ನವದೆಹಲಿ,ನ.26-ಭಯೋತ್ಪಾದನೆ ವಿರುದ್ಧದ ನರೇಂದ್ರ ಮೋದಿ ಸರಕಾರದ ಶೂನ್ಯ ಸಹಿಷ್ಣುತೆ ನೀತಿಯನ್ನು ಇಡೀ ವಿಶ್ವವೇ ಮೆಚ್ಚಿದೆ ಮತ್ತು ಭಯೋತ್ಪಾದನಾ ವಿರೋಧಿ ಉಪಕ್ರಮಗಳಲ್ಲಿ ಭಾರತವು ವಿಶ್ವ ನಾಯಕನಾಗಿ ಹೊರಹೊಮಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮುಂಬೈ ಉಗ್ರರ ದಾಳಿಯಲ್ಲಿ ಹುತಾತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿ. ಹೇಡಿ ಭಯೋತ್ಪಾದಕರು 2008 ರಲ್ಲಿ ಇದೇ ದಿನ ಮುಂಬೈನಲ್ಲಿ ಅಮಾಯಕರನ್ನು ಕೊಂದು ಮಾನವೀಯತೆಯನ್ನು ನಾಚಿಕೆಪಡಿಸಿದರು ಎಂದು ಶಾ ಹೇಳಿದರು.
26/11 ಮುಂಬೈ ದಾಳಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತರಾದ ಸೈನಿಕರಿಗೆ ಮತ್ತು ಪ್ರಾಣ ಕಳೆದುಕೊಂಡವರಿಗೆ ನಾನು ನನ್ನ ಭಾವನಾತಕ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಮಧ್ಯಮ ಜಾಲದಲ್ಲಿ ಪೋಸ್ಟ್ ಮಾಡಿದ್ದಾರೆ.
ಭಯೋತ್ಪಾದನೆಯು ಇಡೀ ಮಾನವ ನಾಗರಿಕತೆಯ ಮೇಲೆ ಒಂದು ಕಳಂಕವಾಗಿದೆ ಮತ್ತು ಭಯೋತ್ಪಾದನೆಯ ವಿರುದ್ಧ ಮೋದಿ ಸರ್ಕಾರ ಭಯೋತ್ಪಾದನೆ ನಿಗ್ರಹಕ್ಕೆ ಮುಂದಾಗಿದೆ ಇದೇ ದಿನ ಕಳೆದ ನವೆಂಬರ್ 26, 2008 ರಂದು ಮುಂಬೈನಲ್ಲಿ ಪಾಕಿಸ್ತಾನದ ಹತ್ತು ಭಯೋತ್ಪಾದಕರು ಭಾರತದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯನ್ನು ನಡೆಸಿದರು.ಘಟನೆಯಲ್ಲಿ 166 ಜನರು ಜೀವ ಕಳೆದುಕೊಂಡಿದ್ದರು.