ಬೆಂಗಳೂರು,ಏ.30- ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ) ಅನ್ನು ಕಾನೂನು ಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ ಅನ್ವಯ ಕಾನೂನು ಬಾಹಿರ ಸಂಘಟನೆಯನ್ನು ಘೋಷಿಸಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಕುರಿತು ರಾಜ್ಯ ಗುಪ್ತಚರ ಇಲಾಖೆಯ ನಿರ್ದೇಶನಾಲಯವು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರವು ಉಪ ಕಲಂ (1)ಕಲಂ- 3 ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ)1967(37 ಆಫ್ 1967) ರ ಅಡಿಯಲ್ಲಿ ತನಗೆ ಪ್ರದತ್ತವಾದ ಅಧಿ ಕಾರದ ಅನ್ವಯ ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂಮ್ಮೊಂಟ್ ಆಫ್ ಇಂಡಿಯಾ (ಸಿಮಿ) ಅನ್ನು ಕಾನೂನು ಬಾಹಿರ ಸಂಘಟನೆಯೆಂದು ಕೇಂದ್ರ ಸರಕಾರ 2024 ಜನೆವರಿ 29ರಂದು ಘೋಷಿಸಿದೆ ಎಂದು ದೆಹಲಿ ಉಚ್ಛ ನ್ಯಾಯಾಲಯದ ಕಾನೂನು ಬಾಹಿರ ಚಟುವಟಿಕೆ(ತಡೆ) ನ್ಯಾಯಾಧೀಕರಣ ರಿಜಿಸ್ಟ್ರಾರ್ ಜಿತೇಂದ್ರ ಪ್ರಸಾತ್ ಸಿಂಗ್ ಅವರು ತಿಳಿಸಿದ್ದಾರೆ.
ಈ ಕಾಯ್ದೆಯ ಉಪ ಕಲಂ (1) ಕಲಂ 4ರಲ್ಲಿ ತಿಳಿಸಿರುವಂತೆ ಸ್ಪೂಡೆಂಟ್‌್ಸ ಇಸ್ಲಾಮಿಕ್ ಮೂಮ್ಮೆಂಟ್ ಆಫ್ ಇಂಡಿಯಾ ಅನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಿಸಲು ಸಾಕಷ್ಟು ಕಾರಣಗಳು ಇವೆಯೇ ಎಂಬ ಬಗ್ಗೆ ನಿರ್ಣಯಿಸಲು ಕಲಂ 5(1) ಕಾಯ್ದೆ ಅಡಿ ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಪುರುಷೇಂದ್ರ ಕುಮಾರ್ ಕೌರವ್ ರವರನ್ನೂಳಗೊಂಡ ನ್ಯಾಯಾಧೀಕರಣವನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈಗ ಕಾಯ್ದೆಯ ಕಲಂ 4. ಉಪ ಕಲಂ-2ರಡಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಈ ನೋಟೀಸ್ ಜಾರಿ ಮಾಡಿದ 30 ದಿನದೊಳಗೆ ಸ್ಪೂಡೆಂಟ್‌್ಸ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಅನ್ನು ಸಾಕಷ್ಟು ಕಾರಣಗಳಿಂದ ಕಾನೂನು ಬಾಹಿರವೆಂದು ತೀರ್ಮಾನಿಸಿ ಘೋಷಿಸಿರುವುದನ್ನು ಏಕೆ ಒಪ್ಪಬಾರದು ಹಾಗೂ ಕಲಂ 4(3)ರಡಿ ಈ ನಿರ್ಣಯವನ್ನು ಒಪ್ಪಿಕೊಂಡು ಏಕೆ ಅಂತಹ ಘೋಷಣೆಯನ್ನು ದೃಢೀಕರಿಸಬಾರದೆಂಬುದಕ್ಕೆ ಕಾರಣಗಳನ್ನು ನೀಡಲು ತಿಳಿಸಲಾಗಿದೆ.
ಆಕ್ಷೇಪಣೆಗಳು /ಉತ್ತರ ಏನಾದರೂ ಇದ್ದಲ್ಲಿ ಒಂದು ವಾರದೊಳಗಾಗಿ ಕಚೇರಿ ಕೊಠಡಿ ಸಂಖ್ಯೆ 104, ಮೊದಲನೇ ಮಹಡಿ, ಎ ಬ್ಲಾಕ್, ದೆಹಲಿ ಉಚ್ಚ ನ್ಯಾಯಾಲಯ, ಶೇರ್ ಷಾ ರಸ್ತೆ, ನವದೆಹಲಿ-110503 ಇಲ್ಲಿಗೆ ಕಳುಹಿಸಬಹುದಾಗಿದೆ. ಆಕ್ಷೇಪಣೆಗಳು/ ಉತ್ತರ/ ದಾಖಲೆಗಳು ಪ್ರಾಂತೀಯ ಭಾಷೆಯಲ್ಲಿ ಇದ್ದಲ್ಲಿ ಅದರ ಯಥಾವತ್ತಾದ ಆಂಗ್ಲ ಭಾಷಾಂತರದ ಪ್ರತಿಯನ್ನು ಲಗತ್ತಿಸಬೇಕಿದೆ.
ನೀವು ಖುದ್ದಾಗಿ ಅಥವಾ ನಿಮ್ಮ ಅಧಿ ಕೃತ ಅನುಮತಿ ಪಡೆದ ವ್ಯಕ್ತಿಯ ಮೂಲಕ ಕೊಠಡಿ ಸಂಖ್ಯೆ 16, ದೆಹಲಿ ಉಚ್ಚ ನ್ಯಾಯಾಲಯ, ಶೇರ್ ಷಾ ರಸ್ತೆ, ನವದೆಹಲಿ – 110503 ರ ದೆಹಲಿಯಲ್ಲಿರುವ ಟ್ರಿಬ್ಯೂನಲ್ನ ಮುಂದೆ 2024ರ ಮೇ 04ರ ಸಂಜೆ 4.30 ಗಂಟೆಗೆ ಹಾಜರಾಗಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.