ಕೆಆರ್ಪುರ,ಫೆ.3- ಸಮಾಜ ಮುಖಿ ಕಾರ್ಯಗಳು ಇತರರಿಗೆ ಮಾದರಿಯಾಗಿರುವಂತಿರಬೇಕು ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.ಹುಟ್ಟುಹಬ್ಬದ ಪ್ರಯುಕ್ತ ವಿಜಿನಾಪುರದಲ್ಲಿ ಬಡವರಿಗೆ ಉಚಿತವಾಗಿ ಅಡುಗೆ ಹೆಂಚು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಿನಾಪುರ ಪ್ರದೀಪ್ ಗೌಡರು ಹಾಗೂ ಸುನೀಲ್ರವರು ಹಲವಾರು ವರ್ಷಗಳಿಂದ ನನ್ನ ಹುಟ್ಟು ಹಬ್ಬಕ್ಕೆ ಸಾಕಷ್ಟು ಸಮಾಜುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಇಂದು ಮಹಿಳೆಯರಿಗೆ ಅನುಕೂಲವಾಗಲೆಂದು ಅಡುಗೆ ಹೆಂಚನ್ನು ಉಚಿತವಾಗಿ ನೀಡಿದ್ದಾರೆ ಎಂದರು.
ದುಂದುವೆಚ್ಚ ಮಾಡದೆ ಈ ರೀತಿಯ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ಮತದಾರರು ನೀಡಿರುವ ಜವಾಬ್ದಾರಿಯನ್ನು ಹಗಲಿರುಳು ಶ್ರಮಿಸಿ ಅವರ ಸೇವೆ ಮಾಡುತ್ತೇನೆ ಅವರ ನಂಬಿಕೆಗೆ ದೋಹವಾಗದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಮುಖಂಡ ಪ್ರದೀಪ್ ಗೌಡ ಮಾತನಾಡಿ, ಶಾಸಕ ಬೈರತಿ ಬಸವರಾಜ ಅಂತವರು ನಮಗೆ ಶಾಸಕರಾಗಿ ಸಿಕ್ಕಿರುವುದು ನಮ ಪುಣ್ಯ, ಎಲ್ಲಾ ಜಾತಿ, ಧರ್ಮದವರನ್ನು ಒಂದೇ ರೀತಿಯಲ್ಲಿ ಕಂಡು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಧೀಮಂತ ನಾಯಕ ಎಂದರು.
ಮನೆ ಬಾಗಿಲಿಗೆ ಬರುವ ಬಡವರು ಸಮಸ್ಯೆಗೆ ಪರಿಹಾರ ಸಿಗದೆ ಹಿಂದಿರುಗಿಸಿದ ಉದಾಹರಣೆ ಇಲ್ಲ , ಇಂತವರ ಬೆಂಬಲಕ್ಕೆ ಸದಾ ನಾವು ನಿಲ್ಲುತ್ತೇವೆ ಎಂದರು.ಶಾಸಕ ಬೈರತಿ ಬಸವರಾಜ ಅವರ ಹುಟ್ಟು ಹಬ್ಬದ ಅಂಗವಾಗಿ ಅಡುಗೆ ಹೆಂಚನ್ನು ನೀಡಿದ್ದು ಇದರ ಸದುಪಯೋಗ ಮಹಿಳೆಯರು ಪಡೆಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮುನೇಗೌಡ, ಮುಖಂಡರಾದ ರಾಜಣ್ಣ, ಪ್ರವೀಣ್, ಸುನೀಲ್, ದೀಪು ನಾಗರಾಜ್ ಮತ್ತಿತರರಿದ್ದರು.