Sunday, November 24, 2024
Homeರಾಜಕೀಯ | Politicsಶಾಸಕ ಮುನಿರತ್ನ ವಿಶ್ವದಲ್ಲೇ ಕಂಡುಕೇಳರಿಯದಂತಹ ಸಂಚು ಮಾಡಿದ್ದಾರೆ : ಡಿಕೆಶಿ

ಶಾಸಕ ಮುನಿರತ್ನ ವಿಶ್ವದಲ್ಲೇ ಕಂಡುಕೇಳರಿಯದಂತಹ ಸಂಚು ಮಾಡಿದ್ದಾರೆ : ಡಿಕೆಶಿ

MLA Munirathna has hatched a conspiracy that is not seen in the world: DK

ಬೆಂಗಳೂರು,ಸೆ.21- ವಿಶ್ವದಲ್ಲೇ ಕಂಡಿರದಂತಹ ಸಂಚನ್ನು ಆರ್‌ಆರ್‌ ನಗರ ಕ್ಷೇತ್ರದ ಶಾಸಕ ಮುನಿರತ್ನ ಸ್ವಪಕ್ಷ ಹಾಗೂ ವಿರೋಧಪಕ್ಷದ ವಿರುದ್ಧ ನಡೆಸಿದ್ದಾರೆ. ಬಿಜೆಪಿ, ಜೆಡಿಎಸ್‌‍ ನಾಯಕರು ಸತ್ಯಾಸತ್ಯತೆ ತಿಳಿದು ಮಾತನಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾರ್ಯಾರು ಸಿಕ್ಕಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಮಾತನಾಡುವುದು ಒಳ್ಳೆಯದು ಎಂದರು.

ಮುನಿರತ್ನ ಪ್ರಕರಣದಲ್ಲಿ ಎಸ್‌‍ಐಟಿ ರಚನೆ ಮಾಡಬೇಕೆಂಬುದು ನಮ ಪಕ್ಷದ ಶಾಸಕರು, ಸಚಿವರು, ಕೆಲ ಮುಖಂಡರು ಮನವಿ ಮಾಡಿರುವ ಬಗ್ಗೆ ಹೆಚ್ಚಿನ ಚರ್ಚೆಯಾಗಿಲ್ಲ. ಆದರೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ಕೇಳಿ ದಿಗ್ಭ್ರಮೆಯಾಯಿತು. ದೇಶದಲ್ಲಷ್ಟೇ ಅಲ್ಲ ವಿಶ್ವದಲ್ಲೇ ಈ ರೀತಿಯ ಸಂಚನ್ನು ನಾನು ನೋಡಿಲ್ಲ ಎಂದು ಹೇಳಿದರು.

ಸಿ.ಟಿ.ರವಿಯಣ್ಣ, ಅಶೋಕಣ್ಣ, ವಿಜಯೇಂದ್ರಣ್ಣ, ಕುಮಾರಣ್ಣ ಅವರು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮಾತನಾಡಬೇಕು. ತಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಿದರು.ಮುನಿರತ್ನ ಪ್ರಕರಣದಲ್ಲಿ ಜೆಡಿಎಸ್‌‍, ಬಿಜೆಪಿ ಮುಖಂಡರು ಉತ್ತರ ಕೊಡಬೇಕು, ನಾವುಗಳಲ್ಲ ಎಂದರು.

ಈ ಪ್ರಕರಣದಲ್ಲಿ ಸೇಡಿನ ರಾಜಕಾರಣ, ಟೀಕೆಗಳು ಮಾಡುತ್ತಿದ್ದಾರೆ. ಬಿಜೆಪಿ ಅಶ್ವತ್ಥ ನಾರಾಯಣ ಹಾಗೂ ಮತ್ತಿತರರು ನನ್ನನ್ನು ನೆನಪಿಸಿಕೊಳ್ಳಬೇಕು. ಇಲ್ಲದೇ ಇದ್ದರೆ ಅವರಿಗೆ ದಿನ ಬೆಳಗಾಗುವುದೇ ಇಲ್ಲ. ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಜೆಡಿಎಸ್‌‍, ಬಿಜೆಪಿ ನಾಯಕರನ್ನು ಜನ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿಯವರ ಡಿ ನೋಟಿಫಿಕೇಶನ್‌ ಪ್ರಕರಣದ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಬೆಂಗಳೂರಿನಲ್ಲಿ ಇರುವ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಿನ್ನೆಗೆ ಮುಕ್ತಾಯವಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಗುಂಡಿಗಳ ಲೆಕ್ಕವೂ ನನ್ನ ಮೊಬೈಲ್‌ನಲ್ಲಿದೆ.

ತಾವು ಸೂಚನೆ ನೀಡಿದ ಬಳಿಕ ಬಿಬಿಎಂಪಿ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ತಮ 40 ವರ್ಷಗಳ ಜೀವನದಲ್ಲಿ ಈ ರೀತಿ ಅಭಿಯಾನದ ಮೂಲಕ ಕೆಲಸ ಆಗಿದ್ದನ್ನು ಮೊದಲು ನೋಡುತ್ತಿದ್ದೇನೆ ಎಂದರು.

ರಸ್ತೆಗುಂಡಿ ಮುಚ್ಚಿರುವ ಗುಣಮಟ್ಟ ಪರಿಶೀಲನೆ ಮಾಡುತ್ತೇನೆ. ಜೊತೆಗೆ ರಾತ್ರಿ ವೇಳೆ ನಗರ ಪ್ರದಕ್ಷಿಣೆ ಹಮಿಕೊಳ್ಳುತ್ತೇನೆ. ಎಲ್ಲೆಲ್ಲಿ ಗುಂಡಿ ಮುಚ್ಚಿದ್ದಾರೆ, ಎಲ್ಲೆಲ್ಲಿ ಬಾಕಿ ಇದೆ ಎಂಬುದನ್ನು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.

ಮಧ್ಯದಲ್ಲಿ ಮಳೆ ಹಾಗೂ ಇತರ ಸಮಸ್ಯೆಗಳಿಂದಾಗಿ ನಿಧಾನವಾಗಿ ಕೆಲಸಗಳಾಗಿವೆ. ಏನೇ ಆದರೂ ನಮ ಬದ್ಧತೆಯಂತೆ ನಾಗರಿಕರಿಗೆ ಉತ್ತಮ ಸೌಲಭ್ಯ ಒದಗಿಸಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ಹಾಗೂ ನಗರಗಳಲ್ಲಿನ ಪರಿಸ್ಥಿತಿ ನೋಡಿದರೆ ಅವಮಾನವಾಗುತ್ತದೆ. ಬೇರೆ ರಾಜ್ಯಗಳಿಗಿಂತ ನಮಲ್ಲಿ ಉತ್ತಮ ವ್ಯವಸ್ಥೆ ಇದೆ ಎಂದರು.

RELATED ARTICLES

Latest News