Thursday, May 29, 2025
Homeರಾಷ್ಟ್ರೀಯ | National'ಆಪರೇಷನ್‌ ಸಿಂಧೂರ್‌'ನಲ್ಲಿ ಆಧುನಿಕ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ಬಳಕೆ

‘ಆಪರೇಷನ್‌ ಸಿಂಧೂರ್‌’ನಲ್ಲಿ ಆಧುನಿಕ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ಬಳಕೆ

Modern weapons and missiles used in 'Operation Sindoor'

ನವದೆಹಲಿ,ಮೇ.7- ಆಪರೇಷನ್‌ ಸಿಂಧೂರ್‌ನಲ್ಲಿ ಭಾರತವು ಅನೇಕ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಬಳಸಿದೆ. ಭಾರತೀಯ ಸೇನೆಯು ರಫೇಲ್‌ ಜೆಟ್‌ಗಳಲ್ಲಿ ಅಳವಡಿಸಲಾದ ಸ್ಕಾಲ್ಪ್‌‍ ಕ್ರೂಸ್‌‍ ಕ್ಷಿಪಣಿ, ಹ್ಯಾಮರ್‌ ಕ್ಷಿಪಣಿ ಹಾಗೂ ಆತಾಹುತಿ ಡೋನ್‌ಗಳಂಥ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ.

ಆಪರೇಷನ್‌ ಸಿಂಧೂರ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸ್ಕಾಲ್ಪ್‌‍ ಕ್ರೂಸ್‌‍ ಕ್ಷಿಪಣಿಯನ್ನು ಬಳಸಿವೆ. ಇದನ್ನು ಯುರೋಪಿಯನ್‌ ರಕ್ಷಣಾ ಕಂಪನಿ ಎಂಬಿಡಿಎ ತಯಾರಿಸಿದೆ. ಇದು ಸುಮಾರು 1,300 ಕಿಲೋಗ್ರಾಂಗಳಷ್ಟು (2,870 ಪೌಂಡ್‌ಗಳು) ತೂಕವಿದ್ದು, ಗಟ್ಟಿಯಾದ ಬಂಕರ್ಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳಂತಹ ಗುರಿಗಳನ್ನು ನಾಶಮಾಡುವ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ. ಇದರ ವ್ಯಾಪ್ತಿಯು 250 ರಿಂದ 560 ಕಿಲೋಮೀಟರ್‌ ಆಗಿದೆ. ಇದರ ವೇಗ ಗಂಟೆಗೆ ಸುಮಾರು 1000 ಕಿಲೋಮೀರ್ಟ.

ಸ್ಕಾಲ್ಪ್‌‍ ಕ್ಷಿಪಣಿಯು ಜಿಪಿಎಸ್‌‍ ಸೇರಿ ಅತ್ಯಾಧುನಿಕ ನ್ಯಾವಿಗೇಷನ್‌ ವ್ಯವಸ್ಥೆಗಳನ್ನು ಬಳಸಿಕೊಂಡು ಸರಿಯಾದ ಹಾದಿಯಲ್ಲಿ ಚಲಿಸುವಂತೆ ಮಾಡುತ್ತದೆ. ಈ ಕ್ಷಿಪಣಿಯು ಬಾಂಬ್‌ ರಾಯಲ್‌ ಆರ್ಡನೆನ್‌್ಸ ಆಗೆಂಟೆಡ್‌ ಚಾರ್ಜ್‌ನೊಂದಿಗೆ ಸಜ್ಜುಗೊಂಡಿದ್ದು, ಇದು ಬಂಕರ್‌ಗಳು ಮತ್ತು ಬಲವಾದ ಗುರಿಗಳನ್ನು ಸಹ ಭೇದಿಸಬಲ್ಲದು. 2020 ರಲ್ಲಿ ಲಡಾಖ್‌ನಲ್ಲಿನ ಉದ್ವಿಗ್ನತೆಯ ಸಮಯದಲ್ಲಿ, ಚೀನಾದ ಟಿಬೆಟ್‌ ಪ್ರದೇಶದ ಗುರಿಗಳ ಮೇಲೆ ದಾಳಿ ಮಾಡಲು ಸ್ಕಾಲ್ಪ್‌‍ ಹೊಂದಿದ ರಫೇಲ್‌ ಜೆಟ್‌ಗಳನ್ನು ಅಂಬಾಲಾದಲ್ಲಿ ನಿಯೋಜಿಸಲಾಗಿತ್ತು.

ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಗೆ ಹ್ಯಾಮರ್‌ ಕ್ಷಿಪಣಿಯನ್ನೂ (ಹೈಲಿ ಅಗೈಲ್‌ ಮಾಡ್ಯುಲರ್‌ ಮ್ಯುನಿಷನ್‌ ಎಕ್ಸ್ಟೆಂಡೆಡ್‌ ರೇಂಜ್‌) ಬಳಸಲಾಗಿತ್ತು. ಇದನ್ನು ಫ್ರಾನ್‌್ಸನ ರಕ್ಷಣಾ ಕಂಪನಿ ಸಾಫ್ರಾನ್‌ ತಯಾರಿಸಿದೆ. ಇದು ಮಧ್ಯಮ ವ್ಯಾಪ್ತಿಯ ಕ್ಷಿಪಣಿಯಾಗಿದೆ. ಈ ಕ್ಷಿಪಣಿಯನ್ನು ಆಕಾಶದಿಂದ ನೆಲದ ಗುರಿಯತ್ತ ಹಾರಿಸಬಹುದಾಗಿದೆ. 2020 ರಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ಸಮಯದಲ್ಲಿ ಭಾರತವು ರಫೇಲ್‌ ಜೆಟ್‌ಗಳಿಗಾಗಿ ಈ ಶಸಾ್ತ್ರಸ್ತ್ರವನ್ನು ಖರೀದಿಸಿತ್ತು.

