ಬೆಂಗಳೂರು,ಮೇ6- ಕೇಂದ್ರ ಗೃಹ ಇಲಾಖೆಯ ಸೂಚನೆ ಮೇರೆಗೆ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾಳೆ ಅಣಕು ಪ್ರದರ್ಶನ ನಡೆಯಲಿದೆ. ಬೆಂಗಳೂರು, ರಾಯಚೂರು ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಮಾಡಲು ನಿರ್ಧಾರ ಮಾಡಲಾಗಿದೆ.
ಈ ಬಗ್ಗೆ ಈಗ ಕೇಂದ್ರ ಅಗ್ನಿಶಾಮಕ ದಳ, ಸಿವಿಲ್ ಡಿಫ್ಸೃ್ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆ ಸಂಬಂಧಿಸಿದಂತೆ ಹೆಚ್ಚು ಬೇಸ್ ಗಳು ಹಾಗೂ ಕಚೇರಿಗಳಿದ್ದು, ಸಂಜೆ 4 ಗಂಟೆ ಮಾಡಲು ನಿರ್ಧಾರ ಮಾಡಲಾಗಿದೆ. ಕೆಎಎ, ಕೆಎಸ್‌ಎಸ್ ಸಿವಿಲ್ ಡಿಫ್ಸೃ್, ವೈದ್ಯರುಗಳು, ಭಾಗಿಯಾಗಲಿದ್ದಾರೆ. ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ದಳ ಪೊಲೀಸ್ ಠಾಣೆಗಳ ಮೇಲೆ ಸೈರನ್ ಇರಲಿದೆ. 35 ಕಡೆ ಇದ್ದು, 32 ಕೆಲಸ ಮಾಡುತ್ತಿದೆ.
ಕಳೆದ ತಡರಾತ್ರಿಯೇ ಸಿವಿಲ್ ಡಿಫ್ಸೆ್ ಕಚೇರಿಗೆ ಮೇಲ್ ರವಾನೆ ಆಗಿದ್ದು, ಶತ್ರುಗಳ ದಾಳಿಯಿಂದ ಜನರನ್ನ ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಆಯಾ ರಾಜ್ಯಗಳ ಸಿವಿಲ್ ಡಿಫ್ಸೆ್ ಮುಖ್ಯಸ್ಥರಿಗೆ ಮಾಹಿತಿ, ಸಲಹೆಗಳನ್ನ ಮೇಲಾಧಿಕಾರಿಗಳು ನೀಡಿದ್ದಾರೆ.ಜನರು ಏನ್ ಮಾಡಬೇಕು. ಮಾಡಬಾರದು ಎಂಬುದರ ಬಗ್ಗೆ ಕೇಂದ್ರದಿಂದ ಸುತ್ತೋಲೆ ಬರುತ್ತದೆ. ಒಂದು ವಾರದ ಕಾಲ ಅಣುಕು ಪ್ರದರ್ಶನ ನಡೆಯಲಿದೆ.
ಜನರು ಅನಗತ್ಯವಾಗಿ ಆತಂಕಕ್ಕೆ ಒಳಪಡಬೇಕಾದ ಅಗತ್ಯವಿಲ್ಲ ಎಂದು ಅದಿಕಾರಿಗಳು ಮಾಹಿತಿ ನೀಡಿದ್ದಾರೆ. ಏಕೆಂದರೆ ಇದು ಕೇವಲ ತರಬೇತಿ ವ್ಯಾಯಾಮವಾಗಿದೆ. ನಿಜವಾದ ತುರ್ತು ಸಂದರ್ಭದಲ್ಲಿ , ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ, ಉದಾಹರಣೆಗೆ, ಮನೆಯ ಒಳಗೆ, ಕಟ್ಟಡದ ಒಳಗೆ, ಅಥವಾ ಸರ್ಕಾರವು ಗೊತ್ತುಪಡಿಸಿದ ಬಂಕರ್‌ಗೆ ತೆರೆದ ಪ್ರದೇಶಗಳಿಂದ ದೂರವಿರಬೇಕು. ಟಿವಿ, ರೇಡಿಯೋ, ಅಥವಾ ಸರ್ಕಾರದ ಅಧಿಕೃತ ಎಚ್ಚರಿಕೆ ಸಂದೇಶಗಳಿಗೆ ಗಮನ ಹರಿಸಬೇಕು. ವದಂತಿಗಳನ್ನು ನಂಬದಿರಿ ಮತ್ತು ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ವಾಯುದಾಳಿ ಎಚ್ಚರಿಕೆ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವುದು. ಭಾರತೀಯ ವಾಯುಸೇನೆಯೊಂದಿಗಿನ ಹಾಟ್‌ಲೈನ್/ರೇಡಿಯೊ ಸಂಪರ್ಕ ಲಿಂಕ್‌ಗಳ ಕಾರ್ಯಾಚರಣೆ.ನಿಯಂತ್ರಣ ಕೊಠಡಿಗಳು ಮತ್ತು ಶ್ಯಾಡೋ ನಿಯಂತ್ರಣ ಕೊಠಡಿಗಳ ಕಾರ್ಯನಿರ್ವಹಣೆಯನ್ನು ಪರೀಕ್ಷಿಸುವುದು.
