ದೆಹಲಿ, ಮಾ.19- ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಭರವಸೆಗಳು 2004ರ ಇಂಡಿಯಾ ಶೈನಿಂಗ್ ಎಂಬ ಘೋಷ ವಾಖ್ಯದಂತೆ ಹುಸಿಯಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ. ದೆಹಲಿಯಲ್ಲಿಂದು ನಡೆದ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆರಂಭದಲ್ಲಿ ಮಾತ ನಾಡಿದ ಅವರು, ಪ್ರಸ್ತುತ ಸರ್ಕಾರ ಪ್ರಸ್ತುತಪಡಿಸುತ್ತಿರುವ ಖಾತರಿಗಳು 2004 ರ ಇಂಡಿಯಾ ಶೈನಿಂಗ್ ಸ್ಲೋಗನ್ನಂತೆ ಪೊಳ್ಳಾಗಿದೆ. ನಮ್ಮ ಪ್ರಣಾಳಿಕೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಪ್ರಚಾರವನ್ನು ಪಡೆಯು ತ್ತಿದೆ ಮತ್ತು ನಮ್ಮ ಬದ್ಧತೆಯನ್ನು ದೇಶಾದ್ಯಂತದ ಪ್ರತಿ ಮನೆಗಳಿಗೆ ಮತ್ತು ದೊಡ್ಡ ಜನರಿಗೆ ತಲುಪಿಸ ಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆ ತಯಾರಿಕೆಯನ್ನು ಅಕಾಡೆಮಿಕ್ ಚರ್ಚೆಗೆ ಸೀಮಿತಗೊಳಿಸದೆ, ಸಾರ್ವ ಜನಿಕರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ರೂಪಿಸಿರು ವುದು ಹೆಗ್ಗಳಿಕೆಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕವಾದ ಸಮಾಲೋಚನೆಗಳನ್ನು ನಡೆಸ ಲಾಗಿದೆ. ಅಂತಿಮವಾಗಿ ಮಾ.6 ರಂದು ಸಮಿತಿ ಅಧ್ಯಕ್ಷ ಪಿ.ಚಿದಂಬರಂ ಕರಡು ಪ್ರಣಾಳಿಕೆಯನ್ನು ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಅವಾಜ್ ಭಾರತ್ ಕಿ ಅಭಿಯಾನದ ಮೂಲಕ ಆನ್ಲೈನ್ ವೆಬ್ಸೈಟ್ನ ಮೂಲಕವೂ ಸಲಹೆಗಳು ಮತ್ತು ಕಾಮೆಂಟ್ಗಳನ್ನು ಪಡೆಯಲಾಗಿದೆ. ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಲಾಗಿದೆ, ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡುವ ಮೊದಲು, ಈ ಭರವಸೆಗಳು ಕಾರ್ಯರೂಪಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ಆಳವಾದ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಪಕ್ಷದ ಮೊದಲ ಪ್ರಣಾಳಿಕೆಯನ್ನು ಪಂಡಿತ್ ಜವಾಹರಲಾಲ್ ನೆಹರು ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳನ್ನು ಈಡೇರಿಸುವ ಬದ್ಧತೆ ಹೊಂದಿದೆ. ಅದೇ ಕಾರಣದಿಂದ 1926 ರಿಂದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನಂಬಿಕೆ ಮತ್ತು ಬದ್ಧತೆಯ ಉದಾಹರಣೆಯಾಗಿದೆ ಎಂದು ಹೇಳಿದರು.
ಮಾ.16 ರಂದು ಮುಂಬೈನಲ್ಲಿ ಮುಕ್ತಾಯಗೊಂಡ 63 ದಿನಗಳ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡ ಖರ್ಗೆ ಅವರು, ಮುಂಬೈ ನಮಗೆ ಪ್ರಮುಖ ಸ್ಥಳವಾಗಿದೆ. ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡಿದ್ದೆ ಅಲ್ಲಿ ಎಂದರು.ಭಾರತ್ ಜೋಡೋ ಮತ್ತು ಭಾರತ್ ನ್ಯಾಯ ಯಾತ್ರೆಗಳು ಕೇವಲ ರಾಜಕೀಯಕ್ಕೆ ಸೀಮಿತವಾಗಿರಲಿಲ್ಲ. ಐತಿಹಾಸಿಕವಾದ ದೊಡ್ಡ ಜನಸಂಪರ್ಕ ಆಂದೋಲನಗಳಾಗಿವೆ. ಜನರ ಸಮಸ್ಯೆಯನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿವೆ. ಯಾತ್ರೆಯ ಸಂದರ್ಭದಲ್ಲಿ, ನಾನು ಮತ್ತು ರಾಹುಲ್ ಇಬ್ಬರೂ ಹಲವಾರು ಸಾರ್ವಜನಿಕ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ್ದೇವೆ ಎಂದರು.
ಯಾತ್ರೆಯ ಐದು ಸ್ತಂಭಗಳಾದ ಕಿಸಾನ್ ನ್ಯಾಯ್, ಯುವ ನ್ಯಾಯ್, ನಾರಿ ನ್ಯಾಯ್, ಶ್ರಮಿಕ್ ನ್ಯಾಯ್ ಮತ್ತು ಹಿಸ್ಸೆದಾರಿ ನ್ಯಾಯ್ ಅಡಿಯಲ್ಲಿ ನಮ್ಮ ಖಾತರಿಗಳು ಮತ್ತು ಬದ್ಧತೆಗಳ ಬಗ್ಗೆ ಜನರಿಗೆ ವಿವರಿಸಿದ್ದೇವೆ. ಕಳೆದ ಎರಡು ತಿಂಗಳುಗಳಲ್ಲಿ, ಒಟ್ಟು 25 ಗ್ಯಾರಂಟಿಗಳು – 5 ನ್ಯಾಯ್ಗಳಿಗೆ ತಲಾ 5 ಗ್ಯಾರಂಟಿಗಳನ್ನು ಘೋಷಿಸ ಲಾಗಿದೆ.
ಈ ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಹೆಚ್ಚು ಚರ್ಚೆಗಳಾಗಿವೆ. ಮುಂದಿನ 5 ವರ್ಷಗಳಲ್ಲಿ ನಮ್ಮ ಆದ್ಯತೆಗಳು, ನೀತಿಗಳು ಮತ್ತು ಕಾರ್ಯಕ್ರಮಗಳು ಏನಾಗಲಿವೆ ಎಂಬುದನ್ನು ಚುನಾವಣೆ ಕಾಲಘಟ್ಟದಲ್ಲಿ ಜನರಿಗೆ ನಾವು ವಿವರಿಸಬೇಕಿದೆ ಎಂದರು.
ಪ್ರಣಾಳಿಕೆಯ ಕರಡು ಅಂಶಗಳ ಕುರಿತು ಚರ್ಚೆ ನಡೆಯಲಿದೆ. ಆ ನಂತರ ಸಭೆಯಲ್ಲಿ ನಡೆಯುವ ಚರ್ಚೆಯ ಅಂಶಗಳನ್ನು ಆಧರಿಸಿ ಪ್ರಣಾಳಿಕೆಯನ್ನು ಅಂತಿಮಗೊಳಿಸ ಲಾಗುತ್ತದೆ. ದೇಶದಲ್ಲಿ ಬದಲಾವಣೆಯ ಕಾಲ ಬಂದಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂ ಜಿ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ.ಚಿದಂಬರಂ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.