ಕೊರಟಗೆರೆ, ಜು.7- ಮೈಕ್ರೋ ಫೈನಾನ್ಸ್ ಲೋನ್ ಕಟ್ಟಲಾಗದೆ ಅವರ ಕಿರುಕುಳದಿಂದ ಮಹಿಳೆಯೊಬ್ಬರು ಮಗುವಿನೊಂದಿಗೆ ಕೆರೆಗೆ ಹಾರಿ ಆತಹತ್ಯೆಗೆ ಯತ್ನಿಸಿದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತಾಲೂಕಿನ ಸಿಎನ್ ದುರ್ಗಾ ಹೋಬಳಿಯ ಅಗ್ರಹಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಥರಟಿ ಗ್ರಾಮದ ಲಕ್ಷ್ಮಮ ( 35) ಮಗುವಿನೊಂದಿಗೆ ಆತಹತ್ಯೆಗೆ ಯತ್ನಿಸಿದ ಮಹಿಳೆ. ಅದೃಷ್ಟವಶಾತ್ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮಹಿಳೆ ಬದುಕುಳಿದ್ದಿದ್ದಾರೆ.
ತಾಲೂಕಿನಲ್ಲಿ ಖಾಸಗಿ ಫೈನಾನ್ಸ್ ದಂಧೆ ಮಿತಿಮೀರಿದ್ದು, ನಾಯಿಕೊಡೆಗಳಂತೆ 20ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸರ್ ಹೆಚ್ಚಾಗಿ, ಹಲವು ಆಮಿಷಗಳನ್ನು ಹೂಡಿ ಹಣ ನೀಡುತ್ತಾರಾದರೂ ಹಣ ವಸೂಲಿ ಮಾಡುವ ಸಂದರ್ಭದಲ್ಲಿ ಅಶ್ಲೀಲ ಪದಗಳನ್ನು ಬಳಸಿ ಬಾಯಿಗೆ ಬಂದಂತೆ ವರ್ತಿಸುವುದಲ್ಲದೆ ಮೈಕ್ರೋ ಫೈನಾನ್ಸ್ ನ ಕೆಲವು ಯುವಕರ ತಂಡ ರೌಡಿಗಳಂತೆ ಆವಾಜ್ ಹಾಕಿಕೊಂಡು ಹಣ ವಸೂಲಿ ದಂಧೆಯಲ್ಲಿ ನಿರತರಾಗಿ ಸಾರ್ವಜನಿಕರಿಗೆ, ಕೂಲಿಗಾರರಿಗೆ ಅದರಲ್ಲೂ ಕೂಲಿ ಕಾರ್ಮಿಕರು ಹಾಗೂ ದಿನಬಳಕೆ ವ್ಯಾಪಾರಸ್ಥರಿಗೆ ಟಾರ್ಗೆಟ್ ಮಾಡಿಕೊಂಡಿರುವ ಮೈಕ್ರೋ ಫೈನಾನ್ಸ್ ಎಗ್ಗಿಲ್ಲದೆ ಬಡ್ಡಿ ಪಡೆದು ಸಾರ್ವಜನಿಕರನ್ನು ವಂಚಿಸುತ್ತಿರುವುದಲ್ಲ ಕಿರುಕುಳ ನೀಡುತ್ತಿರುವುದು ಬಹಳಷ್ಟು ಸಾರ್ವಜನಿಕರಿಗೆ ತಲೆ ನೋವಾಗಿ ಪರಿಣಮಿಸಿದೆ.
ಮೈಕೋ ೈನ್ಸ್‌ಾ ಕಂಪೆನಿಯೊಂದು ಲಕ್ಷ್ಮಿ ಎಂಬುವವರಿಗೆ 50 ಸಾವಿರ ರೂ. ೈನ್ಸ್‌ಾನಲ್ಲಿ ಹಣ ನೀಡಿದ್ದು, ವಾರಕ್ಕೊಮೆ ಹಣ್ಣ ಕಟ್ಟಲಾಗದ ಹಿನ್ನೆಲೆಯಲ್ಲಿ ಹಣ ಕಟ್ಟುವಂತೆ ಕಿರುಕುಳ ನೀಡಿದ್ದರು ಎನ್ನಲಾಗಿದೆ.ಇದರಿಂದ ಮನನೊಂದು ಮಹಿಳೆ ಕೆರೆ ಏರಿ ಮೇಲೆ ಆತಹತ್ಯೆಗೆ ಯತ್ನಿಸಿದ್ದು, ಗ್ರಾಮಸ್ಥರು ಅನಾಹುತ ತಪ್ಪಿಸಿದ್ದಾರೆ.
ಕೊರಟಗೆರೆ ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗುತ್ತಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವರಿಷ್ಠಾಕಾರಿಗಳು ಮೈಕ್ರೋ ಫೈನಾನ್ಸ್ ತಂಡಕ್ಕೆ ಕಡಿವಾಣ ಹಾಕುವುದಲ್ಲದೆ ಅತಿ ಬಡ್ಡಿ ವಸೂಲಿ ಮಾಡುವ ಫೈನಾನ್ಸರ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.