ಧಾರ್(ಮಧ್ಯಪ್ರದೇಶ)ಸೆ.27- ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ತಾಯಿಯ ಮುಂದೆಯೇ 5 ವರ್ಷದ ಪುಟ್ಟ ಮಗುವನ್ನು ಶಿರಚ್ಛೇದನ ಮಾಡಿರುವ ಆಘಾತಕಾರಿ ಘಟನೆ ಮದ್ಯಪ್ರದೇಶದಲ್ಲಿ ನಡೆದಿದೆ. ಮನೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ವಿಕಾಸ್ ಎಂಬ ಬಾಲಕ ಶಿರಚ್ಛೇದನವಾಗಿರುವ ನತದೃಷ್ಟ.
ಆರೋಪಿ ಮಹೇಶ್ನನ್ನ ಗ್ರಾಮಸ್ಥರೇ ಹಿಗ್ಗಾಮುಗ್ಗ ಥಳಿಸಿದ್ದರಿಂದ ಅವನು ಕೂಡ ಸಾವನ್ನಪ್ಪಿದ್ದಾನೆ. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿದೆ.
ಮನೆಯಲ್ಲಿ ಆಟವಾಡುತ್ತಿದ್ದಂತೆ ಸದ್ದುಗದ್ದಲ ಇಲ್ಲದೆ ಬಂದ ಮಹೇಶ್, ಕೈಗೆ ಸಿಕ್ಕ ಹರಿತವಾದ ಗುದ್ದಲಿಯನ್ನು ಎತ್ತಿಕೊಂಡು ಮಗುವಿನ ಕುತ್ತಿಗೆಯನ್ನು ಮುಂಡದಿಂದ ಬೇರ್ಪಡಿಸಿದ್ದಾರೆ. ಪುನಃ ಭುಜಕ್ಕೆ ಹೊಡೆದು ದೇಹವನ್ನು ವಿರೂಪಗೊಳಿಸಿದ್ದಾನೆ.
ಈ ಘಟನೆ ನೋಡಿದ ತಾಯಿ ಒಂದು ಕ್ಷಣ ದಿಗ್ಬ್ರಾಂತಕ್ಕೆ ಒಳಗಾಗಿ ರಕ್ಷಣೆಗೆ ಅಕ್ಕಪಕ್ಕದವರನ್ನು ಕೂಗಿ ಕರೆದರು. ನೆರೆಹೊರೆಯವರು ಧಾವಿಸಿ ಆರೋಪಿಯನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದರು.
ಮಗುವನ್ನು ಉಳಿಸುವ ಪ್ರಯತ್ನ ಮಾಡಿದರಾದರೂ ಆ ವೇಳೆಗಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಘಟನೆಯನ್ನು ಅತ್ಯಂತ ಹೃದಯವಿದ್ರಾವಕ ಎಂದು ಕರೆದಿರುವ ಧಾರ್ ಪೊಲೀಸ್ ವರಿಷ್ಠಾಧಿಕಾರಿ ಮಯಾಂಕ್ ಆವಸ್ತಿ ಕಂಬನಿ ಮಿಡಿದಿದ್ದಾರೆ. ಆರೋಪಿಯು ಆಲಿರಾಜ್ಪುರ ಜಿಲ್ಲೆಯ ಜೋಬತ್ ಬಾಗ್ಡಿ ನಿವಾಸಿ. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಈತ ಕೆಲ ದಿನಗಳಿಂದ ಮನೆಯಿಂದ ಕಾಣೆಯಾಗಿದ್ದ. ಈ ಘಟನೆಗೂ ಮೊದಲು ಆತ ಅಂಗಡಿಯೊಂದರಲ್ಲಿ ಕದಿಯಲು ಯತ್ನಿಸಿರುವ ಘಟನೆಯೂ ನಡೆದಿದೆ.