Friday, November 22, 2024
Homeರಾಜ್ಯಬಸ್ ಪ್ರಯಾಣ ದರ ಏರಿಕೆ ಸುಳಿವು ನೀಡಿದ ಸಚಿವ ರಾಮಲಿಂಗಾರೆಡ್ಡಿ

ಬಸ್ ಪ್ರಯಾಣ ದರ ಏರಿಕೆ ಸುಳಿವು ನೀಡಿದ ಸಚಿವ ರಾಮಲಿಂಗಾರೆಡ್ಡಿ

Minister Ramalingareddy hinted at bus fare hike

ಬೆಂಗಳೂರು, ಆ.24– ಪೆಟ್ರೋಲ್‌-ಡೀಸೆಲ್‌, ಹಾಲು ಸೇರಿದಂತೆ ದಿನಕ್ಕೊಂದು ದರ ಏರಿಕೆಯಾಗುತ್ತಿರುವ ಪಟ್ಟಿಯಲ್ಲಿ ನೀರಿನ ದರ ಮತ್ತು ಬಸ್‌‍ ಪ್ರಯಾಣ ದರವೂ ಸೇರ್ಪಡೆಯಾಗುತ್ತಿರುವುದು ಮಧ್ಯಮ ವರ್ಗದವರ ದುಗುಡವನ್ನು ಹೆಚ್ಚಿಸಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿರೋಧಪಕ್ಷದ ನಾಯಕರಿಗೆ ಉತ್ತರಿಸುವ ಭರದಲ್ಲಿ ಪ್ರಯಾಣದರ ಏರಿಕೆಯ ಸುಳಿವು ನೀಡಿದ್ದಾರೆ.

ವಿರೋಧಪಕ್ಷದ ನಾಯಕ ಆರ್‌.ಅಶೋಕ್‌, ಬಸ್‌‍ ಪ್ರಯಾಣ ದರ ಏರಿಕೆಗೆ ಹೊಸ ಆಯೋಗ ರಚನೆ ಮಾಡುವ ಮೂಲಕ ರಾಜ್ಯಸರ್ಕಾರ ಜನರ ಜೇಬುಗಳ್ಳತನ ಮಾಡಲು ಮುಂದಾಗಿದೆ ಎಂದು ಟೀಕಿಸಿದರು.ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾರೆಡ್ಡಿಯವರು, ಅಶೋಕ್‌ರವರೇ, ನೀವು ಸಾರಿಗೆ ಸಚಿವರಾಗಿದ್ದವರು, ಸಾರಿಗೆ ಸಂಸ್ಥೆಗಳ ಬಗ್ಗೆ ತಿಳಿದೂ ಕೂಡ ಈ ರೀತಿ ಮಾತನಾಡುತ್ತಿರುವುದು ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ.

2013 ರಲ್ಲಿ ತಾವು ಸಾರಿಗೆ ಸಚಿವರಾಗಿದ್ದಾಗ ಬಸ್‌‍ ಪ್ರಯಾಣ ದರ ಶೇ.10.5 ಏರಿಕೆ ಮಾಡಿರುವುದು ಮರೆತುಬಿಟ್ಟಿದ್ದೀರಾ ? ಎಂದು ಪ್ರಶ್ನಿಸಲಾಗಿದ್ದು, 2020 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಬಸ್‌‍ ಪ್ರಯಾಣ ದರ ಶೇ.12 ಹೆಚ್ಚಳ ಮಾಡಲಾಗಿತ್ತು. ಆಗ ಅಶೋಕ್‌ ಸಂಪುಟದ ಸಚಿವರಾಗಿದ್ದು, ಏಕೆ ವಿರೋಧ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ನಿವೃತ್ತ ಐಎಎಸ್‌‍ ಅಧಿಕಾರಿ ಎಂ.ಆರ್‌.ಶ್ರೀನಿವಾಸ್‌‍ಮೂರ್ತಿ ಅವರ ಅಧ್ಯಕ್ಷತೆಯ ಏಕ ಸದಸ್ಯತ್ವ ಸಮಿತಿಯನ್ನು ಬಿ.ಜೆ.ಪಿ ಸರ್ಕಾರವೇ 2021 ರ ನವೆಂಬರ್‌ 15 ರಂದು ರಚಿಸಿತ್ತು. ಆ ಸಮಿತಿ ಅನೇಕ ಶಿಾರಸು ನೀಡಿದ್ದು, ಪ್ರಮುಖವಾಗಿ ಬಸ್‌‍ ಪ್ರಯಾಣ ದರ ಪರಿಷ್ಕರಣೆಗೆ ಕೆಇಆರ್‌ಸಿ ಮಾದರಿಯಲ್ಲಿ ಸಾಂಸ್ಥಿಕ ವ್ಯವಸ್ಥಾಪನಾ ಸಮಿತಿ ಅಗತ್ಯ ಎಂದು ಸಲಹೆ ನೀಡಿದೆ.

