Friday, March 21, 2025
Homeರಾಜ್ಯ"ಸಚಿವರು, ಶಾಸಕರ ರಿಪೋರ್ಟ್‌ ಕಾರ್ಡ್‌ ಸ್ಪೀಕರ್‌ ಮುಂದೆ ಉತ್ತಮ, ಜನರ ಮುಂದೆ ಕಳಪೆ"

“ಸಚಿವರು, ಶಾಸಕರ ರಿಪೋರ್ಟ್‌ ಕಾರ್ಡ್‌ ಸ್ಪೀಕರ್‌ ಮುಂದೆ ಉತ್ತಮ, ಜನರ ಮುಂದೆ ಕಳಪೆ”

"Ministers, MLAs' report cards are good before the Speaker, but bad before the people"

ಬೆಂಗಳೂರು,ಮಾ.20- ವಿಧಾನಸಭೆಯ ಕಲಾಪದಲ್ಲಿ ಶಾಸಕರು, ಸಚಿವರ ಅಂಕಗಳು ಉತ್ತಮವಾಗುತ್ತವೆ. ಆದರೆ ಕ್ಷೇತ್ರದವರನ್ನು ಭೇಟಿ ಮಾಡಲಾಗದೆ ಜನರ ಮುಂದೆ ಕಳಪೆ ಸಾಧನೆಯಾಗುತ್ತಿದೆ ಎಂದು ಪಕ್ಷಭೇದ ಮರೆತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಬೆಳಗ್ಗೆ 8.30ಕ್ಕೆ ವಿಧಾನಸಭೆಯ ಕಲಾಪ ಆರಂಭವಾಯಿತು. ಸಭಾಧ್ಯಕ್ಷ ಯು.ಟಿ.ಖಾದರ್‌ ಎಂದಿನಂತೆ ನಿಗದಿತ ಸಮಯಕ್ಕೆ ಹಾಜರಾದ ಸದಸ್ಯರ ಹೆಸರನ್ನು ಪ್ರಕಟಿಸಿದರು. ಬಜೆಟ್‌ ಮೇಲಿನ ಚರ್ಚೆ ಮುಂದುವರೆಸಲು ಸದಸ್ಯರಿಗೆ ಸೂಚನೆ ನೀಡಿದರು. ಈ ವೇಳೆ ಬಿಜೆಪಿಯ ಪ್ರಭು ಚವ್ಹಾಣ್‌, ಸಭಾಧ್ಯಕ್ಷರು ಬೆಳಗ್ಗೆ 8.30ಕ್ಕೆ ಅಧಿವೇಶನ ಆರಂಭಿಸಿ ತಡರಾತ್ರಿ 11.30ರವರೆಗೂ ಕಲಾಪ ನಡೆಸುತ್ತಾರೆ. ಕ್ಷೇತ್ರದಿಂದ ಬರುವ ಜನರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಕಲಾಪವನ್ನು ಎರಡು ದಿನ ಅಥವಾ ಇನ್ನು ಒಂದು ವಾರ ವಿಸ್ತರಣೆ ಮಾಡಿ ಸಾಮಾನ್ಯ ಸಮಯದಂತೆ ಕಲಾಪ ನಡೆಸಿ ಎಂದು ಮನವಿ ಮಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿ ಶಾಸಕರ ಅಭಿಪ್ರಾಯಕ್ಕೆ ದನಿಗೂಡಿಸಿ, ತಮ ಜಿಲ್ಲೆಗಳ ಉದ್ಯಾನ್‌ ಎಕ್‌್ಸಪ್ರೆಸ್‌‍ ಹಾಗೂ ಇತರ ರೈಲುಗಳ ಮೂಲಕ ಬೆಂಗಳೂರಿಗೆ ಆಗಮಿಸುತ್ತಾರೆ. ಸದನದ ಸಂದರ್ಭದಲ್ಲಿ ಸಚಿವರು, ಶಾಸಕರು ಲಭ್ಯವಾಗುತ್ತಾರೆ ಎಂಬುದು ಜನರ ಭಾವನೆ. ಬೆಳಗ್ಗೆ 8.30ಕ್ಕೆ ಕಲಾಪ ಆರಂಭವಾಗುವುದರಿಂದ ಕ್ಷೇತ್ರದ ಜನರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಸದನದಲ್ಲಿ ಸಭಾಧ್ಯಕ್ಷರ ಮುಂದೆ ನಮ ರಿಪೋರ್ಟ್‌ ಕಾರ್ಡ್‌ ಚೆನ್ನಾಗಿದೆ. ಆದರೆ ಜನರ ಮುಂದೆ ರಿಪೋರ್ಟ್‌ ಕಾರ್ಡ್‌ ಕಡಿಮೆಯಾಗುತ್ತಿದೆ ಎಂದರು.

