ನವದೆಹಲಿ , ಸೆ. 4 – ಮುಂದಿನ 2070ರ ವೇಳೆಗೆ ಶೂನ್ಯ ಹೊಗೆ ಹೊರಸೂಸುವಿಕೆಯನ್ನು ಸಾಧಿಸುವ ಉದ್ದೇಶವನ್ನು ಭಾರತ ಹೊಂದಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಅಸೋಚಾಮ್ ಆಯೋಜಿಸಿದ್ದ ವಿಕಸಿತ ಭಾರತಕ್ಕಾಗಿ ಎಲೆಕ್ಟ್ರಿಕ್ ಮೊಬಿಲಿಟಿ ಹಬಾಗಿ ಭಾರತವನ್ನು ನಿರ್ಮಿಸುವ ಕುರಿತ ರಾಷ್ಟ್ರೀಯ ಸಮೇಳನದಲ್ಲಿ ಮಾತನಾಡಿದ ಅವರು, ಎಲೆಕ್ಟ್ರಿಕ್ ಚಲನಶೀಲತೆಯನ್ನು ಅಳವಡಿಸಿಕೊಳ್ಳುವುದು, ಭಾರತದ ಸಾರಿಗೆ ವಲಯವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಪರಿವರ್ತನೆಯ ಹೆಜ್ಜೆಯಾಗಿದೆ ಎಂದಿದ್ದಾರೆ.
ಇದರಿಂದ ಪರಿಸರ ಪ್ರಯೋಜನಗಳನ್ನು ಮಾತ್ರವಲ್ಲದೆ, ಈ ಬದಲಾವಣೆಯು ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸಾಂಪ್ರದಾಯಿಕ ಇಂಧನಗಳ ಮೇಲೆ ದೇಶದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಸ್ವಚ್ಛವಾದ, ಹಸಿರು ಪರಿಸರ ಭವಿಷ್ಯಕ್ಕೆ ಕೊಡುಗೆ ನೀಡುತ್ತದೆ. ಈ ಉಪಕ್ರಮಗಳು ಸುಸ್ಥಿರ ಅಭಿವೃದ್ಧಿ ಮತ್ತು ತಾಂತ್ರಿಕ ಆವಿಷ್ಕಾರದಲ್ಲಿ ಜಾಗತಿಕ ನಾಯಕನಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಾರೀ ಕೈಗಾರಿಕೆಗಳ ಸಚಿವಾಲಯವು ಭಾರತವನ್ನು ವಿದ್ಯುತ್ ಚಲನಶೀಲತೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು ದಣಿವರಿಯದೆ ಕೆಲಸ ಮಾಡುತ್ತಿದೆ. ವಿದ್ಯುತ್ ಚಾಲಿತ ವಾಹನಗಳ (ಇವಿ) ಪರಿಸರ ವ್ಯವಸ್ಥೆಯನ್ನು ಮುಂದುವರಿಸಲು ಕೈಗಾರಿಕಾ ಸಚಿವಾಲಯ ಅಚಲ ಬದ್ಧತೆಯನ್ನು ಹೊಂದಿದೆ ಎಂದು ಒತ್ತಿ ಹೇಳಿದರು.
ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ, ರಾಷ್ಟ್ರದಾದ್ಯಂತ ಸುಸ್ಥಿರ ಬೆಳವಣಿಗೆಯನ್ನು ಚಾಲನೆ ಮಾಡುವತ್ತ ಗಮನಹರಿಸಲಾಗಿದೆ. ಈ ಪ್ರಯತ್ನಗಳು ಪ್ರಧಾನಿ ನರೇಂದ್ರ ಮೋದಿ ಅವರ ಆತನಿರ್ಭರ ಭಾರತ ಮತ್ತು ವಿಕ್ಷಿತ ಭಾರತ 2047 ಉಪಕ್ರಮಗಳ ದೂರದೃಷ್ಟಿಯ ಗುರಿಗಳೊಂದಿಗೆ ಪರಿಪೂರ್ಣ ಹೊಂದಾಣಿಕೆಯಲ್ಲಿವೆ ಎಂದು ಅವರು ತಿಳಿಸಿದರು.
ಸುಸ್ಥಿರ ಸಾರಿಗೆ ಮತ್ತು ಆರ್ಥಿಕ ಬೆಳವಣಿಗೆಯತ್ತ ದೇಶದ ಪ್ರಯಾಣವನ್ನು ಮತ್ತಷ್ಟು ವೇಗಗೊಳಿಸುವ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಮತ್ತು ಸಹಯೋಗಿಸಲು ಪಾಲುದಾರರಿಗೆ ಈ ಸಮ್ಮೇಳನವು ನಿರ್ಣಾಯಕ ವೇದಿಕೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಅಸೋಚಾಮ್ನ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ಮತ್ತು ಗ್ರೀನ್ ಮೊಬಿಲಿಟಿಯ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ನಿಶಾಂತ್ ಆರ್ಯ ಸೇರಿದಂತೆ ಪ್ರಮುಖ ಉದ್ಯಮದ ಪ್ರತನಿಧಿಗಳು ಸಮೇಳನದಲ್ಲಿ ಭಾಗವಹಿಸಿದ್ದರು.