ಬೆಂಗಳೂರು, ಅ.10– ನಗರದ ಸಂಚಾರ ದಟ್ಟಣೆಯನ್ನು ನಿರ್ವವಣೆ ಮಾಡಲು ಬಿಎಟಿಸಿಎಸ್ ಮೂಲಕ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದು, ಮುಂದಿನ ದಿನಗಳಲ್ಲಿ ಸುಗಮ ಸಂಚಾರ ಹಾಗೂ ಇಂಧನ ದಕ್ಷತೆ ಕಾರ್ಯಸಾಧುವಾಗಲಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಾರ್ಚ್‌ನಿಂದ ಬೆಂಗಳೂರು ನಗರದಲ್ಲಿ ಬಿಎಟಿಸಿಎಸ್ ಮೂಲಕ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಲಾಗಿದೆ. ಮುಂದಿನ ವರ್ಷದ ಮಾರ್ಚ್ ಒಳಗೆ ನಗರದ 165 ಜಂಕ್ಷನ್‌ನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ 14 ಸಾವಿರ ಕಿಲೋ ಮೀಟರ ರಸ್ತೆ ಇದೆ. 1.20 ಲಕ್ಷ ವಾಹನ ಸಂಖ್ಯೆ ಇದೆ. ದೇಶದಲ್ಲೇ ಹೆಚ್ಚು ಖಾಸಗಿ ವಾಹನಗಳನ್ನು ಬೆಂಗಳೂರು ಹೊಂದಿದೆ. 400ಕ್ಕಿಂತ ಹೆಚ್ಚು ಸಂಚಾರ ದೀಪಗಳಿವೆ. ವರ್ಷಾಂತ್ಯಕ್ಕೆ 500 ಟ್ರಾಫಿಕ್ ಸಿಗ್ನಲ್‌ಗಳಿವೆ. 160 ಜಂಕ್ಷನ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯಾಗಿದೆ. ಕಾಸಿ ಕಾಸ್ಟ್ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತಿದೆ. ಬೆಂಗಳೂರು ನಗರ ಸೇರಿದಂತೆ 30ಕ್ಕೂ ಹೆಚ್ಚು ನಗರಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ದೇಶದ ಸಂಚಾರದ ವಿಶೇಷತೆ ಆಧರಿಸಿ ತಂತ್ರಜ್ಞಾನದಲ್ಲಿ ಪರಿಹಾರ ಕಂಡು ಹಿಡಿಯಲಾಗಿದೆ. ಬೆಂಗಳೂರಿನಲ್ಲಿ ಶೇ.68ರಷ್ಟು ದಿಚಕ್ರವಾಹನಗಳಿವೆ. ಹೊಸ ತಂತ್ರಜ್ಞಾನ ಇವುಗಳ ಸಂಚಾರಕ್ಕೆ ಅನುಕೂಲವಾಗಲಿದೆ.
ಮ್ಯಾನುವಲ್ ಮೋಡ್, ಫಿಕ್ಸ್ಟೈಮ್ ಸಿಗ್ನಲ್, ವೆಹಿಕಲ್ ಆಕಿಯೆಡೆಡ್ ಮೋಡ್, ಅಡಾಪ್ಟೆಡ್ ಟ್ರಾಫಿಕ್ ಮೋಡ್, ಮ್ಯಾನುವಲ್ ಮೋಡ್ ಕಡಿಮೆ ಮಾಡಿ, ವೆಹಿಕಲ್ ಆಕ್ಸಿಯೆಟೆಡ್ ಮತ್ತು ಅಡಾಪ್ಟೆಡ್ ಟ್ರಾಫಿಕ್ ಮೋಡ್‌ಗಳನ್ನು ಹೆಚ್ಚಿಸಲಾಗುವುದು. ಫಿಕ್ಸ್ ಟೈಮ್ ಸಿಗ್ನಲ್ ನಲ್ಲಿ ಅಧ್ಯಯನ ಆಧಾರಿತವಾಗಿ ಸಿಗ್ನಲ್‌ಗೆ ಸಮಯ ನೀಡುವುದಾಗಿದೆ. ಅದರಲ್ಲಿ ಕೆಲ ಸಮಯದಲ್ಲಿ ವಾಹನಗಳ ದಟ್ಟಣೆ ಹೆಚ್ಚು ಕಡಿಮೆಯಾಗಲಿದ್ದು, ಸುಗಮ ಸಂಚಾರಕ್ಕೆ ಪೂರಕವಾಗಿರುವುದಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ವೆಹಿಕಲ್ ಆಕ್ಸಿಯೆಟೆಡ್ ಕಂಟ್ರೋಲರ್ ನಲ್ಲಿ ನಿಗದಿ ಪಡಿಸಿದಷ್ಟು ವಾಹನಗಳು ಬಂದಾಗ ಸಂಚಾರ ದೀಪ ಹಸಿರು ತೋರಿಸುತ್ತದೆ. ಸಿಂಕ್ರನೈಸ್ ಮೋಡ್‌ನಲ್ಲಿ ಒಂದಕ್ಕಿಂತ ಮತ್ತೊಂದು ಸಿಗ್ನಲ್‌ಗೆ ಸರಿಯಾಗಿ ಹಸಿರು ದೀಪ ಹತ್ತಿಕೊಳ್ಳಲು ಸಾಧ್ಯವಾಗುತ್ತದೆ.
