Thursday, November 21, 2024
Homeರಾಜ್ಯವಕ್ಫ್ ಆಸ್ತಿ ವಿವಾದ ಕುರಿತು ಆತಂಕ ಬೇಡ : ಸಚಿವ ಪ್ರಿಯಾಂಕ್‌ ಖರ್ಗೆ

ವಕ್ಫ್ ಆಸ್ತಿ ವಿವಾದ ಕುರಿತು ಆತಂಕ ಬೇಡ : ಸಚಿವ ಪ್ರಿಯಾಂಕ್‌ ಖರ್ಗೆ

Minister Priyank Kharge on Waqf property dispute

ಬೆಂಗಳೂರು,ಅ.29- ವಕ್ಫ್ ಅದಾಲತ್‌ ನಡೆದಿರುವ ಕಡೆಯಲ್ಲೆಲ್ಲಾ ಜಮೀನುಗಳು ತಮಗೆ ಸೇರಿದ್ದು ಎಂಬ ಹಕ್ಕು ಪ್ರತಿಪಾದನೆ ಸಹಜವಾಗಿ ಕೇಳಿಬರುತ್ತದೆ. ಈ ವಿಚಾರವಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12 ಜಿಲ್ಲೆಗಳಲ್ಲಿ ಈ ರೀತಿಯ ಹಕ್ಕು ಪ್ರತಿಪಾದನೆಗೆ ಪ್ರತಿಕ್ರಿಯಿಸಿದರು.ಈಗಾಗಲೇ ನಿನ್ನೆ ಸಚಿವರಾದ ಕೃಷ್ಣ ಭೈರೇಗೌಡ, ಜಮೀರ್ ಅಹಮದ್‌ ಖಾನ್‌, ಎಂ.ಬಿ.ಪಾಟೀಲ್‌ರವರು ಸ್ಪಷ್ಟನೆ ನೀಡಿದ್ದಾರೆ. ಯಾರು ಬೇಕಾದರೂ ಆಸ್ತಿ ನಮ್ಮದು ಎಂದು ಹಕ್ಕು ಪ್ರತಿಪಾದಿಸಬಹುದು. ಆದರೆ ದಾಖಲೆಯಲ್ಲಿ ಯಾರ ಹೆಸರಿದೆ ಎಂಬುದು ಮುಖ್ಯ. ಕಾಯಿದೆ ಜಾರಿಗೆ ಬರುವ ಮುನ್ನ ಆಸ್ತಿ ಯಾರಿಗೆ ಸೇರಿದೆಯೋ ಅದೇ ಮುಂದುವರೆಯಲಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ಯಾರು, ಯಾರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ. ವಕ್ಫ್ ಅದಾಲತ್‌ ನಡೆದಿರುವ ಕಡೆಯಲ್ಲೆಲ್ಲಾ ಆಸ್ತಿಗಳು ತಮವು ಎಂದು ಅವರು ಸಾಕಷ್ಟು ಅರ್ಜಿ ನೀಡಿದ್ದಾರೆ. ಅದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಇದಕ್ಕೆ ವಿಜಯಪುರದಲ್ಲಿ ಸಾವಿರ ಎಕರೆಯಲ್ಲಿ 11 ಎಕರೆ ಮಾತ್ರ ವಿವಾದಕ್ಕೆ ಈಡಾಗಿದೆ. ಯಾರಿಗೂ ಅನ್ಯಾಯವಾಗಲು ಸರ್ಕಾರ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾನೂನಾತಕವಾಗಿ ಇಲ್ಲದ ಭೂಮಿ ವಾಪಸ್‌‍ ಪಡೆಯಲಾಗುತ್ತದೆ. ಇದನ್ನು ವಿರೋಧಪಕ್ಷಗಳು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಉಪಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದ ವಕ್ಫ್ ವಿಚಾರವನ್ನು ವಿವಾದ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಮುಂದಿನ ಜನದಲ್ಲಿ ಮುಸಲಾನನಾಗಿ ಹುಟ್ಟಬೇಕು ಎಂದು ಹೇಳಿದ್ದು ಯಾರು?, ಈಗ ಅದೇ ಜೆಡಿಎಸ್‌‍ ನಾಯಕರು ವಕ್ಫ್ ವಿವಾದದ ಕುರಿತು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿಯವರು ವರ್ಷದ ಹಿಂದೆ ಆರ್‌ಎಸ್‌‍ಎಸ್‌‍ ಬಗ್ಗೆ ಏನು ಹೇಳಿದ್ದರು?, ಅವರಿಗೆ ತಮ ಮಾತಿನ ಮೇಲೆ ಬದ್ಧತೆ ಇಲ್ಲವೇ? ಎಂದು ಪ್ರಶ್ನಿಸಿದರು.ಸಂಖ್ಯಾಬಲದ ಕೊರತೆಯಿಂದಾಗಿ ಕಾಂಗ್ರೆಸ್‌‍ ಜೆಡಿಎಸ್‌‍ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡಿತ್ತು. ಆದರೆ ಕುಮಾರಸ್ವಾಮಿ ಕುರ್ಚಿ ಸಿಕ್ಕಾಗ ಜಾತ್ಯತೀರಾಗುತ್ತಾರೆ. ಅದು ಹೋದಾಗ ಕಮ್ಯುನಲ್‌ ಆಗುತ್ತಾರೆ. ಬಿಜೆಪಿಯವರು ಕುರ್ಚಿ ಕೊಟ್ಟರೆ ಕಮ್ಯುನಲ್‌ ಆಗಿ ಮುಂದುವರೆಯುತ್ತಾರೆ. ಅಧಿಕಾರಕ್ಕಾಗಿ ಸಿದ್ಧಾಂತಗಳು ಯಾವ ರೀತಿ ಬೇಕಾದರೂ ಬದಲಾಗಬಹುದೇ? ಎಂದು ಪ್ರಶ್ನಿಸಿದರು.

