ಬೆಳಗಾವಿ,ಡಿ.9-ರಾಜ್ಯ ವಿಧಾನಮಂಡಳ ಚಳಿಗಾಲ ಅಧಿವೇಶನದ ಮೊದಲ ದಿನವೇ ಎಂದಿನಂತೆ ಕಿತಾಪತಿ ಮಾಡಲೆತ್ನಿಸಿದ ಪುಂಡ ಎಂಇಎಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಸಂಭಾಜಿ ವೃತ್ತದಲ್ಲಿ ಸೇರಿ ಕರ್ನಾಟಕ ಸರಕಾರದ ವಿರುದ್ಧ ಘೋಷಣೆ ಕೂಗಿ ಕರಾಳ ದಿನಾಚರಣೆಗೆ ಯತ್ನಿಸಿದ ಮರಾಠಿ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ ರಾಜ್ಯದ ಬೆಳಗಾವಿ, ಬೀದರ,ಭಾಲ್ಕಿ, ನಿಪ್ಪಾನಿ, ಸೇರಿ ರಾಜ್ಯದ ಹಲವು ಪ್ರದೇಶಗಳನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೆರಿಸುವಂತೆ ಒತ್ತಾಯಿಸಿದರು.
ನಗರದ ಟಿಳಕವಾಡಿ, ಬೋಗಾರವೆಸ್, ಗೋವಾವೆಸ್ ಪ್ರದೇಶದಲ್ಲಿ ಈಗಾಗಲೇ ನಗರ ಪೊಲೀಸರು ನಿಷೇದಾಜ್ಞೆ ಹೊರಡಿಸೊದ್ದರು. ನಿಷೇದಾಜ್ಞೆ ನಡುವೆಯೂ ಮರಾಠಿ ಪುಂಡರು ಕಿತಾಪತಿಮಾಡಿ ಅರೆಸ್ಟ್ ಆಗಿದ್ದಾರೆ, ಮಾಜಿ ಶಾಸಕ ಮನೋಹರ ಕಿಣೆಕರ ನೇತೃತ್ವದಲ್ಲಿ ಎಂಇಎಸ್ ಕಿತಾಪತಿ ನಡೆಸಿತ್ತು.