ಕೆಆರ್ ಪುರ, ನ.13– ಕ್ಷೇತ್ರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಶಾಸಕ ಬೈರತಿ ಬಸವರಾಜ ಅವರು ಸ್ವತಃ ತಾವೇ ರಸ್ತೆಯಲ್ಲಿ ನಿಂತು ಟ್ರಾಫಿಕ್ ಪೊಲೀಸರಂತೆ ಕೆಲಸ ಮಾಡಿ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿಸಿದ್ದಾರೆ.
ಕೆಆರ್ ಪುರದ ಐಟಿಐ ಬಳಿ ಕೆಲಸದ ನಿಮಿತ್ತ ತಮ ಕಾರಿನಲ್ಲಿ ಹೋಗಬೇಕಾದರೆ ಟ್ರಾಫಿಕ್ ಜಾಮ್ ಆಗಿದ್ದು, ಸಾಕಷ್ಟು ಸಮಯ ಕಾದು ನೋಡಿದರೂ ಸಮಸ್ಯೆ ಬಗೆಹರಿದಿಲ್ಲ. ಖುದ್ದು ತಾವೇ ಕಾರಿನಿಂದ ಇಳಿದು ಐಟಿಐ ಸರ್ಕಲ್ ಬಳಿ ತೆರಳಿ ವಾಹನಗಳನ್ನು ಒಂದೇ ಬದಿಯಲ್ಲಿ ಕಳುಹಿಸುವ ಮೂಲಕ ಟ್ರಾಫಿಕ ಜಾಮ್ ಕ್ಲಿಯರ್ ಮಾಡಿದ್ದಾರೆ. ಸ್ಥಳದಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಇಲ್ಲದ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಕೆಆರ್ ಪುರ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಐಟಿಐನಿಂದ ಮೇಡಹಳ್ಳಿವರೆಗೂ ಮೇಲ್ಸೇತುವೆ ಅವಶ್ಯಕತೆ ಇದ್ದು, ಇದನ್ನು ಕಾಂಗ್ರೆಸ್ ಸರ್ಕಾರ ತಡೆದಿದೆ. ಈ ಸೇತುವೆ ಬಂದರೆ ಯಾವುದೇ ರೀತಿಯ ಟ್ರಾಫಿಕ್ ಕಿರಿಕಿರಿಯಾಗುವುದಿಲ್ಲ ಎಂದಿದ್ದಾರೆ. ತಡವಾದರೂ ಟ್ರಾಫಿಕ್ ರೂಲ್ಸ್ ಕಾಪಾಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.