Home ಇದೀಗ ಬಂದ ಸುದ್ದಿ ಶಾಸಕರ ಸಂಬಂಧಿಯನ್ನು ಗುಂಡಿಕ್ಕಿ ಕೊಂದ ಅಪರಿಚಿತ ಹಂತಕ

ಶಾಸಕರ ಸಂಬಂಧಿಯನ್ನು ಗುಂಡಿಕ್ಕಿ ಕೊಂದ ಅಪರಿಚಿತ ಹಂತಕ

0
ಶಾಸಕರ ಸಂಬಂಧಿಯನ್ನು ಗುಂಡಿಕ್ಕಿ ಕೊಂದ ಅಪರಿಚಿತ ಹಂತಕ

ಖಗರಿಯಾ, ಏ. 10 : ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಜೆಡಿಯು ಶಾಸಕ ಪನ್ನಾ ಲಾಲ್ ಸಿಂಗ್ ಪಟೇಲ್ ಅವರ ಸಂಬಂಧಿಯನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಕೌಶಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ರಾತ್ರಿ ಚೌಥಮ್ ಪಟ್ಟಣದ ಕೈಥಿ ತೋಲಾ ಪ್ರದೇಶದಲ್ಲಿ ತನ್ನ ಪತ್ನಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.ಮಾಜಿ ಪಂಚಾಯತ್ ಸಮಿತಿ ಸದಸ್ಯರಾಗಿದ್ದ ಸಿಂಗ್, ಬೆಲೌನದ ಜೆಡಿಯು ಶಾಸಕ ಪನ್ನಾ ಲಾಲ್ ಸಿಂಗ್ ಪಟೇಲ್ ಅವರ ಸಂಬಂಧಿಯಾಗಿದ್ದರು.

ಮೃತರು ಜೆಡಿಯು ಜಿಲ್ಲಾ ಘಟಕದ ಪಕ್ಷದ ಕಾರ್ಯಕರ್ತ ಎಂದು ಸ್ಥಳೀಯರು ಹೇಳಿದ್ದಾರೆ. ಮೃತನ ಪತ್ನಿಯ ಪ್ರಕಾರ, ಒಬ್ಬ ವ್ಯಕ್ತಿ ಬಂದು ಸಿಂಗ್ ಅವರನ್ನು ಪಾಯಿಂಟ್-ಬ್ಲಾಂಕ್ ರೇಂಜ್‌ನಿಂದ ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಖಗರಿಯಾ ಎಸ್ಪಿ ಹೇಳಿದರು.