Saturday, March 29, 2025
Homeರಾಜ್ಯಆಸ್ತಿವಿವರ ಸಲ್ಲಿಸಲು ಶಾಸಕರಿಗೆ ಜೂ.30ರ ಗಡುವು

ಆಸ್ತಿವಿವರ ಸಲ್ಲಿಸಲು ಶಾಸಕರಿಗೆ ಜೂ.30ರ ಗಡುವು

MLAs have until June 30 to submit their assets and liabilities to the Lokayukta

ಬೆಂಗಳೂರು,ಮಾ.26- ಶಾಸಕರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಜೂನ್ 30ರೊಳಗೆ ಲೋಕಾಯುಕ್ತರಿಗೆ ಸಲ್ಲಿಸಬೇಕಾಗಿದೆ.

16ನೇ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು 2024-25ನೇ ಸಾಲಿಗೆ ಸಂಬಂಧಿಸಿದ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಲೋಕಾಯುಕ್ತರಿಗೆ ಸಲ್ಲಿಸಬೇಕಿದೆ.

ಲೋಕಾಯುಕ್ತರಿಗೆ ಆಸ್ತಿವಿವರವನ್ನು ಶಾಸಕರು ನೇರವಾಗಿ ಸಲ್ಲಿಸಿ ಅದರ ಮಾಹಿತಿಯನ್ನು ಸಚಿವಾಲಯಕ್ಕೆ ನೀಡುವಂತೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಲೋಕಾಯುಕ್ತ ನಿಬಂಧಕರು ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984ರ ಕಲಂ 7 ರ ಉಪಕಲಂ (1ರಡಿ) ಉಲ್ಲೇಖಿಸಿರುವಂತೆ ಪ್ರತಿಯೊಬ್ಬ ವಿಧಾನಸಭೆಯ ಸದಸ್ಯರು ಆಯಾ ವರ್ಷದ ಜೂ.30ರೊಳಗಾಗಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ಮತ್ತು ದಾಯಿತ್ವದ ಪಟ್ಟಿಯನ್ನು ನಿಗದಿಪಡಿಸಲಾದ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕಾಗಿದೆ. ಇದೇ ಕಾನೂನು ವಿಧಾನಪರಿಷತ್ ಸದಸ್ಯರಿಗೂ ಅನ್ವಯವಾಗಲಿದೆ.

RELATED ARTICLES

Latest News