Thursday, July 4, 2024
Homeರಾಜ್ಯಮೋದಿ ಸಂಪುಟದಲ್ಲಿ ಹೆಚ್‌ಡಿಕೆ, ಜೋಶಿ, ಶೋಭಾ, ಸೋಮಣ್ಣ!

ಮೋದಿ ಸಂಪುಟದಲ್ಲಿ ಹೆಚ್‌ಡಿಕೆ, ಜೋಶಿ, ಶೋಭಾ, ಸೋಮಣ್ಣ!

ಬೆಂಗಳೂರು,ಜೂ.9- ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸುವುದ ರೊಂದಿಗೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಇಂದಿನಿಂದ ವಿದ್ಯುಕ್ತವಾಗಿ ಅಧಿಕಾರಕ್ಕೆ ಬರಲಿದೆ.
ಇಂದು ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆಯುವ ವರ್ಣರಂಜಿತ ಐತಿಹಾಸಿಕ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.

ಪಂಡಿತ್ ಜವಹರಲಾಲ್ ನೆಹರೂ ನಂತರ ಸತತವಾಗಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕಾಂಗ್ರೆಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿಯವರು ಪಾತ್ರರಾಗಲಿದ್ದಾರೆ. ಪ್ರಧಾನಿಯವರೊಂದಿಗೆ 30ಕ್ಕೂ ಹೆಚ್ಚು ಸಚಿವರು ಅಧಿಕಾರ ಸ್ವೀಕರಿಸಲಿದ್ದು, 2014 ಹಾಗೂ 2019 ರಲ್ಲಿ ಸ್ವಂತಬಲದ ಮೇಲೆ ಅಧಿಕಾರ ಗದ್ದುಗೆ ನಡೆಸಿದ್ದ ಬಿಜೆಪಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಧರ್ಮವನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ.

ಎನ್‍ಡಿಎ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ, ಜೆಡಿಎಸ್, ಎಚ್‍ಎಎಂ, ಅಪ್ನಾ ದಳ, ಶಿವಸೇನೆ, ಆರ್‍ಎಲ್‍ಡಿ ಸೇರಿದಂತೆ ಮೈತ್ರಿಪಕ್ಷಗಳಿಗೂ ಸಂಪುಟದಲ್ಲಿ ಸಿಂಹಪಾಲು ಸಿಗಲಿದೆ. ಕೇಂದ್ರದ ಪ್ರಮುಖ ಖಾತೆಗಳಾದ ಗೃಹ, ವಿದೇಶಾಂಗ ವ್ಯವಹಾರ, ಹಣಕಾಸು, ರೈಲ್ವೆ, ಸಾರಿಗೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಹಲವು ಖಾತೆಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಳ್ಳಲಿದೆ. ಕರ್ನಾಕಟದಿಂದ ಪ್ರಹ್ಲಾದ್ ಜೋಶಿ-ಧಾರವಾಡ, ಎಚ್.ಡಿ.ಕುಮಾರಸ್ವಾಮಿ-ಮಂಡ್ಯ, ಶೋಭಾ ಕರಂದ್ಲಾಜೆ-ಬೆಂಗಳೂರು ಉತ್ತರ ಅವರುಗಳಿಗೆ ಪ್ರಮಾಣ ವಚನ ಸ್ವೀಕರಿಸಲು ಪ್ರಧಾನಿ ಕಾರ್ಯಾಲಯದಿಂದ ಸೂಚನೆ ಬಂದಿದೆ.

ಆದರೆ ವೀರಶೈವ ಲಿಂಗಾಯತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಅವರ ಹೆಸರುಗಳು ಕೇಳಿ ಬಂದಿವೆ.
ಎನ್‍ಡಿಎ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ, ಶಿವಸೇನೆ, ಆರ್‍ಎಲ್‍ಡಿ, ಅಪ್ನಾದಳ್, ಎಲ್‍ಜೆಪಿ ಪಕ್ಷಗಳಿಗೆ ಸಂಪುಟದಲ್ಲಿ ಒಂದು ಸಂಪುಟ ದರ್ಜೆ ಹಾಗೂ ಒಂದು ರಾಜ್ಯಖಾತೆ ಲಭಿಸಲಿದೆ.

