Tuesday, August 12, 2025
Homeರಾಜ್ಯಮೇಲ್ಮನೆಯಲ್ಲೂ ಪ್ರತಿಧ್ವನಿದ ಸಚಿವ ಕೆ.ಎನ್‌.ರಾಜಣ್ಣ ವಜಾ ವಿಚಾರ

ಮೇಲ್ಮನೆಯಲ್ಲೂ ಪ್ರತಿಧ್ವನಿದ ಸಚಿವ ಕೆ.ಎನ್‌.ರಾಜಣ್ಣ ವಜಾ ವಿಚಾರ

Minister K.N. Rajanna's dismissal issue echoed in the Upper House

ಬೆಂಗಳೂರು,ಆ.12- ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರನ್ನು ಸಚಿವರ ಸಂಪುಟದಿಂದ ವಜಾಗೊಳಿಸಿ ರುವ ವಿಷಯವು ವಿಧಾನಪರಿ ಷತ್‌ನಲ್ಲಿ ಪ್ರತಿಧ್ವನಿಸಿ ಸದನವನ್ನು ಕೆಲಕಾಲ ಮುಂದೂ ಡಿದ ಪ್ರಸಂಗ ಜರುಗಿತು.ಕಲಾಪ ಆರಂಭವಾಗು ತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿಯವರು ಪ್ರಶ್ನೋತ್ತರ ಕಲಾಪವನ್ನು ಆರಂಭಿಸಲು ಮುಂದಾದರು.

ಆಗ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಷಯ ಪ್ರಸ್ತಾಪಿಸಲು ಮುಂದಾದರು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರ ವಿಶೇಷ ಕಾರ್ಯದರ್ಶಿ ಆರ್‌.ಪ್ರಭು ಶಂಕರ್‌ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದು, ಸಹಕಾರ ಸಚಿವ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದು ಚರ್ಚೆಯಾಗಬೇಕಾದ ವಿಷಯ ಎಂದು ಹೇಳಿದರು.

ಛಲವಾದಿ ನಾರಾಯಣಸ್ವಾಮಿ ಮಾತಿಗೆ ದನಿಗೂಡಿಸಿದ ಬಿಜೆಪಿಯ ಸಚೇತಕ ಎನ್‌.ರವಿಕುಮಾರ್‌, ಸದಸ್ಯ ಸಿ.ಟಿ.ರವಿ ಮತ್ತಿತರರು ಇದು ಸಣ್ಣ ವಿಷಯವಲ್ಲ. ಇದೊಂದು ಗಂಭೀರವಾದ ಪ್ರಕರಣವಾಗಿರುವುದರಿಂದ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಪತಿಗೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಭೋಸರಾಜ್‌, ಮುಖ್ಯ ಸಚೇತಕ ಸಮೀರ್‌ ಮತ್ತಿತರರು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಬರೆದಿರುವ ಪತ್ರವನ್ನು ಸದನದಲ್ಲಿ ಚರ್ಚೆ ಮಾಡಬೇಕು. ಇದು ಚರ್ಚಿಸುವ ವಿಷಯವೇ. ಮೊದಲು ಪ್ರಶ್ನೋತ್ತರ ಕಲಾಪವನ್ನು ಪ್ರಾರಂಭಿಸಿ ಎಂದು ತಿರುಗೇಟು ನೀಡಿದರು.

ಆಗ ಪ್ರತಿಪಕ್ಷದ ಸದಸ್ಯ ಸಿ.ಟಿ.ರವಿ ಅವರು, ರಾಜಣ್ಣ ಅವರನ್ನು ಅತ್ಯಂತ ಅಪಮಾನಕರ ರೀತಿಯಲ್ಲಿ ಸಂಪುಟದಿಂದ ವಜಾಗೊಳಿಸಲಾಗಿದೆ. ಇದಕ್ಕೆ ಕಾರಣಗಳೇನು? ಅವರ ಮೇಲೆ ಭ್ರಷ್ಟಾಚಾರವಿತ್ತೇ? ಅತ್ಯಾಚಾರಗೆಸಿದ್ದರಾ? ಎಂದು ಪ್ರಶ್ನೆ ಮಾಡಿದರು.

ಈ ವೇಳೆ ಛಲವಾದಿ ನಾರಾಯಣಸ್ವಾಮಿ ಅವರು, ರಾಜಣ್ಣ ರಾಜೀನಾಮೆ ಕೊಟ್ಟಿದ್ದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ಅದು ನಿಮ ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರ. ನಮಗೆ ಅದು ಬೇಕಾಗಿಯೂ ಇಲ್ಲ. ಇಲ್ಲಿ ಪ್ರಶ್ನೆ ಎಂದರೆ ಓರ್ವ ಸಚಿವರನ್ನು ಸಂಪುಟದಿಂದ ಯಾವ ಕಾರಣಕ್ಕಾಗಿ ವಜಾ ಮಾಡಲಾಗಿದೆ. ಇದರ ಬಗ್ಗೆ ಚರ್ಚೆಯಾಗಲೇಬೇಕೆಂದು ಪಟ್ಟು ಹಿಡಿದರು.

ಇದಕ್ಕೆ ಎನ್‌.ರವಿಕುಮಾರ್‌ ಕೂಡ ದನಿಗೂಡಿಸಿ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸುವ ತಪ್ಪು ಏನು ಮಾಡಿದ್ದರು? ಇದು ಚರ್ಚೆಯಾಗಬೇಕಲ್ಲವೇ ಎಂದು ಹೇಳಿದರು.ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತುಸು ಮಾತಿನ ಚಕಮಕಿ ನಡೆಯಿತು. ಗದ್ದಲದ ನಡುವೆಯೇ ಸಭಾಪತಿಯವರು ಪ್ರಶ್ನೋತ್ತರ ಆರಂಭಿಸುತ್ತೇನೆ ಎಂದಾಗ ಸದನದಲ್ಲಿ ಮತ್ತೆ ಗದ್ದಲ ನಡೆದಿದ್ದರಿಂದ ಸದನವನ್ನು ಕೆಲ ಹೊತ್ತು ಮುಂದೂಡಿದರು.

RELATED ARTICLES

Latest News