ಭಾನುವಾರದ ಬಾಡೂಟಕ್ಕೆ ಖರಿದಿ ಭರಾಟೆ ಜೋರು

ಬೆಂಗಳೂರು.ಮೇ.23. ಕಠಿಣ ಲಾಕ್ ಡೌನ್ ಬೆರೆ ಇನ್ನೆರಡು ವಾರ ಏನ್ ಸಿಗುತ್ತೋ ಸಿಗಲ್ವೋ ಗೊತ್ತಿಲ್ಲ ಇಂದು ಮಾತ್ರ ಭಾನುವಾರದ ಬಾಡೂಟಕ್ಕಾಗಿ ಜನರು ಮಾತ್ರ ಮಾಂಸದಂಗಡಿಗಳಿಗೆ ಮುಗಿಬಿದ್ದಿದ್ದರು. ನಗರದ ಬಹುತೇಕ ಮಾಂಸ.ಮೀನು ಮಾರಾಟ ಅಂಗಡಿಗಳ ಮುಂಬಾಗ ಖರಿದಿಗಾಗಿ ಜನರು ಮುಂಜಾನೆಯೆ ಸರದಿ ಸಾಲಿನಲ್ಲಿ ನಿಂತು ಕುರಿ.ಕೋಳಿ.ಮೆಕೆ.ಮೀನು ಖರಿದಿಸಿದ್ರು.

10 ಗಂಟೆ ನಂತರ ಅಂಗಡಿಗಳು ಬಂದ್ ಆಗಲಿರುವ ಹಿನ್ನಲೆಯಲ್ಲಿ ಜನರು ಮಾತ್ರ ನಾ ಮುಂದು ತಾ ಮುಂದು ಎಂಬತೆ ಖರಿದಿಯಲ್ಲಿ ನಿರತರಾಗಿದ್ದರು.ನೆನ್ನೆ ಬೆರೆ ಪೊಲಿಸರು ಅನಗತ್ಯವಾಗಿ ಒಡಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಕಾರಣ ಹೇಳಲಾಗುವುದಿಲ್ಲ ಎಂದು ಕೆಲವರು ಇಂದೆ ಅಗತ್ಯ ವಸ್ತು ಹಾಗೂ ಮಾಂಸ ಖರಿದಿಯಲ್ಲಿ ತೊಡಗಿದ್ದರು.

ಮಾಮೂಲಿಯಂತೆ ನಗರದ ಶಿವಾಜಿನಗರ.ಮೈಸೂರು ರಸ್ತೆ. ಉಲ್ಲಾಳ ಮುಖ್ಯರಸ್ತೆ.ಮೂಡಲ ಪಾಳ್ಯ.  ವಿಜಯನಗರ, ಮಲ್ಲೆಶ್ವರಂ, ಜಯನಗರ.ಸೆರಿದಂತೆ ಬಹುತೆಕ ಕಡೆ ಜನರು ಮಾಂಸಕ್ಕಾಗಿ ಮುಗಿ ಬಿದ್ದಿದ್ದರು.ಕೆಲ ಅಂಗಡಿಗಳ ಮುಂದೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಂತಿದ್ದರು ಅಲ್ಲಲ್ಲಿ ಪೊಲಿಸರು ಅಂತರ ಕಾಪಾಡಿ ಎಂದು ಪದೆ ಪದೆ ಹೆಳುತ್ತಲೆ ಇದ್ದರು ಆದರೆ ಜನರು ಮಾತ್ರ ಯಾವೂದಕ್ಕೂ ಕ್ಯಾರೆ ಅನ್ನದೆ ಖರಿದಿಯಲ್ಲಿ ತಲ್ಲಿನರಾಗಿದ್ದರು.

ದಿನಸಿ ತರಕಾರಿ ಅಂಗಡಿಗಳ ಮುಂಸೆಯೋ ಇದೆ ಕಥೆ ಅದ್ಯಾಕೋ ಜನರು ಮಾತ್ರ ಎಚ್ಚೆತ್ತು ಕೊಂಡತೆ ಕಾಣುತ್ತಿಲ್ಲ ಸೊಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಹ ಡೂಂಟ್ ಕೆರ್ ಮಾಡದ ಜನ ತಮ್ಮದೆ ಲೊಕದಲ್ಲಿ ತಮಗೆ ಬೆಕಾದ ವಸ್ತುಗಳ ಖರಿದಿಯಲ್ಲಿ ಮಗ್ನರಾಗಿದ್ದಾರೆ ಕರೋನಾ ಇರೊದನ್ನೆ ಮರೆತಿದ್ದಾರೆ ಏನೆ ಇರಲಿ ನಮ ಈ ಭಾನುವಾರ ಚೆನ್ನಾಗಿದ್ದರೆ ಸಾಕು ಎನ್ನುವವರೆ ಜಾಸ್ತಿ ಖರಿದಿಗೆ ಜನಜಾತ್ರೆಯಲ್ಲಿ ಒಬ್ಬರು ಹೊಗಿ ಬಂದ್ರೆ ಮನೆಗೆ ಮಹಾಮಾರಿಯನ್ನು ತರುತ್ತೆವೆ ಎಂಬ ಅರಿವೆ ಇಲ್ಲದಂತಾಗಿದೆ.

ಮುಖ್ಯ ಮಂತ್ರಿಗಳ ಆದೇಶ ದಂತೆ 9.45 ಕ್ಕೆ ಅಂಗಡಿಗಳು ಬಂದ್ ಆಗಬೆಕಯ ಜನರು ಮನೆಗೆ ಹೊಗಬೆಕೆಂದು ಮನವಿ ಮಾಡಿದ್ದು ಪೊಲಿಸರು ನಗರದ ವಿವಿದೆಡೆ ಅಂಗಡಿಗಳನ್ನು ಬಂದ್ ಮಾಡಿಸಿ ಜನರನ್ನು ಮನೆಗೆ ಕಳುಹಿಸಿದರು.

ಸೊಂಕು ನಿಯಂತ್ರಣ ಕ್ಕಾಗಿ ಸರ್ಕಾರ.ಎಸ್ಟೆಲ್ಲಾ ಪ್ರಯತ್ನ ಮಾಡುತ್ತಿದ್ದರು ಜನರು ಮಾತ್ರ ಎಚ್ಚರಿಕೆಯಿಂದ ಯಿಂದ ಇಲ್ಲ. ಜನರಲ್ಲಿ ನಮ್ಮ ಮನೆ ನಮ್ಮವರು ನಮ್ಮರಾಜ್ಯ ಎಂಬ ಆರೋಗ್ಯ ಕಾಳಜಿ ಮೂಡಿ ಎಲ್ಲರೂ ಒಗ್ಗಾಟ್ಟಾಗಿ ಸೊಂಕು ನಿರ್ಮೂಲನೆ ಗೆ ಕೈ ಜೊಡಿಸಬೆಕಿದೆ.