ಮೋದಿಯವರ ಸಂಪುಟಕ್ಕೆ ಕಳೆದ ಬಾರಿ ಸಚಿವರಾಗಿದ್ದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಜಯಶಂಕರ್, ಅರ್ಜುನ್ ಮೇಗರ್‍ವಾಲ್, ಜ್ಯೋತಿರಾಧ್ಯ ಸಿಂಧ್ಯಾ, ಕಿಶನ್ ರೆಡ್ಡಿ, ಸಂಜಯ್ ಬಂಡಿ, ಸುರೇಶ್ ಗೋಪಿ, ಶಿವರಾಜ್ ಸಿಂಗ್ ಚೌವ್ಹಾಣ್, ಸ್ವರ್ಬಾನಂದ್ ಸೋನಾವಾಲ್, ಕೆ.ಅಣ್ಣಮಲೆ, ಮನೋಹರ್‍ಲಾಲ್ ಕಟ್ಟರ್, ಧಮೇಂದ್ರ ಪ್ರಧಾನ್, ಮಾಲ್ಸುಕ್ ಮಾಂಡವಿಯ, ಪುರಂದರೇಶ್ವರಿ, ಕಿರಣ್ ರಿಜ್ಸುಜು, ಅಶ್ವಿನಿ ವೈಷ್ಣವ್, ಕಮಲ್‍ದೀಪ್ ಶರಾವತ್, ರಾವ್ ಇಂದ್ರಜಿತ್ ಸಿಂಗ್, ಜಿತಿನ್, ಹರ್ಜಿತ್ ಸಿಂಗ್, ಗಿರಿದತ್‍ಸಿಂಗ್ ಸೇರಿದಂತೆ ಮತ್ತಿತರರು ಬಿಜೆಪಿಯಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಟಿಡಿಪಿ ವತಿಯಿಂದ ಕೇಂದ್ರದ ಮಾಜಿ ಸಚಿವ ದಿ.ಎರ್ರಂನಾಯ್ಡು ಅವರ ಪುತ್ರ ರಾಮಮೋಹನ್ ನಾಯ್ಡು ಕಿಂಗ್‍ಜರಪು ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ದೇಶದಲ್ಲೇ ಅತ್ಯಂತ ಕಿರಿ ವಯಸ್ಸಿನ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಜೊತೆಗೆ ದೇಶದಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಚಂದ್ರಶೇಖರ್ ಪೆಮ್ಮಸಾನಿ ಅವರಿಗೆ ರಾಜ್ಯಖಾತೆ ಲಭಿಸಲಿದೆ. ಅಲ್ಲದೆ, ರಾಮ್‍ಮೋಹನ್ ನಾಯ್ಡು ಕೂಡ ಸಂಪುಟಕ್ಕೆ ಸೇರಿಕೊಳ್ಳುವ ಸಾಧ್ಯತೆಯಿದೆ.
ಬಿಹಾರದಿಂದ ಜೆಡಿಯುನ ಲಾಲನ್‍ಸಿಂಗ್, ಪ್ರತಾಪ್‍ರಾವ್ ಜಾದವ್, ಎಚ್‍ಎಎಂನ ಜಿತಿನ್ ರಾಮ್‍ಮಾಂಜಿ, ಅಪ್ನಾದಳ್‍ನ ಅನುಪ್ರಿಯಾ ಪಟೇಲ್, ಆರ್‍ಎಲ್‍ಡಿಯ ಜಯಂತ್ ಚೌಧರಿ, ಶಿವಸೇನೆಯ ಪ್ರಪುಲ್ ಪಟೇಲ್, ಎಲ್‍ಜೆಪಿಯ ಚಿರಾಗ್ ಪಾಸ್ವಾನ್ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವನೀಯ ಪಟ್ಟಿಯಲ್ಲಿದ್ದಾರೆ.
ಈ ಬಾರಿ ಮಿತ್ರಪಕ್ಷಗಳಿಗೆ ಸಂಪುಟದಲ್ಲಿ ಸ್ಥಾನಮಾನ ಕಲ್ಪಿಸಬೇಕಾಗಿರುವುರಿಂದ ಬಿಜೆಪಿ ಕೆಲವರಿಗೆ ಸ್ಥಾನ ತ್ಯಾಗ ಮಾಡುವಂತೆ ಸೂಚನೆ ನೀಡಿದೆ. ಮೋದಿಯವರು ಪ್ರದೇಶವಾರು, ಜಾತಿ, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಅನುಭವ, ಹಿರಿತನ, ಶೈಕ್ಷಣಿಕ ಹಿನ್ನೆಲೆ ಮತ್ತಿತರ ಅಂಶಗಳ ಮೇಲೆ ಸಂಪುಟಕ್ಕೆ ತೆಗೆದುಕೊಂಡಿದ್ದಾರೆ.

