Sunday, July 7, 2024
Homeಜಿಲ್ಲಾ ಸುದ್ದಿಗಳುಬೇವಿನ ಮರದಲ್ಲಿ ಜಿನುಗಿದ ಹಾಲು, ಪೂಜೆ ಮಾಡಲು ಮುಗಿಬಿದ್ದ ಜನ

ಬೇವಿನ ಮರದಲ್ಲಿ ಜಿನುಗಿದ ಹಾಲು, ಪೂಜೆ ಮಾಡಲು ಮುಗಿಬಿದ್ದ ಜನ

ಗೌರಿಬಿದನೂರು, ಜೂ.26- ನಗರದ ಬೈಪಾಸ್‌ ರಸ್ತೆಯ ವಿನಾಯಕ ವೃತ್ತದ ಬಳಿ ರಸ್ತೆಯ ಬದಿಯಲ್ಲಿನ ಬೇವಿನ ಮರವೊಂದರಲ್ಲಿ ಹಾಲು ಬರುತ್ತಿದ್ದು, ಈ ವಿಸ್ಮಯ ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.

ವಿನಾಯಕ ವೃತ್ತದ ಡಿ.ಪಾಳ್ಯ ರಸ್ತೆಯ ಬದಿಯಲ್ಲಿನ ಬೇವಿನ ಮರದ ರೆಂಬೆಯಿಂದ ಬೆಳಗಿನ ಜಾವದಿಂದ ಒಂದೇ ಸಮನೆ ಮರದಲ್ಲಿ ಹಾಲು ಜಿನುಗುತ್ತಿದ್ದು, ಈ ಸುದ್ದಿ ನಗರದೆಲ್ಲೆಡೆ ಹಬ್ಬಿ ಬೇವಿನ ಮರದಲ್ಲಿ ಹಾಲು ಬರುವುದನ್ನು ವೀಕ್ಷಿಸಲು ಮುಗಿಬಿದ್ದರು.

ಸಂಕಷ್ಟಹರ ಚತುರ್ಥಿ ದಿನದಂದೇ ಈ ಘಟನೆ ನಡೆಯುತ್ತಿರುವುದು ವಿಶೇಷ ಎಂದು ಕೆಲವರು ಈ ಹಾಲನ್ನು ಕೈಯಲ್ಲಿ ಹಿಡಿದು ಕುಡಿಯುತ್ತಿದ್ದರು. ಇನ್ನು ಮಹಿಳೆಯರು ಇದೊಂದು ಪವಾಡ ಎಂದು ವಿಶೇಷ ಪೂಜೆ ಸಲ್ಲಿಸಿ ಭಕ್ತಿಯಿಂದ ಮೆರೆದರು.

ಎಲ್ಲ ಮರಗಳಲ್ಲಿನ ಬೇರುಗಳು ನೀರನ್ನು ಭೂಮಿಯಿಂದ ಮೇಲಕ್ಕೆ ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತವೆ. ಇದರಲ್ಲಿ ಇರುವ ಕೋಶಗಳು ಮರದ ಎಲ್ಲ ರಂಬೆ ಕೊಂಬೆಗಳಿಗೆ ನೀರನ್ನು ರವಾನಿಸುತ್ತವೆ. ಹೀಗೆ ನೀರು ಪೂರೈಸುವ ಕೋಶಗಳು ಅಪರೂಪಕ್ಕೆ ಎಂಬಂತೆ ನಾಶವಾದಾಗ , ಇಂಥ ಘಟನೆಗಳು ನಡೆಯುತ್ತವೆ.

ಹೀಗೆ ಕೋಶಗಳು ತನ್ನ ಕ್ರಿಯೆಯನ್ನು ಕಡಿಮೆ ಮಾಡಿದಾಗ ಮರದ ಒಳಗಿರುವ ನೀರಿನ ಅಂಶ ಹೊರಗೆ ಬರುತ್ತದೆ. ಸಹಜವಾಗಿ ಮರದಲ್ಲಿ ಬುರುಗು ಇರುವುದರಿಂದ ಬುರುಗು ಮಿಶ್ರಿತ ನೀರು ಹಾಲಾಗಿ ಕಾಣುತ್ತದೆ. ಅಲ್ಲದೆ, ಕೋಶಗಳು ನಾಶವಾಗಿರುವುದರಿಂದ ಸಹಜವಾಗಿ ನೀರನ್ನು ಮೇಲೆಕ್ಕೆ ಒಯ್ಯಲಾಗದೆ ನೀರು ಹಾಲಿನಂತಾಗಿ ಜಿನುಗತ್ತದೆ. ಜೊತೆಗೆ ಹವಾಮಾನ ವೈಪರೀತ್ಯವೂ ಸಹ ಈ ಪ್ರಕ್ರಿಯೆಗೆ ಕಾರಣವಾಗಿದೆ ಎನ್ನುತ್ತಾರೆ ಜೀವಶಾಸ ಉಪನ್ಯಾಸಕ ಟಿ.ಜಯರಾಂಮ್‌.

RELATED ARTICLES

Latest News