ಬೆಂಗಳೂರು,ಜ.23- ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿಯ ವೇಳೆ ನಿಯಮಬಾಹಿರವಾಗಿ ತೊಂದರೆಗೊಳಗಾದವರು ದೂರು ಕೊಟ್ಟರೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಹಿತೇಂದ್ರ ಎಲ್ಲಾ ಜಿಲ್ಲೆಗಳ ಎಸ್ಪಿಗಳಿಗೆ, ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿರುವ ಅವರು, ಯಾರಾದರೂ ಮೈಕ್ರೋ ಫೈನಾನ್‌್ಸನಿಂದ ಕಿರುಕುಳಕ್ಕೆ ಒಳಗಾಗಿದ್ದರೆ ಅಂತಹವರು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಇತ್ತೀಚಿಗೆ ದೂರುಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಿಯಮ ಮೀರಿ ಮೈಕ್ರೋ ಫೈನಾನ್ಸ್ ಕಂಪನಿಯವರು ಕಿರುಕುಳ ನೀಡಿದ್ದೇ ಆದರೆ ತಕ್ಷಣವೇ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಪೊಲೀಸರು ಅಗತ್ಯ ನೆರವು ನೀಡಲಿದ್ದಾರೆ ಎಂದು ತಿಳಿಸಿದರು.
ರಾಮನಗರ ಜಿಲ್ಲಾ ಪೊಲೀಸರಿಗೆ ಮೈಕ್ರೋ ಫೈನಾನ್‌್ಸನವರ ಕಿರುಕುಳದ ದೂರು ಬಂದಿತ್ತು. ತಕ್ಷಣ ಪೊಲೀಸರು ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿಯವರ ಕಿರುಕುಳ, ಹಾವಳಿಯಿಂದ ರಾಜ್ಯದ ಮೂರು ಕಡೆ ಒಂದೇ ದಿನ ಮೂವರು ಆತಹತ್ಯೆ ಮಾಡಿಕೊಂಡಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಯವರು ಸಾಲಕ್ಕೆ ಹಣಕೊಟ್ಟು ಮನಬಂದಂತೆ ಬಡ್ಡಿ ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಫೈನಾನ್ಸ್ ನವರ ಕಿರುಕುಳಕ್ಕೆ ಹಲವರು ಗ್ರಾಮ ತೊರೆದು ಹೋಗಿದ್ದಾರೆ.ಮತ್ತೊಂದೆಡೆ ಮೈಕ್ರೋ ಫೈನಾನ್ಸ್ ನವರಿಂದ ನಮ ಮಾಂಗಲ್ಯ ಉಳಿಸಿ ಎಂದು ಹಾವೇರಿ ಮಹಿಳೆಯರು ಸಿಎಂಗೆ ಪೋಸ್ಟ್ ಮಾಡಿದ್ದಾರೆ.