ಇನ್‌ಸ್ಟ್ಟೂಷನಲ್‌ ಅರೇಂಜ್‌ಮೆಂಟ್‌ ಫಾರ್‌ ರಿವಿಜನ್‌ ಆಫ್‌ ಬಸ್‌‍ ಪೇರ್‌ ಶೀರ್ಷಿಕೆಯಡಿ ಆಂತರಿಕ ಸಂಸ್ಥೆಯನ್ನು ರಚಿಸಬೇಕು ಮತ್ತು ಕಾಲಕಾಲಕ್ಕೆ ಬಸ್ ದರವನ್ನು ಹೆಚ್ಚಿಸಬೇಕು. ಆಗಷ್ಟೇ ಸಾರಿಗೆ ಸಂಸ್ಥೆಗಳು ಉಳಿಯಲು ಸಾಧ್ಯವೆಂದು ವರದಿ ನೀಡಲಾಗಿದೆ.
ಅಶೋಕ್‌ ಅವರು ಸಚಿವರಾಗಿದ್ದಾಗ ಈ ವರದಿಯನ್ನು ಏಕೆ ತಿರಸ್ಕರಿಸಲಿಲ್ಲ. ಅವರದೇ ಸರ್ಕಾರ ಅಂಗೀಕರಿಸಿದ ವರದಿಯನ್ನು ಈಗ ಸರಿಯಿಲ್ಲವೆಂದು ಹೇಳುತ್ತಿರುವುದು ಅಚ್ಚರಿಯಾಗಿದೆ ಎಂದು ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

ಕರ್ನಾಟಕ ಸರ್ಕಾರ 2000ರ ಸೆಪ್ಟೆಂಬರ್‌ 30ರಂದು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ ಹೆಚ್ಟಿಡಿ/85/ಟಿಆರ್‌ಎ/2000 ರ ಅನ್ವಯ ಕರಾರಸಾ ನಿಗಮ ಹಾಗೂ ಇತರೆ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಡೀಸೆಲ್‌ ತೈಲದ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರಗಳಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಮಾಹಿತಿಯೇ ತಮಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅವರದೇ ಬಿ.ಜೆ.ಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ನಷ್ಟದಲ್ಲಿಟ್ಟು ಹೋಗಿದ್ದು, ಈಗ ಸಾರಿಗೆ ಸಂಸ್ಥೆಗಳ ಪಾಡೇನು ಎಂಬುದರ ಬಗ್ಗೆ ತಾವು ಉತ್ತರ ನೀಡುವಿರಾ? ಎಂಬುದಕ್ಕೆ ಅಶೋಕ್‌ರವರು ಉತ್ತರಿಸಲು ಸಾಧ್ಯವೇ ಎಂದಿರುವ ಅವರು, ನನಗೆ ರಾಜಕೀಯವೇ ಮುಖ್ಯ. ಸಾರಿಗೆ ಸಂಸ್ಥೆಗಳು ಉಳಿದರೇನು? ಮುಳುಗಿದರೆ ನನಗೇನು? ಅನ್ನುವ ಮನಸ್ಥಿತಿಯೇ ತಿಳಿಯದಾಗಿದೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.

ಅಶೋಕ್‌ ಅವರು ಸರ್ಕಾರದ ಭಾಗವಾಗಿ ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ಇಂದು ಮರೆಮಾಚಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಎಷ್ಟು ಸಮಂಜಸ? ಎಂದು ಕಿಡಿಕಾಡಿರುವ ರಾಮಲಿಂಗಾರೆಡ್ಡಿ ವಿರೋಧಪಕ್ಷದ ನಾಯಕರು ತಮ ಹೇಳಿಕೆಯ ಬಗ್ಗೆ ಆತಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

RELATED ARTICLES

Latest News