ಬೆಂಗಳೂರು,ಆ.31- ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರ ನಿಲ್ದಾಣದವರೆಗೆ ಸೆಪ್ಟೆಂಬರ್ 6 ಮತ್ತು 11 ರಂದು ಪೂರ್ಣ ದಿನ ಮೆಟ್ರೋ ಸೇವೆ ಸ್ಥಗಿತವಾಗಲಿದೆ ಎಂದು ನಮ ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.ವಿಸ್ತರಿಸಲಾದ ಮಾರ್ಗದಲ್ಲಿ ಮೆಟ್ರೋ ಸಿಗ್ನಲಿಂಗ್ ಪರೀಕ್ಷೆ ಹಿನೆ್ನೆಲೆ ಇಡೀ ದಿನ ಟೆಸ್ಟಿಂಗ್ ನಡೆಯಲಿದ್ದು, ಹಸಿರು ಮಾರ್ಗದ ನಾಗಸಂದ್ರ-ರೇಷ್ಮೆ ಸಂಸ್ಥೆ ನಡುವೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಮುಖ್ಯವಾಗಿ ನಾಗಸಂದ್ರದಿಂದ ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಕೆಲವು ದಿನಗಳು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ ಎಂದು ತಿಳಿಸಿದೆ.
ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರವರೆಗೆ ಮೆಟ್ರೋ ರೈಲು ಸಂಚಾರ ಶುಕ್ರವಾರವೂ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಪರದಾಡಿದರು. ಪ್ರಯಾಣಿಕರು ನಿಲ್ದಾಣಕ್ಕೆ ಬಂದು ವಾಪಸ್ ಹೋಗುವಂತಹ ಸನ್ನಿವೇಶ ನಿರ್ಮಾಣವಾಗಿತ್ತು.
ಮೆಟ್ರೋ ಸಂಚಾರ ಇಲ್ಲ, ಇದರಿಂದ ಸರಿಯಾದ ಸಮಯಕೆ್ಕೆ ಆಫೀಸ್ಗೆ ಹೋಗಲು ಆಗುತ್ತಿಲ್ಲ. ಆಟೋಗಳು ಬುಕ್ ಆಗುತ್ತಿಲ್ಲ, ಇಲ್ಲಿರುವ ಆಟೋದವರು ಮೀಟರ್ ಮೇಲೆ 50 ರೂಪಾಯಿ ಕೇಳುತ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.