Wednesday, April 23, 2025
Homeರಾಜ್ಯಪಹಲ್‌ಗಾಮ್ ಉಗ್ರರ ದಾಳಿ ಖಂಡಿಸಿದ ಸಚಿವ ಜಮೀರ್

ಪಹಲ್‌ಗಾಮ್ ಉಗ್ರರ ದಾಳಿ ಖಂಡಿಸಿದ ಸಚಿವ ಜಮೀರ್

Minister Zameer condemns Pahalgam terror attack

ಬೆಂಗಳೂರು, ಏ.23– ಜಮ್ಮು-ಕಾಶ್ಮೀರದ ಪಹಲ್‌ಗಾಮ್ ನಲ್ಲಿ ನಡೆದ ಉಗ್ರರ ಕೃತ್ಯ ಅತ್ಯಂತ ಹೇಯ ಹಾಗೂ ಅಮಾನವೀಯ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತೀವ್ರವಾಗಿ ಖಂಡಿಸಿದ್ದಾರೆ.

ಈ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಮಂದಿ ಬಲಿಯಾಗಿರುವುದು ಅತೀವ ನೋವು ತಂದಿದೆ. ಪಹಲ್‌ಗಾಮ್ ಉಗ್ರರ ದಾಳಿಯ ಹಿಂದಿನ ಶಕ್ತಿಗಳನ್ನು ಭಾರತೀಯರೆಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಮ್ಮು- ಕಾಶ್ಮೀರ ದಲ್ಲಿ 370 ವಿಧಿ ರದ್ದುಗೊಂಡ ನಂತರ ಶಾಂತಿ ನೆಲೆಸಿದೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ದೇಶದ ಭದ್ರತೆಯ ವಿಚಾರದಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕಿದೆ. ಕೃತ್ಯದಲ್ಲಿ ಬಲಿಯಾದವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಅವರು ಹೇಳಿದರು.

RELATED ARTICLES

Latest News