ಯಾರೆಗೆಲ್ಲ ಆಹ್ವಾನ..?:
ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರು, ಸೆಂಟ್ರಲ್ ವಿಸ್ತಾ ಯೋಜನೆ, ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಮಿಕರು, ತೃತೀಯ ಲಿಂಗಿಗಳು, ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳು, ಉತ್ತರಾಖಂಡ್ ಗಣಿ ಕಾರ್ಮಿಕರ ರಕ್ಷಿಸಿದ ತಂಡ, ವಂದೇ ಭಾರತ್, ಮೆಟ್ರೋದಂಥ ರೈಲ್ವೆ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು, ಎಲ್ಲಾ ಧರ್ಮಗಳ 50 ಧರ್ಮ ಗುರುಗಳಿಗೂ ಜೊತೆಗೆ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಪುರಸ್ಕøತರಿಗೆ, ವಿಕಸಿತ ಭಾರತ್ ಅಂಬಾಸಿಡರ್‍ಗಳು ಹಾಗೂ ಆದಿವಾಸಿ ಮಹಿಳೆಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು.

ವಿದೇಶಿ ಗಣ್ಯರು :
ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಸೀಷೆಲ್ಸ ಅಧ್ಯಕ್ಷ ವಾವೆಲ್ ರಾಮ್ಕಾಲಾವನ್, ಭೂತಾನ್ ಪ್ರಧಾನಿ ತ್ಶೆರಿಂಗ್ ತೋಗ್ಬೆ, ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್, ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಹಾಗೂ ಮಾಲ್ಡಿವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜುಗೆ ಆಹ್ವಾನ ನೀಡಲಾಗಿತ್ತು.

ಬಿಗಿಭದ್ರತೆ :
ಮೋದಿ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ದೆಹಲಿ ಪೊಲೀಸರು 5 ಹಂತದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಅರೆಸೈನಿಕ ಸಿಬ್ಬಂದಿ, ಎನ್‍ಎಸ್ಜಿ ಕಮಾಂಡೋಗಳು, ಡ್ರೋನ್‍ಗಳು, ಸ್ನೈಪರ್‍ಗಳು ಸೇರಿ ಬಹು ಹಂತದ ಭದ್ರತೆ ಕೈಗೊಳ್ಳಲಾಗಿತ್ತು.

ರಾಷ್ಟ್ರಪತಿ ಭವನದ ಒಳಗೆ ಹಾಗೂ ಹೊರಗೆ 3 ಹಂತದಲ್ಲಿ ಭದ್ರತೆ ನೀಡಲಾಗಿತ್ತು. 5 ಕಂಪನಿಗಳ ಅರೆಸೇನಾಪಡೆ, ದೆಹಲಿ ಸಶಸ್ತ್ರ ಪೊಲೀಸ್ ಹೀಗೆ ಭದ್ರತೆಗಾಗಿ 2,500 ಪೆÇಲೀಸರ ಸುತ್ತಲೂ ನೇಮಕ ಮಾಡಲಾಗಿದೆ. ಗಣ್ಯರ ಮಾರ್ಗದಲ್ಲಿ ಸ್ನೈಪರ್‍ಗಳು, ಶಸ್ತ್ರಸಜ್ಜಿತ ಪೆÇಲೀಸರನ್ನು ನಿಯೋಜನೆ ಮಾಡಲಾಗಿದೆ. ವಿದೇಶಿ ಗಣ್ಯರು ಉಳಿಯುವ ಲೀಲಾ, ತಾಜ್, ಐಟಿಸಿ ಮರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್‍ಗಳಲ್ಲೂ ಜಿ-20 ಮಾದರಿಯಲ್ಲೇ ವಿಶೇಷ ಭದ್ರತೆ ನಿಯೋಜನೆ ಮಾಡಲಾಗಿತ್ತು.

RELATED ARTICLES

Latest News