ಹುಬ್ಬಳ್ಳಿ,ಸೆ,29-ಕಾವೇರಿ ವಿಚಾರವಾಗಿ ವಿವಿಧ ಕನ್ನಡ ಪರ ಹಾಗೂ ರೈತ ಪರ ಸಂಘಟನೆ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೇ ಬಂದ್ ಹಿನ್ನಲೆಯಲ್ಲಿ ಪೊಲೀಸರು ಬಿಗಿ ಭಧ್ರತೆ ಮಾಡಿದ್ದರು,ಕೆಲ ಶಾಲೆಗಳು ರಜೆ ನೀಡದ ಕಾರಣ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು ಕೆಲವೆಡೆ ಮಳಿಗೆಗಳು ಮುಚ್ಚಿದ್ದರೆ ಮಾರುಕಟ್ಟೆ ತೆರೆದಿತ್ತು.
ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ಹರಿಸುತ್ತಿರುವ ಸರ್ಕಾರದ ವಿರುಧ್ದ ವಾಟಾಳ್ ಕೆಂಡ
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತು ನಗರದ ಹೊಸೂರು ಸರ್ಕಲ್ ಬಳಿ ಸಮಗ್ರ ಕರ್ನಾಟಕ ಸೇನೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಚೆನ್ನಮ್ಮ ಸರ್ಕಲ್ ವರೆಗೂ ನಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು ಕಾವೇರಿ ನಮ್ಮದು, ಕಾವೇರಿ ನಮ್ಮದು ಎಂದು ಘೋಷಣೆ ಕೂಗಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
ಪ್ರತಿಭಟನಾಕಾರರು ವಶಕ್ಕೆ:
ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತಿದ್ದ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ತೆಗೆದುಕೊಂಡರು.ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರ ತುಳಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಸ್ಟಾಲಿನ್ ದಿಕ್ಕಾರ ಕೂಗಿದರು.
ಈ ನಡುವೆ ಪೊಲೀಸರು ಕಾರ್ಯಕರ್ಯರನ್ನು ವಶಕ್ಕೆ ಪೊಲೀಸರು ನಂತರ ಹೊಸ ಸಿಎಆರ್ ಹಳೆ ಮೈದಾನಕ್ಕೆ ಕರೆದುಕೊಂಡು ಹೋದರು