ಈ ಕ್ಷಿಪಣಿ 20 ರಿಂದ 70 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಲ್ಲದು. ಕ್ಷಿಪಣಿಯ ವ್ಯಾಪ್ತಿಯು ಹೆಚ್ಚಾಗಿ ಅದರ ಉಡಾವಣೆ ಮತ್ತು ಗುರಿಯನ್ನು ಅವಲಂಬಿಸಿರುತ್ತದೆ. ಈ ಕ್ಷಿಪಣಿ ವಿವಿಧ ಗಾತ್ರಗಳು ಮತ್ತು ತೂಕಗಳಲ್ಲಿ ಲಭ್ಯವಿದೆ. ಇದು 125 ಕೆಜಿಯಿಂದ 1000 ಕೆಜಿ ವರೆಗೆ ಇರಬಹುದು.

ಹ್ಯಾಮರ್‌ ಕ್ಷಿಪಣಿಯು ಜಿಪಿಎಸ್‌‍ ಅನ್ನು ಹೊಂದಿದ್ದು ನಿಖರವಾಗಿ ದೂರದ ಗುರಿಯನ್ನು ತಲುಪಬಲ್ಲದು. ಈ ಕ್ಷಿಪಣಿಯು ಲೇಸರ್‌ ಗೈಡ್‌ಲೈನ್‌ ಸಹ ಹೊಂದಿದ್ದು, ನಿಖರವಾದ ಗುರಿಯನ್ನು ತಲುಪಲು ಸುಲಭವಾಗುತ್ತದೆ. ಈ ಕ್ಷಿಪಣಿಯು ಎಲೆಕ್ಟ್ರಾನಿಕ್‌ ಜಾಮರ್‌ ಅನ್ನು ಸುಲಭವಾಗಿ ತಡೆದು ಕಡಿಮೆ ಎತ್ತರದಲ್ಲಿ ಮತ್ತು ಪರ್ವತ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ದಾಳಿ ನಡೆಸಬಲ್ಲದು.

ಕಾಮಿಕೇಜ್‌ ಡೋನ್‌ಗಳ ವಿಶೇಷವೇನು? :
ಆಪರೇಷನ್‌ ಸಿಂಧೂರ್‌ನಲ್ಲಿ ಆತಹತ್ಯಾ ಡೋನ್‌ ಅಥವಾ ಕಾಮಿಕೇಜ್‌ ಡೋನ್‌ಗಳ್ನೂ ಬಳಸಲಾಗಿತ್ತು. ಇವು ಮಾನವರಹಿತ ವೈಮಾನಿಕ ಶಸಾ್ತ್ರಸ್ತ್ರಗಳಾಗಿವೆ. ಇವುಗಳ ವಿಶೇಷತೆಯೆಂದರೆ, ಗುರಿಗಿಂತ ಮೇಲಿರುವ ಆಕಾಶದಲ್ಲಿ ಸುಳಿದಾಡುತ್ತಲೇ ಇದ್ದು, ಆದೇಶ ಬಂದ ಕೂಡಲೇ ಶತ್ರುಗಳ ಅಡಗುತಾಣವನ್ನು ನಾಶಮಾಡುತ್ತವೆ. ಇವುಗಳು ನಿಖರತೆಗೆ ಹೆಸರುವಾಸಿಯಾಗಿವೆ. ಈ ಆತಹತ್ಯಾ ಡೋನ್‌ಗಳ ಗಾತ್ರ, ಪೇಲೋಡ್‌ ಮತ್ತು ಸಿಡಿತಲೆಗಳಲ್ಲಿ ವ್ಯತ್ಯಾಸಗಳಿವೆ.

ಈ ಡೋನ್‌ಗಳು ಏಕ-ಬಳಕೆಯ ಯುದ್ಧ ಸಾಮಗ್ರಿಗಳಾಗಿದ್ದು, ಗುರಿಯ ಮೇಲೆ ಸ್ಫೋಟಗೊಂಡು ಅದನ್ನು ನಾಶಮಾಡುತ್ತವೆ. ಹೀಗಾಗಿ ಆತಹತ್ಯಾ ಡೋನ್‌ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಮೊದಲು 1980 ರ ದಶಕದಲ್ಲಿ ಬಳಸಲಾಯಿತು. ಆದರೆ 1990 ಮತ್ತು 2000 ರ ದಶಕಗಳಲ್ಲಿ ಅವುಗಳ ಬಳಕೆ ಹೆಚ್ಚಾಯಿತು.

ಜಮು ಮತ್ತು ಕಾಶೀರದ ಅನಂತ್‌ನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನ ಉಗ್ರ ತಾಣಗಳ ವಿರುದ್ಧ ಆಪರೇಷನ್‌ ಸಿಂಧೂರ್‌ ಸೇನಾ ಕಾರ್ಯಾಚರಣೆ ನಡೆಸಿದೆ. ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶೀರದಲ್ಲಿ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ.

RELATED ARTICLES

Latest News