ಶತ್ರು ದಾಳಿಯ ಸಂದರ್ಭದಲ್ಲಿ ಸ್ವರಕ್ಷಣೆಗಾಗಿ ನಾಗರಿಕರು, ವಿದ್ಯಾರ್ಥಿಗಳಿಗೆ ನಾಗರಿಕ ರಕ್ಷಣಾ ತರಬೇತಿ. ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳನ್ನು ಒದಗಿಸಬೇಕು. ಪ್ರಮುಖ ಸ್ಥಾವರಗಳು, ಕಟ್ಟಡಗಳನ್ನು ಮರೆಮಾಚುವ ವ್ಯವಸ್ಥೆ. ನಾಗರಿಕ ರಕ್ಷಣಾ ಸೇವೆಗಳ ಸಕ್ರಿಯಗೊಳಿಸುವಿಕೆ ಮತ್ತು ಪ್ರತಿಕ್ರಿಯೆಯನ್ನು ಪರಿಶೀಲಿಸುವುದು, ಇದರಲ್ಲಿ ವಾರ್ಡನ್ ಸೇವೆಗಳು, ಅಗ್ನಿಶಾಮಕ, ರಕ್ಷಣಾ ಕಾರ್ಯಾಚರಣೆಗಳು ಮತ್ತು ಡಿಪೋ ನಿರ್ವಹಣೆ ಸೇರಿವೆ.
ಸ್ಥಳಾಂತರ ಯೋಜನೆಗಳ ಸಿದ್ಧತೆ ಮತ್ತು ಅವುಗಳ ಜಾರಿಯನ್ನು ಮೌಲ್ಯಮಾಪನ ಮಾಡುವುದು. ಈ ಅಣುಕು ಅಭ್ಯಾಸವನ್ನು ಗ್ರಾಮ ಮಟ್ಟದವರೆಗೆ ನಡೆಸಲು ಯೋಜಿಸಲಾಗಿದೆ. ಈ ಕಸರತ್ತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ಮತ್ತು ವೃದ್ಧಿಸಲು ಗುರಿಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಗೃಹ ಸಚಿವಾಲಯದ ಆದೇಶವು, ಈ ಕಸರತ್ತಿನಲ್ಲಿ ಜಿಲ್ಲಾ ನಿಯಂತ್ರಕರು, ಸ್ಥಳೀಯಾಡಳಿತ, ನಾಗರಿಕ ರಕ್ಷಣಾ ವಾರ್ಡನ್‌ಗಳು, ಸ್ವಯಂಸೇವಕರು, ಹೋಂ ಗಾರ್ಡ್‌ಗಳು (ಸಕ್ರಿಯ ಮತ್ತು ಮೀಸಲು), ರಾಷ್ಟ್ರೀಯ ಕೆಡೆಟ್ ಕಾಪ್‌್ಸ್ರ (ಎನ್‌ಸಿಸಿ), ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ನೆಹರು ಯುವ ಕೇಂದ್ರ ಸಂಘಟನೆ (ಎನ್‌ವೈಕೆಎಸ್) ಮತ್ತು ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ ಎಂದು ಹೇಳಿದೆ.