ಹುಬ್ಬಳ್ಳಿ, ಜೂ.14- ಪೋಕ್ಸೋ ಪ್ರಕ್ರರಣ ಅತ್ಯಂತ ಸೂಕ್ಷ ಹಾಗೂ ಗಂಭೀರವಾಗಿದ್ದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ಇದರಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಏನಾದರೂ ಅಹಿತಕರ ಘಟನೆಗಳು ನಡೆದರೆ ಇದು ಪೋಕ್ಸೋ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಯಾವುದೇ ಸರ್ಕಾರ ಹಾಗೂ ಪಕ್ಷ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಪೊಲೀಸರು ತನ್ನದೇ ಆದ ತನಿಖೆಯನ್ನು ಮಾಡತ್ತಾರೆ ಎಂದರು.
ಚಿತ್ರದುರ್ಗ ಮುರುಘಾಶರಣರ ಮೇಲೆ ಪೋಕ್ಸೋ ಕಾಯ್ದೆ ಮೇಲೆ ಬಂಧನ ಮಾಡಿದ್ದು ಏನಾಯಿತು ಗೊತ್ತು. ಹೀಗಾಗಿ ಪೋಕ್ಸೋ ಕಾಯ್ದೆ ಹಿನ್ನೆಲೆಯಲ್ಲಿ ನ್ಯಾಯಾಲಯ ಬಂಧನದ ವಾರಂಟ್ ಜಾರಿ ಮಾಡಿದೆ. ಕೋರ್ಟ್ ನಿರ್ದೇಶನ ಮೇರೆಗೆ ಪೊಲೀಸರು ದೂರು ದಾಖಲು ಮಾಡಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.ಇನ್ನು ನಟ ದರ್ಶನ ಬಂಧನ ಕುರಿತು ಮಾತನಾಡಿದ ಅವರು, ದರ್ಶನ ಆರೋಪಿ ಆಗಿದ್ದು ಆರೋಪಿನೇ ಎಂದರು.
ಸಚಿವ ಕೆ.ಎನ್.ರಾಜಣ್ಣ ಮೂರು ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿ ಮಾಡಬೇಕು ಎನ್ನುವ ಕುರಿತು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಪಕ್ಷದ ಆಂತರಿಕ ವಿಚಾರವಾಗಿದ್ದು ಪಕ್ಷದ ವೇದಿಕೆಯಲ್ಲಿ ಮಾತನಾಡುವೆ ಎಂದರು.ಇನ್ನು ಲೋಕಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಸೋಲಾಗಿದ್ದು, ಕೆಲವರು ತೆಲೆದಂಡ ಆಗುತ್ತದೆ ಎಂಬ ವಿಚಾರ ಕೇವಲ ಊಹಾಪೋಹವಷ್ಟೇ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಉರುಳುತ್ತದೇ ಎಂಬ ವಿಚಾರ ಕುರಿತು ಸಹ ಮಾತನಾಡಿದ ಅವರು, ಮೊದಲು ಅವರು ಮಹಾರಾಷ್ಟ್ರ ಸರ್ಕಾರ ಉಳಿಸಿಕೊಳ್ಳಲಿ ಎಂದರು. ನಮವರೇ ಕೇಂದ್ರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿದ್ದು ಕೆಲವು ಬೇಡಿಕೆಗಳನ್ನು ಶೀಘ್ರವಾಗಿ ಸಲ್ಲಿಸಲಾಗುತ್ತದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.