ರಿಯಾದ್, ಮೇ.14- ತಮ್ಮನ್ನು ಶಾಂತಿಸ್ಥಾಪಕ ಎಂದು ಕರೆದುಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಶಮನಕ್ಕೆ ತಾನೇ ಕಾರಣ ಎಂದು ಹೇಳಿಕೊಂಡಿದ್ದು, ಉಭಯ ದೇಶಗಳು ಒಟ್ಟಿಗೆ ಊಟ ಮಾಡಬೇಕು ಎಂದು ಮತ್ತೊಂದು ಪುಕ್ಕಟೆ ಸಲಹೆ ಕೊಟ್ಟಿದ್ದಾರೆ.
ಅಣ್ವಸ್ತ್ರ ಶಕ್ತ ನೆರೆಯ ರಾಷ್ಟ್ರಗಳು ತಮ್ಮ ನಡುವಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಹಾಗೂ ವಾಕಿಸ್ತಾನ ಭೋಜನಕೂಟ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ಭಾರತದಲ್ಲಿ ಭಾರಿ! ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿಂದೆ ಕಾಶ್ಮೀರದ ಮಧ್ಯಸ್ಥಿಕೆ ವಹಿಸುತ್ತೇನೆ ಎಂದಾಗ್ಯೂ ಭಾರತದ ರಾಜಕೀಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಸೌದಿ ಅರೇಬಿಯಾ ದೊರೆ ಮುಹಮ್ಮದ್ ಬಿನ್ ಸಲ್ಮನ್, ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತಿತರ ಗಣ್ಯರು ಪಾಲ್ಗೊಂಡಿದ್ದ ಅಮೆರಿಕ-ಸೌದಿ ಹೂಡಿಕೆ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲಕ್ಷಾಂತರ ಮಂದಿಯನ್ನು ಬಲಿ ಪಡೆಯುವ ಸಾಧ್ಯತೆ ಇದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಅಣ್ವಸ್ಥ ಸಮರವನ್ನು ತಪ್ಪಿಸಲು ತಮ್ಮ ಆಡಳಿತ ಮಧ್ಯಸ್ಥಿಕೆ ವಹಿಸಿ ಶಾಂತಿ ಸ್ಥಾಪಿಸಲು ನೆರವಾಗಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಅಮೆರಿಕ ನೇತೃತ್ವದ ಶಾಂತಿಸ್ಥಾಪನೆ ಮಾತುಕತೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ವಾಸ್ತವವಾಗಿ ಅಮೆರಿಕ ಜೊತೆ ಸಹಕರಿಸಿದೆ. ಅವರು ವಾಸ್ತವವಾಗಿ ಜೊತೆ ಸೇರಿದ್ದಾರೆ ಎನ್ನುವುದು ನನ್ನ ಭಾವನೆ. ಅವರು ಹೊರಬಂದು ಒಳ್ಳೆಯ ಭೋಜನಕೂಟ ನಡೆಸಿದರೆ ಅವರು ಇನ್ನಷ್ಟು ಹತ್ತಿರವಾಗಬಹುದು. ಅದು ಒಳ್ಳೆಯದಲ್ಲವೇ? ಎಂದು ಮಧ್ಯಪ್ರಾಚ್ಯ ದೇಶಗಳಿಗೆ ಮೂರು ದಿನಗಳ ಭೇಟಿ ನೀಡಿರುವ ಟ್ರಂಪ್ ಪ್ರಶ್ನಿಸಿದರು.
ಅಮೆರಿಕದ ಶಾಂತಿ ಮಾತುಕತೆಯಿಂದಾಗಿ ಹೊಸ ದಿಲ್ಲಿ ಹಾಗೂ ಇಸ್ಲಮಾಬಾದ್ ಜೊತೆಯಾಗುತ್ತಿದ್ದಾರೆ. ನನ್ನ ಪ್ರಕಾರ ಅವರು ಜೊತೆಯಾಗುತ್ತಿದ್ದಾರೆ. ಬಹುಷ ನಾವು ಇನ್ನಷ್ಟು ಅವರನ್ನು ಒಂದು ಮಾಡಬಹುದು. ಮಾರ್ಕೋ ಅವರು ಜೊತೆಗೆ ಹೊರಗೆ ಹೋಗಿ ಊಟ ಮಾಡಿದರೆ ಚೆನ್ನಾಗಿರುತ್ತೆ ಅಲ್ವಾ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನು ಈ ಸಮಸ್ಯೆ ಬಗೆಯಹರಿಸಲು ನಾನು ವ್ಯಾಪಾರವನ್ನು ಬಳಸಿಕೊಂಡಿದ್ದೇನೆ. ಬನ್ನಿ ಒಪ್ಪಂದ ಮಾಡಿಕೊಳ್ಳೋಣ ಮತ್ತಷ್ಟು ವ್ಯಾಪಾರಕ್ಕೆ ಎಂದು ಆಹ್ವಾನ ಕೊಟ್ಟಿದ್ದಾರೆ. ಇನ್ನು ಪರಮಾಣು ಕ್ಷಿಪಣಿಗಳ ವ್ಯಾಪಾರ ಮಾಡುವುದು ಬೇಡ, ನೀವು ಸುಂದವಾಗಿ ತಯಾರಿಸುವ ವಸ್ತುಗಳ ವ್ಯಾಪಾರ ಮಾಡಿ, ಉಭಯ ದೇಶಗಳ ನಾಯಕರು ಶಕ್ತಿಶಾಲಿಗಳು, ಒಳ್ಳೆಯವರು ಮತ್ತು ಬುದ್ದಿವಂತರು. ಎಲ್ಲವೂ ನಿಂತುಹೋಗಿ ಒಳ್ಳೆಯದೇ ಆಯಿತು. ಅದು ಹಾಗೆಯೇ ಇರಲಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ರೂಬಿಯೊ, ವ್ಯಾನ್ಸ್ ಮತ್ತು ಶಾಂತಿ ಮಾತುಕತೆಯಲ್ಲಿ ಭಾಗವಹಿಸಿದ ಇತರರನ್ನು ಟ್ರಂಪ್ ಇದೇ ಸಂದರ್ಭದಲ್ಲಿ ಹೊಗಳಿ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ನಾವು ಬಹಳ ದೂರ ಬಂದಿದ್ದೇವೆ. ಸಣ್ಣದಾಗಿ ಪ್ರಾರಂಭವಾಗಿ ಬಹಳ ದೊಡ್ಡದಾಗಿ ಬೆಳೆಯುತ್ತಿದ್ದ ಸಂಘರ್ಷದಿಂದ ಲಕ್ಷಾಂತರ ಜನರು ಸಾಯುತ್ತಿದ್ದರು ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್‌ಗೆ ಭಾರತ ಸ್ಪಷ್ಟ ಸಂದೇಶ :
ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನತೆಯ ಮಧ್ಯೆ ಕಾಶ್ಮೀರದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯವು ಮಂಗಳವಾರ ಕಾಶ್ಮೀರದ ವಿಚಾರದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದು, ವಿದೇಶಾಂಗ ಸಚಿವಾಲಯದ ವಕ್ತಾರ ರಣರ್ಧೀ ಜೈಸ್ವಾಲ್ ಮಾತನಾಡಿ, ಕಾಶ್ಮೀರದಲ್ಲಿ ಯಾರ ಮಧ್ಯಸ್ಥಿಕೆಯನ್ನೂ ಭಾರತ ಸ್ವೀಕರಿಸುವುದಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಯ ಮಾತ್ರ ಎಂದು ಗುಡುಗಿದ್ದಾರೆ. ಇದರೊಂದಿಗೆ ಟ್ರಂಪ್ ಬಿಲ್ಡಪ್ ಗೆ ಶಾಕ್ ಕೊಟ್ಟಿದ್ದಾರೆ.
ಆಪರೇಷನ್ ಸಿಂದೂರ್ ಯಶಸ್ವಿ ಬಳಿಕ ಮಧ್ಯ ಪ್ರವೇಶಿಸಿದ್ದ ಟ್ರಂಪ್ ಸಂರ್ಘವನ್ನು ಕೈಬಿಡುವಂತೆ ಹೇಳಿದ್ದರು. ಇದನ್ನೇ ದೊಡ್ಡದಾಗಿ ಹೇಳಿಕೊಂಡಿರುವ ದೊಡ್ಡಣ್ಣ, ಪರಮಾಣು ಸಂಘರ್ಷವನ್ನು ನಾವು ತಡೆದಿದ್ದೇವೆ. ಪರಮಾಣು ಯುದ್ಧ ನಡೆದು ಲಕ್ಷಾಂತರ ಜನರು ಸಾವನ್ನಪ್ಪುವ ಸಾಧ್ಯತೆ ಇರುವುದಾಗಿ ನನಗೆ ಅನಿಸಿತು. ಹಾಗಾಗಿ ಅದರ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಬಿಕ್ಕಟ್ಟನ್ನು ಶಮನಗೊಳಿಸುವಲ್ಲಿ ಅಮೆರಿಕದ ರಾಜತಾಂತ್ರಿಕ ಪ್ರಯತ್ನಗಳು ನಿರ್ಣಾಯಕ ಪಾತ್ರ ವಹಿಸಿವೆ ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮನ್ನು ತಾವು ಹೊಗಳಿಕೊಂಡು ಬೆನ್ನು ತಟ್ಟಿಕೊಂಡಿದ್ದರು.
ಡೊನಾಲ್ಡ್ ಟ್ರಂಪ್ ಈ ರೀತಿ ವಿಶ್ವದ ಮುಂದೆ ಬಡಾಯಿ ಕೊಚ್ಚಿಕೊಂಡಿರುವುದು ಇದೇನು ಮೊದಲಲ್ಲ, ಈ ಹಿಂದೆಯೂ ಪೊಳ್ಳು ಮಾತುಗಳಿಂದ ತಮ್ಮಷ್ಟಕ್ಕೆ ತಾವೇ ಫುಲ್ ಕ್ರೆಡಿಟ್ ತೆಗೆದುಕೊಂಡಿದ್ದರು. 2019ರ ಜುಲೈ 22ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಪ್ರವೇಶಿಸಿ ಟ್ರಂಪ್ ದೊಡ್ಡ ಬಡಾಯಿ ಕೊಚ್ಚಿಕೊಂಡಿದ್ದರು. ಆದ್ರೆ, ಇದಾದ ಒಂದೇ ವಾರಕ್ಕೆ ಮೋದಿ ಸರ್ಕಾರ, ಕಾಶ್ಮೀರ 370ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಹಿಂತೆಗೆದುಕೊಳ್ಳುವ ಐತಿಹಾಸಿಕ ತೀರ್ಮಾನ ಕೈಗೊಂಡಿತ್ತು. ಇದರೊಂದಿಗೆ ಬಿಸಿಯಲ್ಲಿ ಚಳಿ ಕಾಯಿಸಿಕೊಳ್ಳಲು ಬಂದಿದ್ದ ಟ್ರಂಪ್ ಗೆ ಮೋದಿ ಸರ್ಕಾರ ಶಾಕ್ ಕೊಟ್ಟಿತ್ತು.