ನಾವು ಯಾವಾಗಲೂ ಆರ್‌ಎಸ್‌‍ಎಸ್‌‍ ವಿರುದ್ಧ ಇದ್ದೆವು. ಈಗಲೂ ಇದ್ದೇವೆ. ಆದರೆ ಜನತಾದಳದ ನಾಯಕರು ಹಲವು ರೀತಿಯಲ್ಲಿ ಬದಲಾಗುತ್ತಾರೆ ಎಂದು ಹೇಳಿದರು.ಉತ್ತಮವಾಗಿ ಕೆಲಸ ಮಾಡಿದ್ದೇ ಆಗಿದ್ದರೆ ಬಿಜೆಪಿಯವರು ಚನ್ನಪಟ್ಟಣದಲ್ಲಿ ಏಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಸಂಡೂರು, ಶಿಗ್ಗಾವಿಯಲ್ಲಿ ಜೆಡಿಎಸ್‌‍ ಸ್ಪರ್ಧಿಸದೇ ಇರುವುದೇಕೆ?, ನೆಪಮಾತ್ರಕ್ಕೆ ಮೈತ್ರಿ ಎಂದು ಕಾರಣ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕರ್ನಾಟಕ ದೇಶದಲ್ಲೇ ನವೋದ್ಯಮಗಳಿಗೆ ಹೆಚ್ಚು ಬೆಂಬಲ ನೀಡಿದ ಮೊದಲ ರಾಜ್ಯ. ನಮನ್ನು ನೋಡಿ ಕೇಂದ್ರ ಸರ್ಕಾರ ಸ್ಟಾರ್ಟ್‌ ಅಪ್‌ ಇಂಡಿಯಾ ಮಾಡಿತ್ತು. ಅದು ಕೂಡ ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ ಎಂದರು.

ಎಲಿವೇಟ್‌ 2024 ಯೋಜನೆಯಡಿ 302 ನವೋದ್ಯಮಗಳಿಗೆ ಗರಿಷ್ಠ 50 ಲಕ್ಷ ರೂ.ಗಳನ್ನು ಆರ್ಥಿಕ ನೆರವು ಹಾಗೂ ಮಾರುಕಟ್ಟೆ, ತಂತ್ರಜ್ಞಾನ ಸೇರಿದಂತೆ ಇತರೆ ವಿಚಾರಗಳಲ್ಲಿ ಸರ್ಕಾರ ಬೆಂಬಲ ನೀಡಲಿದೆ. ಡೀಪ್‌ಟೆಕ್‌, ಎಐ, ಎಂಎಲ್‌, ರೊಬಾಕ್ಟಿಕ್ಸ್ , ಬ್ಲಾಕ್‌ಚೈನ್‌, 5ಜಿ, ಸ್ಪೇಸ್‌‍ ಟೆಕ್‌, ಸೈಬರ್‌ ಸೆಕ್ಯೂರಿಟಿ ಮುಂತಾದ ತಂತ್ರಜ್ಞಾನಗಳ ನವೋದ್ಯಮಗಳು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಇದೇ ವೇಳೆ ನ.19 ರಿಂದ 21 ರವರೆಗೆ ಅರಮನೆ ಮೈದಾನದಲ್ಲಿ ನಡೆಯುವ ಬೆಂಗಳೂರು ಟೆಕ್‌ ಶೃಂಗಸಭೆಗೆ ಆ್ಯಪ್‌ವೊಂದನ್ನು ಸಚಿವರು ಅನಾವರಣಗೊಳಿಸಿದರು.

RELATED ARTICLES

Latest News