ತುರ್ತು ಸಂದರ್ಭದ ವಾಹನಗಳಿಗೂ ಸಿಗ್ನಲ್ ಒಪನ್ ಆಗಿಡಲು ಅವಕಾಶ ಇದೆ. ಮ್ಯಾನುವಲ್ ಮೊಡ್ ಬಳಕೆಯನ್ನು ಅಗತ್ಯ ಸಂದರ್ಭದಲ್ಲಿ ಅಲ್ಲದೆ ಹೆಚ್ಚು ಬಳಸುವುದಿಲ್ಲ. 160 ಜಂಕ್ಷನ್‌ನಲ್ಲಿ ಈವರೆಗೂ ಶೇ.5ರಷ್ಟು ಮಾತ್ರ ಮ್ಯಾನುವಲ್ ಮೊಡ್ ಬಳಕೆಯಾಗಿದೆ. ಪಿಕ್ ಅವರ್‌ನಲ್ಲಿ ಎಐ ಮೂಲಕವೇ ಸಂಚಾರ ದೀಪಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಹಡ್ಸನ್ ಸರ್ಕಲ್ ಹಾಗೂ ಸುತ್ತಮುತ್ತಾ ಸಿಂಕ್ರನೈಸ್ ಮಾಡಲಾಗಿದೆ. ಇದರಿಂದ ಶೇ.33ರಷ್ಟು ವಾಹನಗಳ ಸಂಚಾರ ಸುಗಮವಾಗಿದೆ ಎಂದು ಅನುಚೇತ್ ಅವರು ತಿಳಿಸಿದರು.
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜಂಕ್ಷನ್‌ಗಳಲ್ಲಿ ನೂತನ ತಂತ್ರಜ್ಞಾನ
ನಗರದಲ್ಲಿ ವಾಹನಗಳ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು 165 ಜಂಕ್ಷನ್‌ಗಳಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದರು. ನಗರ ಸಂಚಾರ ಪೊಲೀಸರ ನೂತನ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬಿಎಟಿಸಿಎಸ್ ಎಂಬ ವಿನೂತನ ಉಪಕ್ರಮ ಅನುಷ್ಠಾನಗೊಳಿಸಲಾಗುತ್ತದೆ. ಪ್ರಮುಖವಾಗಿ ಜಂಕ್ಷನ್‌ಗಳಲ್ಲಿ ಸಂಚಾರ ನಿಯಂತ್ರಣ, ಮಾಲಿನ್ಯ ನಿಯಂತ್ರಿಸಲು ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಶೇ.50ರಷ್ಟು ಪೂರ್ಣಗೊಂಡಿದೆ. ಅದರಲ್ಲಿ ಎಐ ಅಳವಡಿಸಲಾಗಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ತಂತ್ರಜ್ಞಾನ ಅಳವಡಿಕೆ ಕಾರ್ಯ ಮುಕ್ತಾಯವಾಗಲಿದೆ ಎಂದರು.
ಸಂಚಾರ ದಟ್ಟಣೆಗೆ ಪ್ರಾರಂಭದಿಂದಲೂ ತಂತ್ರಜ್ಞಾನ ಬಳಸಿ ಕೊಂಡು ವಾಹನಗಳ ಸಂಚಾರ ನಿಯಂತ್ರಣ ಮಾಡಲಾಗುತ್ತಿದೆ. ಸಾಕಷ್ಟು ನೂತನ ತಂತ್ರಜ್ಞಾನಗಳನ್ನು ಈಗಾಗಲೇ ಅಳವಡಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ನಗರ ಸಂಚಾರಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.