Monday, June 2, 2025
Homeರಾಷ್ಟ್ರೀಯ | NationalBREAKING : ಥೈಲ್ಯಾಂಡ್‌ನ ಓಪ್ಲಾ ಸುಚಾತಾ ಚುಂಗಸಿರಿಗೆ 2025ರ ವಿಶ್ವ ಸುಂದರಿ ಪಟ್ಟ

BREAKING : ಥೈಲ್ಯಾಂಡ್‌ನ ಓಪ್ಲಾ ಸುಚಾತಾ ಚುಂಗಸಿರಿಗೆ 2025ರ ವಿಶ್ವ ಸುಂದರಿ ಪಟ್ಟ

Miss Thailand Opal Suchata Crowned Miss World 2025 In Hyderabad

ಹೈದರಾಬಾದ್ : ಬಹು ನಿರೀಕ್ಷಿತ ವಿಶ್ವ ಸುಂದರಿ 2025 ಗ್ರ್ಯಾಂಡ್ ಫಿನಾಲೆ ಶನಿವಾರ ಸಂಜೆ ಹೈದರಾಬಾದ್‌ನಲ್ಲಿರುವ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಥೈಲ್ಯಾಂಡ್‌ನ ಓಪಲ್ ಸುಚಾತಾ ಚುವಾಂಗ್ಸ್ರಿ (Opal Suchata Chuangsri) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ಅದ್ಧೂರಿಯಾಗಿ ನಡೆದ ಸಮಾರಂಭದಲ್ಲಿ ಹಾಲಿ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಟೋ ಅವರು ಓಪ್ಲಾ ಸುಚಾತಾ ಚುಂಗಸಿರಿ ಅವರಿಗೆ ಕಿರೀಟ ಧಾರಣೆ ಮಾಡಿದರು.

ಅಂತರರಾಷ್ಟ್ರೀಯ ಸಂಬಂಧಗಳ ವಿದ್ಯಾರ್ಥಿನಿ ಮತ್ತು ವೃತ್ತಿಪರ ಮಾಡೆಲ್ ಆಗಿರುವ ಸುಚತಾ, ತೀವ್ರ ಪೈಪೋಟಿಯ ಅಂತಿಮ ಸುತ್ತಿನ ನಂತರ ವಿಜೇತರಾದರು. ಇಥಿಯೋಪಿಯಾದ ಹ್ಯಾಸೆಟ್ ಡೆರೆಜೆ ಮೊದಲ ರನ್ನರ್ ಅಪ್ ಆದರೆ, ಪೋಲೆಂಡ್‌ನ ಮಜಾ ಕ್ಲಾಜ್ಡಾ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದರು.

ವಿಜೇತರಿಗೆ ಒಂದು ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ ರೂಪಾಯಿಯ ಬೆಲೆ ಬಾಳುವ ವಜ್ರದ ಕಿರೀಟವನ್ನು ಅವರ ಮುಡಿಗೆ ಸಿಂಗರಿಸಲಾಯಿತು. ಇಥಿಯೋಪಿಯಾದ ಸುಂದರಿ ಮೊದಲ ರನ್ನರ್ ಅಪ್ ಆದರು. ಮೆಕ್ಸಿಕೋ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಓಪಲ್ ಥೈಲ್ಯಾಂಡ್ ಅನ್ನು ಪ್ರತಿನಿಧಿಸಿದರು, ಮೂರನೇ ರನ್ನರ್ ಅಪ್ ಆದರು.

ಅಗ್ರ 8 ರಲ್ಲಿ ಸ್ಥಾನ ಪಡೆಯುವಲ್ಲಿ ಭಾರತದ ನಂದಿನಿ ವಿಫಲ :
ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಅಂತಿಮ (ಟ್ಯಾಲೆಂಟ್ ಕಾಂಪಿಟಿಷನ್) ಸುತ್ತಿಗೆ 24 ಮಂದಿ ಆಯ್ಕೆಯಾಗಿದ್ದರು, ಇದರಲ್ಲಿ ಭಾರತದ ರಾಜಸ್ಥಾನ ಮೂಲದ ನಂದಿನಿ ಗುಪ್ತಾ ಒಬ್ಬರಾಗಿದ್ದರು. ಏಪ್ರಿಲ್ 2023 ರಲ್ಲಿ, 19ನೇ ವಯಸ್ಸಿನಲ್ಲಿ, ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್’ ಕಿರೀಟವನ್ನು ನಂದಿನಿ ಗೆದ್ದುಕೊಂಡಿದ್ದರು. ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸುವ ನಿರೀಕ್ಷೆ ಹುಟ್ಟಿಸಿದ್ದ ನಂದಿನಿ ರೇಸ್‌ನಿಂದ ಹೊರಬಿದ್ದು ಅಗ್ರ 8 ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗುವ ಮೂಲಕ ಭಾರತದ ಕನಸು ನುಚ್ಚುನೂರಾಗಿದೆ.

RELATED ARTICLES

Latest News