ಸಭಾಧ್ಯಕ್ಷ ಯು.ಟಿ.ಖಾದರ್‌, ಅಧಿವೇಶನ ನಡೆಯುವುದು ಮೂರು ತಿಂಗಳಿಗೊಮೆ. ಚುನಾವಣೆಯ ಕಾಲದಲ್ಲಿ ರಾತ್ರಿ 2 ಗಂಟೆವರೆಗೂ ಪ್ರಚಾರ ಮಾಡಿ ಮತಯಾಚನೆ ಮಾಡುತ್ತೀರಾ. ಅದೇ ರೀತಿ ಅಧಿವೇಶನದಲ್ಲೂ ಭಾಗವಹಿಸಿ. ಇದರಿಂದ ಕ್ಷೇತ್ರದ ಜನರ ಖುಷಿಯಾಗುತ್ತಾರೆ. ನಮ ಸಮಸ್ಯೆಯನ್ನು ಶಾಸಕರು ಅಧಿವೇಶನದಲ್ಲಿ ಪ್ರಸ್ತಾಪಿಸಲು ಬೆಳಗ್ಗೆಯೇ ಎದ್ದು ಹೋಗುತ್ತಿದ್ದಾರೆ ಎಂದು ಅವರಿಗೂ ಅರ್ಥವಾಗುತ್ತದೆ. ಕಲಾಪಕ್ಕೆ ಬರದೆ ಮನೆಯಲ್ಲಿ ಕಾಫಿ ಕುಡಿದು ವಿಶ್ರಾಂತಿ ಪಡೆಯುತ್ತಿದ್ದರೆ ಅದನ್ನು ಜನ ಗಮನಿಸುತ್ತಾರೆ. ಸದನದಲ್ಲಿ ಭಾಗವಹಿಸುವುದನ್ನು ಎಲ್ಲರೂ ಸ್ವಾಗತಿಸುತ್ತಾರೆ ಎಂದರು.

ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಕರ್ನಾಟಕ ವಿಧಾನಸಭೆಯ ಕಲಾಪವನ್ನು ಗಿನ್ನಿಸ್‌‍ ದಾಖಲೆಗೆ ಸೇರಿಸಲು ಸಭಾಧ್ಯಕ್ಷರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನಾವೆಲ್ಲರೂ ಅವರ ಜೊತೆ ಕೈಜೋಡಿಸಿ ಶಕ್ತಿ ತುಂಬಬೇಕಿದೆ ಎಂದು ಹೇಳಿದರು.

ಮೊದಲ ಬಾರಿ ಶಾಸಕರಾದವರಿಗೆ ಇಲ್ಲಿ ಮಾತನಾಡಬೇಕೆಂದು ಆಸೆಗಳಿರುತ್ತವೆ. ಆದರೆ ಅವರು ಭಾಷಣದ ವೀರರಲ್ಲ. ಅವರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಕ್ಷೇತ್ರದ ಜನರು ವೀಕ್ಷಿಸಲು ಅವಕಾಶ ಮಾಡಿಕೊಟ್ಟರೆ ಇನ್ನಷ್ಟು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಅವರು, ಸಭಾಧ್ಯಕ್ಷರಿಗೆ 25 ಸಾವಿರ ರೂ.ಗಳ ನಗದು ಬಹುಮಾನ ಬಂದಿದೆ. ಇದಕ್ಕಾಗಿ ಅಭಿನಂದಿಸುತ್ತೇನೆ ಎಂದರು.

ಇದು ನನಗೆ ಬಂದ ಪ್ರಶಸ್ತಿ ಎನ್ನುವುದಕ್ಕಿಂತಲೂ ನಿಮೆಲ್ಲರಿಗೂ ಬಂದ ಪ್ರಶಸ್ತಿ. ನಿಮ ಸಹಕಾರದಿಂದ ಪ್ರಶಸ್ತಿ ಬಂದಿದೆ ಎಂದು ಸಭಾಧ್ಯಕ್ಷರು ಪ್ರತ್ಯುತ್ತರಿಸಿದರು. ಆಡಳಿತ ಪಕ್ಷದ ಸದಸ್ಯ ಕೋನರೆಡ್ಡಿ , ಸಭಾಧ್ಯಕ್ಷರ ವಯಸ್ಸು ಎಷ್ಟು ಎಂಬುದು ಗೊತ್ತಾಗುತ್ತಿಲ್ಲ. ಹೊಸ ಶಾಸಕರಿಗೂ ಅವಕಾಶ ಮಾಡಿಕೊಡುತ್ತಾರೆ. ಹೊಸ ಹೊಸ ಪರಿಪಾಠಗಳನ್ನು ಆರಂಭಿಸಿದ್ದಾರೆ. ಇದು ಸ್ವಾಗತಾರ್ಹ ಎಂದರು.

RELATED ARTICLES

Latest News