ತಿರುವನಂತಪುರಂ, ಸೆ.19-ರಾಜ್ಯ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವಾಗ ಆರೋಗ್ಯ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಕೇರಳದ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಬೆಳಿಗ್ಗೆ 9 ಗಂಟೆಗೆ ಸದನದ ಕಲಾಪಗಳು ಪ್ರಾರಂಭವಾದ ಸುಮಾರು 10 ನಿಮಿಷಗಳ ನಂತರ, ಶಿವನ್‌ಕುಟ್ಟಿ ಅವರಿಗೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದು,ಕೂಡಲೆ ಅವರನ್ನು ಆಡಳಿತ ಪಕ್ಷದ ಶಾಸಕರುನೆರವಿಗೆ ದಾವಿಸಿ ನಂತರ ಅವರನ್ನು ಸದನದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವಿಧಾನಸಭೆ ಅಧಿಕಾರಿಯೊಬ್ಬರು ಹೇಳಿದರು, ಸಚಿವರಿಗೆ ನಿಜವಾಗಿ ಏನಾಯಿತು ಎಂಬುದು ಇನ್ನೂ ತಿಳಿದಿಲ್ಲ.ಇದು ಗಂಭೀರವಾಗಿ ಕಾಣುತ್ತಿಲ್ಲ, ಆದರೆ ಅವರನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸುವವರೆಗೆ ನಮಗೆ ಖಚಿತವಾಗಿ ತಿಳಿಯಲು ಸಾಧ್ಯವಿಲ್ಲ ಎಂದು ಅಧಿಕಾರಿ ಹೇಳಿದರು.
ಶಿವನ್‌ಕುಟ್ಟಿ ಉತ್ತರಿಸಬೇಕಾದ ಉಳಿದ ಪ್ರಶ್ನೆಗಳನ್ನು ನಂತರ ಸಂಸದೀಯ ವ್‌ಯವಹಾರಗಳ ಸಚಿವ ಎಂ.ಬಿ. ರಾಜೇಶ್ ಕೈಗೆತ್ತಿಕೊಂಡರು.ಮುಖ್ಯಮಂತ್ರಿ ಸೇರಿದಂತೆ ಹಲವು ಸದಸ್ಯರು ಸಚಿವರ ಅನಾರೊಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.