Wednesday, July 3, 2024
Homeರಾಷ್ಟ್ರೀಯಎನ್‌ಡಿಎಗೆ 296 ಸ್ಥಾನ ಸಾಧ್ಯತೆ, 3ನೇ ಬಾರಿಗೆ ಮೋದಿಗೆ ಪಿಎಂ ಪಟ್ಟ ಗ್ಯಾರಂಟಿ

ಎನ್‌ಡಿಎಗೆ 296 ಸ್ಥಾನ ಸಾಧ್ಯತೆ, 3ನೇ ಬಾರಿಗೆ ಮೋದಿಗೆ ಪಿಎಂ ಪಟ್ಟ ಗ್ಯಾರಂಟಿ

ನವದೆಹಲಿ, ಜೂ.4 (ಪಿಟಿಐ) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತತ್ವದ ಎನ್‌ಡಿಎ ಒಕ್ಕೂಟ 296 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಪ್ರಬಲ ಪೈಪೋಟಿ ನೀಡಿರುವ ಪ್ರತಿಪಕ್ಷ ಇಂಡಿ ಬಣ 227 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾದ್ಯತೆ ಇದ್ದರೂ ಮೋದಿ ಮತ್ತೊಮೆ ಪ್ರಧಾನಿಯಾಗುವುದು ಬಹುತೇಕ ಖಚಿತಪಟ್ಟಿದೆ. ಬಿಜೆಪಿ 542 ಸ್ಥಾನಗಳಲ್ಲಿ 236 ರಲ್ಲಿ ಮುಂದಿದ್ದರೆ, ಕಾಂಗ್ರೆಸ್‌‍ 97 ರಲ್ಲಿ ಮುನ್ನಡೆ ಸಾಧಿಸಿರುವುದು ಬಿಜೆಪಿಗೆ ಆಘಾತ ತರಿಸಿದೆ.

ಕಳೆದ ಚುನಾವಣೆಯಲ್ಲಿ 303 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಕೇವಲ 236 ಸ್ಥಾನಗಳಲಷ್ಟೆ ಗೆಲ್ಲುವ ಸಾಧ್ಯತೆಗಳಿವೆ. ಆದರೆ, ಕಾಂಗ್ರೆಸ್‌‍ ಈ ಬಾರಿ ನೂರರ ಸಮೀಪ ಬಂದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಬಿಜೆಪಿ ಭದ್ರಕೋಟೆಯಾಗಿರುವ ಉತ್ತರಪ್ರದೇಶದಲ್ಲಿ ಕಳೆದ ಬಾರಿ 62 ಸ್ಥಾನ ಪಡೆದುಕೊಂಡಿದ್ದ ಕೇಸರಿ ಪಡೆ ಈ ಬಾರಿ ಕೇವಲ 36 ಸ್ಥಾನಗಳಲ್ಲಿ ಮಾತ್ರ ಮುಂದಿದೆ. ಇಂಡಿ ಒಕ್ಕೂಟದ ಸಮಾಜವಾದಿ ಪಕ್ಷವು 33 ಸ್ಥಾನ ಗೆಲ್ಲುವ ನಿರೀಕ್ಷೆ ಇದ್ದು, ಕಳೆದ ಬಾರಿ ಶೂನ್ಯ ಸಂಪಾದನೆ ಮಾಡಿದ್ದ ಕಾಂಗ್ರೆಸ್‌‍ ಈ ಬಾಇ ಎಂಟು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳಿವೆ.

ಮೂರನೇ ಅವಧಿಗೆ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಅವರ ದಾಖಲೆಯನ್ನು ಸರಿಗಟ್ಟಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟ್ಟಿ ಹಾಕಲು ಇಂಡಿ ಒಕ್ಕೂಟದ ಸದಸ್ಯರು ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

ನೆರೆಯ ಬಿಹಾರದಲ್ಲಿ, ಬಿಜೆಪಿ ಮತ್ತು ಜೆಡಿಯು ಮಿತ್ರಪಕ್ಷಗಳು 25 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಿದೆ ಬಿಜೆಪಿ 11ಹಾಗೂ ಜೆಡಿಯು 14 ರಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳಿವೆ.ಮಹಾರಾಷ್ಟ್ರದಲ್ಲಿ ಕಳೆದ ಚುನಾವಣೆಯಲ್ಲಿ 48 ಲೋಕಸಭಾ ಸ್ಥಾನಗಳನ್ನು ಹೊಂದಿದ್ದ ಶಿವಸೇನೆ ಈಗ ಇಬ್ಬಾಗವಾಗಿದೆ.

ಐದು ವರ್ಷಗಳ ಹಿಂದೆ 23 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 11 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಅದರ ಮಿತ್ರಪಕ್ಷ ಶಿವಸೇನೆ 6 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್‌‍ ಒಂದರಿಂದ 11 ಸ್ಥಾನಗಳಲ್ಲಿ ಮತ್ತು ಶಿವಸೇನೆ (ಯುಬಿಟಿ) 11 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತತ್ವದ ಟಿಡಿಪಿ 25ರಲ್ಲಿ 16, ಬಿಜೆಪಿ 3 ಮತ್ತು ವೈಎಸ್‌‍ಆರ್‌ಸಿಪಿ 4 ಸ್ಥಾನಗಳಲ್ಲಿ ಮುಂದಿದೆ. ಕೇರಳದಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ ಕಳೆದ ಬಾರಿ 15 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್‌‍ ವಯನಾಡ್‌ ಸೇರಿದಂತೆ 13 ಕ್ಷೇತ್ರಗಳಲ್ಲಿ ಮುಂದಿದ್ದರೆ, ಸಿಪಿಐ-ಎಂ ಒಂದರಲ್ಲಿ ಲಾಭ ಗಳಿಸಿದೆ.

ತಮಿಳುನಾಡು ಕೇಸರಿ ಪಕ್ಷ ಖಾತೆ ತೆರೆಯುವುದು ಅನುಮಾನವಾಗಿದೆ. ಆಡಳಿತಾರೂಢ ಡಿಎಂಕೆ 20ರಲ್ಲಿ ಮತ್ತು ಕಾಂಗ್ರೆಸ್‌‍ ಎಂಟರಲ್ಲಿ ಮುಂಚೂಣಿಯಲ್ಲಿವೆ. ಫಲಿತಾಂಶಗಳು ಬಿಜೆಪಿ ಊಹಿಸಿದಕ್ಕಿಂತ ಕಡಿಮೆ ಸ್ಥಾನಗಳು ಬಂದಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Latest News