತಲಿನ ಕೆಂಪು ಮತ್ತು ಹಳದಿ ವಲಯಗಳಲ್ಲಿ ಪಟಾಕಿ ಸಂಗ್ರಹ, ಮಾರಾಟ ಮತ್ತು ಸಿಡಿಸುವುದನ್ನು ನಿಷೇಸಲಾಗಿದೆ ಎಂದು ಮಥುರಾ ಜಿಲ್ಲಾಡಳಿತ ತಿಳಿಸಿದೆ.

ಎರಡೂ ದೇವಾಲಯಗಳು 13.37 ಎಕರೆ ಪ್ರದೇಶದಲ್ಲಿ ಕೆಂಪು ವಲಯದಲ್ಲಿವೆ. ಆದರೆ ಅದರ ಹೊರಗೆ 20 ಎಕರೆ ಪ್ರದೇಶವು ಗೋವಿಂದನಗರ ಮತ್ತು ಜಗನ್ನಾಥಪುರಿ ಮುಂತಾದ ಪ್ರದೇಶಗಳನ್ನು ಒಳಗೊಂಡಿರುವ ಹಳದಿ ವಲಯವಾಗಿದೆ. ನಗರದ ಉಳಿದ ಭಾಗಗಳನ್ನು ಹಸಿರು ವಲಯ ಎಂದು ಗುರುತಿಸಲಾಗಿದೆ.

ಸಿಎಂ ಕುರ್ಚಿ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಡಿಕೆಶಿ

ಕೃಷ್ಣ ಜನ್ಮಸ್ಥಾನ ಮತ್ತು ಶಾಹಿ ಈದ್ಗಾ ಭದ್ರತೆಯ ದೃಷ್ಟಿಯಿಂದ ಹಿಂದಿನ ವರ್ಷದಂತೆ ಈ ವರ್ಷವೂ ದೇವಾಲಯ ಮತ್ತು ಮಸೀದಿಯ ಕೆಂಪು ಮತ್ತು ಹಳದಿ ವಲಯಗಳಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗುವುದಿಲ್ಲ ಎಂದು ನಗರ ಮ್ಯಾಜಿಸ್ಟ್ರೇಟ್ ಕಚೇರಿ ತಿಳಿಸಿದೆ.

ದೀಪಾವಳಿ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಮತ್ತು ದೀಪಾವಳಿ ನಂತರವೂ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು.

RELATED ARTICLES

Latest News