ಬೆಂಗಳೂರು, ಸೆ.24- ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಜಿಬಿಎ ಅಧಿಕಾರಿಗಳಿಗೆ ಗ್ರೇಟರ್ ಐಡಿಯಾಗಳು ಬರತೊಡಗಿವೆ. ಸಾರ್ವಜನಿಕರು ನಗರದಲ್ಲಿ ಇ-ಖಾತಾ ಪಡೆಯಲು ಹೆಣಗಾಡುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಖಾತಾ ನೀಡಲು ಗ್ರೇಟ್ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ.
ಹೀಗಾಗಿ ಇನ್ನು ಮುಂದೆ ಸಾರ್ವಜನಿಕರು ತಮ ಮೊಬೈಲ್ಗಳಲ್ಲೇ ಆ್ಯಪ್ ಡೌನ್ಲೋಡ್ ಮಾಡಿಕೊಂಡು ತಮ ಇ-ಖಾತಾ ಪಡೆದುಕೊಳ್ಳಬಹುದಾಗಿದೆ.ಇದುವರೆಗೂ ಜನರು ತಮ ಆಸ್ತಿಗಳ ಇ-ಖಾತಾ ಪಡೆಯಲು ಪಾಲಿಕೆ ಕಚೇರಿಗಳು, ಸೈಬರ್ ಸೆಂಟರ್ಗಳು ಹಾಗೂ ಬೆಂಗಳೂರು ಒನ್ ಸೆಂಟರ್ಗಳಿಗೆ ಅಲೆಯುವಂತಾಗಿತ್ತು. ಹೀಗಾಗಿ ಜನಸ್ನೇಹಿ ಖಾತಾ ಆ್ಯಪ್ ರಚನೆ ಮಾಡಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಇ-ಖಾತಾ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತಿದ್ದು, ಜನ ತಮ ಮೊಬೈಲ್ ಮೂಲಕವೇ ಇ-ಖಾತೆಗೆ ಅರ್ಜಿ ಸಲ್ಲಿಸಿ ಖಾತೆ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.